-->
ಹಸಿರು ಯೋಧರು - 6

ಹಸಿರು ಯೋಧರು - 6

                   ಜೂನ್ 5 ವಿಶ್ವ ಪರಿಸರ ದಿನ 
ಮಕ್ಕಳ ಹಸಿರ ಲೇಖನಮಾಲೆ 
ಮಕ್ಕಳ ಜಗಲಿಯ ಹಸಿರು ಯೋಧರುಆಶಯ ಬಿ.ಆರ್    9 ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲಾ ರಾಮಕುಂಜ . ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು ಪೇರಳ ಗಿಡ ಮತ್ತು ರಂಬುಟಾನ್

 ಪೇರಳ ಗಿಡ : ಇದೊಂದು ವಿಶೇಷ ಜಾತಿಯ ಸೀಡ್ ಲೇಸ್ ಹಣ್ಣಾಗಿದ್ದು ಒಳಭಾಗ ಕೆಂಪು ಬಣ್ಣದಿಂದ ಕೂಡಿದೆ ಎಂದು ತಿಳಿಸಿದರು. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂಬುದು ಇದರ ವಿಶೇಷತೆಯನ್ನು ತಿಳಿಸುತ್ತದೆ. ಕಡಿಮೆ ಕ್ಯಾಲೊರಿ, ದೇಹಕ್ಕೆ ವಿಟಮಿನ್ ‌ಒದಗಿಸುತ್ತದೆ.ಅತ್ಯಧಿಕ ಫೈಬರ್ ಅಂಶ, ದೇಹದ ಜೀರ್ಣಕ್ರಿಯೆ ಹೆಚ್ಚಿಸಿ ಮಲಬದ್ಧತೆ ನಿವಾರಿಸುತ್ತದೆ. ವಿಟಮಿನ್ ಸಿ,ವಿಟಮಿನ್ ಬಿ6 ಅಂಶ ಹೊಂದಿರುವ ಹಣ್ಣು, ಕಣ್ಣು ಪೊರೆಯುಂಟಾಗುವಿಕೆಯನ್ನು
ದೂರಮಾಡುತ್ತದೆ, ಮೆದುಳು ಚುರುಕಾಗುತ್ತದೆ. ಮದುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗದಂತೆ ತಡೆಗಟ್ಟುತ್ತದೆ.
  ರಂಬೂಟಾನ್ : ಅತೀ ಬೇಡಿಕೆಯ ಹಣ್ಣು .ಮಳೆ ಮತ್ತು ಹವಾಮಾನ ಈ ಬೆಳಗೆ ಸೂಕ್ತವಾಗಿದೆ. ಪ್ರೊಟೀನ್, ಕೊಬ್ಬು ,ಸುಣ್ಣ,ಮೆಗ್ನೀಸಿಯಂ, ರಂಜಕ,ಮ್ಯಾಂಗನೀಸ್, ಪೊಟಾಷಿಯಂ ನಿಯಾಸಿನ್ ಮುಂತಾದ ದೇಹಾರೋಗ್ಯಕ್ಕೆ ಅನುಕೂಲವಾದ ಬಿ ಮತ್ತು ಸಿ ಜೀವಸತ್ವಗಳಿವೆ. ವಿದೇಶಗಳಲ್ಲಿ ನೋವು ನಿವಾರಕವಾಗಿ ಇದರ ಬೀಜದ ಬಳಕೆಯಿದೆ. ನೀರು ಮತ್ತು ಸಾವಯವ ಗೊಬ್ಬರದಿಂದ ನಿರ್ವಹಣೆ ಮಾಡಲಾಗುತ್ತದೆ. ಹಿಂದೆ ನನ್ನ ಪ್ರಾಥಮಿಕ ಶಾಲೆಯಲ್ಲಿ ವಿತರಿಸಿದ ಸಾಗುವಾನಿ, ಹಲಸು, ಸೇವಂತಿಗೆ ಗಿಡಗಳು ಹಸಿರು - ಹಸಿರಾಗಿ ಬೆಳೆಯುತ್ತಿರುವ ಗಿಡಗಳ ನಡುವೆ ಈ ಸಲ ಈ ಎರಡುಗಳನ್ನು ಪೋಷಿಸುವ ಆಸಕ್ತಿ ನನ್ನಲ್ಲಿದೆ.


       

ಪ್ರಾಂಜಲಿ 3ನೇ ತರಗತಿ 
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಂಡಿಂಜೆ ಬೆಳ್ತಂಗಡಿ ತಾಲೂಕು 
ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಗರುಡಪಾತಳ
ಗರುಡ ಪಾತಳ ಇದರಲ್ಲಿ ಬಿಳಿ ಮತ್ತು ಕೆಂಪು ಎರಡು ಪ್ರಭೇದಗಳಿವೆ. ಇದರಲ್ಲಿ ಬಿಳಿ ಹೂವು ಗೊಂಚಲು ಗೊಂಚಲಾಗಿರುತ್ತದೆ ಇದರ ಹೂವು ಉದುರಿದ ನಂತರ ಇದರಲ್ಲಿ ಗೊಂಚಲು ಗೊಂಚಲಾಗಿ ಕಾಯಿಗಳಾಗುತ್ತವೆ. ಇದರ ಬೇರನ್ನು ಒಣ್ಣಗಿಸಿ ಪುಡಿಮಾಡಿ ಇದರ ಚೂರ್ಣವನ್ನು ಸೇವಿಸಿದರೆ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಹಾಗೂ ಹಳೆಯ ನೆನಪುಗಳು ಮರುಕಳಿಸಲು ಸಹಾಯವಾಗುತ್ತದೆ.  ಇದರ ಕಾಯಿಯ ಕಷಾಯ ಕುಡಿಯುವುದರಿಂದ ರಕ್ತದೊತ್ತಡ ನಿವಾರಣೆಯಾಗುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಗೊಳಿಸುತ್ತದೆ ಈ ಗಿಡವು ನೊಡಲು ಎಷ್ಟು ಸುಂದರವಾಗಿದೆಯೊ ಅಷ್ಟೇ ಔಷಧೀಯ ಗುಣಗಳನ್ನು ಹೊಂದಿದೆ. ಲಕ್ಷ್ಮಿ     10 ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ಬೊಕ್ಕಪಟ್ನ . ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
 ಗಿಡದ ಹೆಸರು : ತೆಂಗಿನ ಗಿಡ
ಪ್ರಜ್ಞೇಶ 
ಸರಕಾರಿ ಪ್ರೌಢಶಾಲೆ ಕೊಕ್ರಾಡಿ ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಕರಿಬೇವು      
ಕರಿಬೇವಿನ ಎಲೆಯನ್ನು ಒಗ್ಗರಣೆ ತಯಾರಿಸಲು ಉಪಯೋಗಿಸುತೇವೆ . ಕರಿಬೇವಿನ ಎಲೆ ಮತ್ತು ಒಂದೆಲಗದ ಎಲೆಯನ್ನು ಜಜ್ಜಿ ಅದರ ರಸವನ್ನು ತಲೆಗೆ ಹಾಕುವೂದರಿಂದ ತಲೆ ಹೊಟ್ಟು ಬೀಳುವುದು ಕಡಿಮೆಯಾಗುತ್ತದೆ. ಬೇವಿನ ಎಲೆಯ ಎಣ್ಣೆಯನ್ನು ತಯಾರಿಸಿ ತಲೆಗೆ ಹಾಕುವೂದರಿಂದ ತಲೆಕೂದಲು ಕಪ್ಪಾಗುತ್ತದೆ. 
                    ರೇಖಾ    8 ನೇ ತರಗತಿ 
ಸರಕಾರಿ ಪದವಿ ಪೂರ್ವ ಕಾಲೇಜು ಬೊಕ್ಕಪಟ್ನ . ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
 ಗಿಡದ ಹೆಸರು : ಮಾವಿನ ಗಿಡ
ಆಶ್ರೀತ್ ಎಸ್ ಶೆಟ್ಟಿ  5 ನೇ ತರಗತಿ
ಎಸ್. ವಿ .  ಎಸ್  ದೇವಳ ಶಾಲೆ ಬಂಟ್ವಾಳ
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತೆಂಗಿನಗಿಡ
ನಿಭಾ 8ನೇ ತರಗತಿ
ದ. ಕ. ಜಿ. ಪಂ. ಉ. ಹಿ. ಪ್ರಾ. ಶಾಲೆ ನೇರಳಕಟ್ಟೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ಬೇವಿನ ಗಿಡಶೋನ್ ಕ್ಯಾಸ್ತಲಿನೊ.  ತರಗತಿ : 5 
ಆವೆ ಮರಿಯಾ ಸ್ಕೂಲ್ ಫಜೀರ್.
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡಹೆಸರು : ಶ್ರಾವ್ಯ ತರಗತಿ : 9 ಶಾಲೆಯ ವಿಳಾಸ : ಸರಕಾರಿ ಪ್ರೌಢ ಶಾಲೆ ಹೊಸಬೆಟ್ಟು , ಮೂಡಬಿದ್ರಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ ಗಿಡದ ಹೆಸರು : ಕಬ್ಬುಗಿಡದ ಹೆಸರು : ಕಬ್ಬು
ವೈಜ್ಞಾನಿಕ ಹೆಸರು :ಸಸಾರಂ ಒಪಿಸಿನೇರಂ
ಕಬ್ಬಿನಲ್ಲಿರುವ ಪೋಷಕಾoಶಗಳು : ಪೋಟ್ಯಾಸಿಯo, ಸತು, ಕಬ್ಬಿಣ, ನಾರಿನoಶ
           ಕಬ್ಬು ಒಂದು ಹುಲ್ಲು ಜಾತಿಗೆ ಸೇರಿದ್ದು ಬಹು ವಾರ್ಷಿಕ ಬೆಳೆ. ಇದೊಂದು ವಾಣಿಜ್ಯ ಬೆಳೆಯು ಹೌದು. ಶೇಕಡಾ 75 ಕ್ಕಿಂತಲೂ ಹೆಚ್ಚಿನ ಪ್ರಮಾಣದ ಸಕ್ಕರೆಯು ಕಬ್ಬಿನಿಂದ ತಯಾರಾಗುತ್ತದೆ. ಇದು ಏಷ್ಯ ಖಂಡದ ಸ್ಥಳೀಯ ಸಸ್ಯವಾಗಿದೆ. ಭಾರತ ವಿಶ್ವದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ದೇಶ.ಯಶ್ವಿನಿ    4ನೇ ತರಗತಿ 
ಇನ್ಫೆಂಟ್ ಜೀಸಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೊಡಂಕಾಪು . ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡಯಶಸ್     8ನೇ ತರಗತಿ 
ದೀಪಿಕಾ ಪ್ರೌಢಶಾಲೆ ಮೊಡಂಕಾಪು  
ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ

 ಗಿಡದ ಹೆಸರು : ನಿಂಬೆಹಣ್ಣಿನ ಗಿಡ
ನಿಂಬೆ ಹಣ್ಣು ಬಹು ಉಪಯೋಗಿ ಫಲ. ಇತರೆ ಹಣ್ಣುಗಳಂತೆ ನೇರವಾಗಿ ಕಚ್ಚಿ ತಿನ್ನುವ ಫಲ ಇದಲ್ಲ. ಬಹುತೇಕ ಅಡುಗೆ ಮಾಡುವಾಗ ನಿಂಬೆಯ ಉಪಯೋಗ ಮಾಡುತ್ತೇವೆ.
ನಿಸರ್ಗ ನೀಡಿರುವ ಸಾವಿರಾರು ಫಲಗಳಲ್ಲಿ ನಿಂಬೆ ಹಣ್ಣಿಗೆ ವಿಶಿಷ್ಟ ಸ್ಥಾನವಿದೆ.
ಇದರ ವೈದ್ಯಕೀಯ ಗುಣಕ್ಕಾಗಿ ಬಹು ಹಿಂದಿನಿಂದಲೂ ನಿಂಬೆಹಣ್ಣಿನ ಉಪ್ಪಿನ ಕಾಯಿ ಸೇರಿದಂತೆ ವಿವಿಧ ಪದಾರ್ಥ ತಯಾರಿಸುವ ಪದ್ಧತಿಯಿದೆ.
ದೇವರ ಪೂಜೆಗೆ, ಅಡುಗೆ ತಯಾರಿಕೆಗೆ, ಶುಭ ಕಾರ್ಯಗಳಿಗೆ ಬಹುತೇಕ ಎಲ್ಲಾ ಕೆಲಸಗಳಿಗೂ ನಿಂಬೆ ಹಣ್ಣು ಬೇಕೇ ಬೇಕು. ಆರೋಗ್ಯ ವೃದ್ಧಿಯಲ್ಲಿ ನಿಂಬೆ ಹಣ್ಣು ಅತಿ ಪ್ರಮುಖ ಪಾತ್ರ ವಹಿಸುತ್ತದೆ.
Ads on article

Advertise in articles 1

advertising articles 2

Advertise under the article