ಹಸಿರು ಯೋಧರು - 5
Sunday, June 6, 2021
Edit
ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಸ ಹಿ ಪ್ರಾ ಶಾಲೆ ಅನಂತಾಡಿ ಬಂಟ್ಟಾಳ ತಾಲೂಕು, ದ.ಕ
ಗಿಡದ ಹೆಸರು : ಕಹಿಬೇವು
ಈ ಮರದ ಎಲ್ಲಾ ಭಾಗಗಳು ಔಷಧೀಯ ಗುಣವನ್ನು ಹೊಂದಿದೆ. ಸುಮಾರು 135 ಕ್ಕಿಂತ ಹೆಚ್ಚು ರೋಗ ನಿರೋಧಕ ಗುಣಗಳಿವೆ . ಇದನ್ನು ಪಶು ವೈದ್ಯಕೀಯ ಚಿಕಿತ್ಸೆ , ಕುಷ್ಠ , ಕಣ್ಣಿನ ತೊಂದರೆ, ಹೊಟ್ಟೆ ಹುಳು, ಕೆಮ್ಮು , ಉಬ್ಬಸ , ಫೈಲ್ಸ್ , ಮಧುಮೇಹ , ಕಾಮಾಲೆ , ಪ್ಲೇಗ್ , ಇಸುಬು , ಅಲ್ಸಾರ್ ಹಿಮ್ಮಡಿ ಕಾಲಿನ ಚಿಕಿತ್ಸೆ ಇತ್ಯಾದಿ ರೋಗಗಳಿಗೆ ಉಪಯೋಗಿಸುತ್ತಾರೆ.
ಆವೆ ಮರಿಯ ಸ್ಕೂಲ್ ಪಜೀರು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸದಾಪುಷ್ಪ
ಶ್ರೀಚೈತನ್ಯ ಟೆಕ್ನೋ ಸ್ಕೂಲ್ ಮಂಗಳೂರು
ಗಿಡದ ಹೆಸರು : ಸಾಗುವಾನಿ
ಸಾಗುವಾನಿಯ ಒಂದು ಹೂಬಿಡುವ ಸಸ್ಯವಾಗಿದ್ದು, ವೆರ್ಬೆನಾಸಿಯೆ ಕುಟುಂಬಕ್ಕೆ ಸೇರಿದೆ.ಇದು ಮಾನ್ಸೂನ್ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ . ಕರ್ನಾಟಕದ ದಾಂಡೇಲಿ, ಯಲ್ಲಾಪುರ ,ಕಾಕನಕೋಟೆ ,ಹುಣಸೂರು ಮುಂತಾದ ಪ್ರದೇಶಗಳು ಸಾಗುವಾನಿ ತೋಪುಗಳಿಗೆ ಪ್ರಖ್ಯಾತ.
ಸಾಗುವಾನಿ ಮರವನ್ನು ಗೃಹನಿರ್ಮಾಣಕ್ಕೆ , ಪೀಠೋಪಕರಣಗಳಿಗೆ, ಹಡಗು ಕಟ್ಟಲು, ಒಳಾಂಗಣ ಅಲಂಕಾರಕ್ಕೆ , ರೈಲ್ವೆ ಕೋಚು ಗಳ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತದೆ . ಇದರಿಂದ ತಯಾರಿಸಲಾದ ಎಣ್ಣೆಯನ್ನು ಚರ್ಮ ರೋಗದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ . ಇದರ ಎಲೆಯನ್ನು ಕರಾವಳಿ ಪ್ರದೇಶದಲ್ಲಿ ಹಲಸಿನ ಕಡುಬು ಮಾಡಲು ಉಪಯೋಗಿಸುತ್ತಾರೆ .
ಬಿ.ಎಂ.ಅ.ಹಿ.ಪ್ರಾ.ಶಾಲೆ ಮೂರೂರು, ಹಿರ್ಗಾನ,
ಕಾರ್ಕಳ ತಾಲೂಕು ಉಡುಪಿ ಜಿಲ್ಲೆ
ಗಿಡದ ಹೆಸರು : ಪಪ್ಪಾಯ
ಪರಂಗಿ ಕ್ಯಾರಿಕೇಸಿ ಕುಟುಂಬಕ್ಕೆ ಸೇರಿದ ಜನಪ್ರಿಯ ಫಲವ್ರಕ್ಷ(ಪಪ್ಪಾಯ). ಪರಂಗಿಹಣ್ಣು ಇದರ ಪರ್ಯಾಯನಾಮ. ಕ್ಯಾರಿಕ ಪಪ್ಪಾಯ ವೈಜ್ಞಾನಿಕ ಹೆಸರು. ಪಪ್ಪಾಯಿಯ ತವರು ದಕ್ಷಿಣ ಅಮೆರಿಕ ಮತ್ತು ವೆಸ್ಟ್ ಇಂಡೀಸ್ಗಳೆನ್ನಲಾಗಿದೆ.ಇದನ್ನು 16ನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದೇಶಕ್ಕೆ ತರಲಾಯಿತೆಂದು ಹೇಳಲಾಗಿದೆ. ಈಗ ಭಾರತದ ಎಲ್ಲಾ ರಾಜ್ಯಗಳಲ್ಲೂ ಇದರ ಬೇಸಾಯವುಂಟು ಪಪ್ಪಾಯಿಯಲ್ಲಿ ವಿಚಿತ್ರ ರೀತಿಯ ಲಿಂಗ ವ್ಯತ್ಯಾಸವನ್ನು ಕಾಣಬಹುದು. ಇದರಲ್ಲಿ ಹೂಗಳು ಹೆಣ್ಣು, ಗಂಡು ಮತ್ತು ದ್ವಿಲಿಂಗಿ ಹೀಗೆ ಮೂರು ತೆರನಾದವು. ಫಲದ ದೃಷ್ಟಿಯಿಂದ ಹೆಣ್ಣು ಹೂವು ಬಿಡುವ ಮರಗಳು ಶ್ರೇಷ್ಠ. ಹಾಗೂ ಪಪ್ಪಾಯಿಯು ಆರೋಗ್ಯಕ್ಕೆ ಉತ್ತಮ.
ಪರಿಜ್ಞಾನ ವಿದ್ಯಾಲಯ ಸೋಮೇಶ್ವರ ಕೋಟೆಕಾರು ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ತರಗತಿ 10 ನೇ ಆಂಗ್ಲ ಮಾಧ್ಯಮ.
ಶಾಲೆಯ ಹೆಸರು : ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು , ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು :ಗುಲಾಬಿ ಗಿಡ
ಗುಲಾಬಿ ಒಂದು ಹೂಬಿಡುವ ಪೊದೆಸಸ್ಯ. ಇದರ ಹೆಸರು ಲ್ಯಾಟಿನ್ ಪದ ರೋಸಾನಿಂದ ಬಂದಿದೆ. ಗುಲಾಬಿಯ ಹೂವುಗಳು ಪ್ರಸಿದ್ಧ ಕೆಂಪು ಗುಲಾಬಿ ಅಥವಾ ಹಳದಿ ಗುಲಾಬಿ ಮತ್ತು ಕೇಲವೊಮ್ಮೆ ಬಿಳಿ ಅಥವಾ ನೇರಳೆ ಗುಲಾಬಿಯಿಂದ ವಿವಿಧ ಬಣ್ಣಗಳಲ್ಲಿ ಬೆಳೆಯುತ್ತವೆ. ಗುಲಾಬಿಗಳು ರೋಸಾಸೀ ಎಂಬ ಸಸ್ಯಗಳ ಕುಟುಂಬಕ್ಕೆ ಸೇರಿವೆ. ಎಲ್ಲಾ ಗುಲಾಬಿಗಳು ಮೂಲತ: ಕಾಡು ಮತ್ತು ಅವು ವಿಶ್ವದ ಹಲವಾರು ಭಾಗಗಳಿಂದ ಬಂದವು. ಅದು ಸಮೃದ್ಧವಾದ ಔಷಧೀಯ ಗುಣಗಳನ್ನು ತನ್ನಲ್ಲಡಗಿಸಿಕೊಂಡಿದೆ.
ಸಂತ ಫಿಲೋಮಿನಾ ಶಾಲೆ ದರ್ಬೆ ಪುತ್ತೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಗೇರುಬೀಜದ ಸಸಿ
ಶಾಲೆಯ ವಿಳಾಸ- ಎಸ್.ವಿ.ಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾಣೆಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕರಿಬೇವಿನ ಗಿಡ
ಇದರ ಉಪಯೋಗಗಳು :
1) ಬಿಳಿ ಕೂದಲ ಸಮಸ್ಯೆಯನ್ನು ಕರಿಬೇವು ದೂರ ಮಾಡುತ್ತದೆ.
2) ಎಸಿಡಿಟಿ ಯನ್ನು ಕರಿಬೇವು ಕಡಿಮೆ ಮಾಡುತ್ತದೆ.
3) ಕರಿಬೇವಿನಲ್ಲಿ ವಾಯುಕಾರಕವನ್ನು ತೆಗೆದುಹಾಕುವ ಗುಣವಿದೆ.
4)ಭೇದಿ,ಆಮಶಂಕೆ ನಿವಾರಣೆಗೆ ಕರಿಬೇವು ಸಹಕಾರಿ.
5)ಬೊಜ್ಜು ಕರಗಿಸಲು ಕರಿಬೇವು ಸಹಕಾರಿ.
6)ಕರಿಬೇವು ಕಾಮಾಲೆ ರೋಗವನ್ನು ಗುಣಪಡಿಸುವ ಗುಣವನ್ನು ಹೊಂದಿದೆ.
7)ರಕ್ತಹೀನತೆಯ ನಿವಾರಣೆಗೆ ಕರಿಬೇವು ಸಹಕಾರಿ.
8)ಕರಿಬೇವು ಕೂದಲು ಉದುರುವುದನ್ನು ತಡೆಗಟ್ಟುತ್ತದೆ.
ಶಾಲೆಯ ವಿಳಾಸ- ಎಸ್.ವಿ.ಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾಣೆಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪೇರಳೆ ಗಿಡ
ಇದರ ಉಪಯೋಗಗಳು :
1) ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
2) ಅಸ್ತಮಾ ರೋಗವನ್ನು ಕಡಿಮೆಗೊಳಿಸುತ್ತದೆ.
3) ಹಲ್ಲುನೋವು,ಗಂಟಲು ನೋವು ಮತ್ತು ಒಸಡುಗಳಿಗೂ ಒಳ್ಳೆಯದು.
4) ಡೆಂಗ್ಯೂ ಜ್ವರಕ್ಕೂ ರಾಮಬಾಣವಾಗಿದೆ.
5) ಗಾಯಗಳು ಹಾಗೂ ನಂಜು ಬೇಗನೆ ಮಾಗುತ್ತದೆ.
6)ಮೊಡವೆ ಮತ್ತು ಕಪ್ಪು ಚುಕ್ಕೆಗಳ ನಿರ್ಮೂಲನ ಮಾಡುತ್ತದೆ.
7) ಉರಿಯೂತ ನಿವಾರಿಸುವ ಗುಣವಿದೆ.
8) ಕೂದಲು ಉದುರುವಿಕೆಯನ್ನು ತಡೆಗಟ್ಟುತ್ತದೆ.
ಎಸ್ ವಿ ಎಸ್ ದೇವಳ ಆಂಗ್ಲಮಾಧ್ಯಮ ಶಾಲೆ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ಏವ್ ಮಾರಿಯಾ ಶಾಲೆ ಫಜೀರ್
D/O ಸ್ಟೀಫೆನ್ ಲೋಬೊ
ಕುರ್ನಾಡ್ ಪೋಸ್ಟ್ ಬಂಟ್ವಾಳ ತಾಲ್ಲೂಕ್
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಡಿಕೆ ಗಿಡ