ಪಾಪದ ಕುದುರೆ ಮತ್ತು ಕೋಪದ ಕುದುರೆ - ಚಿತ್ರಕಥೆ 5
Sunday, June 13, 2021
Edit
ನಿನಾದ್ ಕೈರಂಗಳ 3 ನೇ ತರಗತಿ
ಪ್ರಗತಿ ಸ್ಕೂಲ್ ಕುಕ್ಕಾಜೆ , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಒಬ್ಬ ರೈತನ ಮನೆಯಲ್ಲಿ ಒಂದು ಪಾಪದ ಕುದುರೆ ಇತ್ತು . ಅದಕ್ಕೆ ಯಾವಾಗಲೂ ಹಸಿವಾಗುತಿತ್ತು. ಆದರೆ ರೈತ ಮಾತ್ರ ಅದಕ್ಕೆ ಹುಲ್ಲು ತಂದು ಹಾಕುತ್ತಾ ಇರಲಿಲ್ಲ. ಕುದುರೆಗೆ ಹಸಿವಿನಿಂದ ತಲೆ ಸುತ್ತುತ್ತಾ ಇರುತ್ತಿತ್ತು . ಒಂದು ದಿನ ರೈತನ ಮಗ ಕುದುರೆಗೆ ತಿನ್ನಲು ತುಂಬಾ ಹುಲ್ಲುಗಳನ್ನು ತಂದನು. ಆಗ ಕುದುರೆಗೆ ತುಂಬಾ ಖುಷಿಯಾಯಿತು.
ಇನ್ನೊಂದು ದಿನ ರೈತ ಕೋಪದ ಕುದುರೆಯನ್ನು ತಂದರು. ಆ ಕುದುರೆ ತುಂಬಾ ಜನಕೆ ತೊಂದರೆ ಮಾಡುತ್ತಿತ್ತು. ಒಂದು ದಿನ ರೈತನ ಮಗ ಪಾಪದ ಕುದುರೆಗೆ ತಿನ್ನಲು ಹುಲ್ಲನು ತಗೊಂಡು ಹೋಗುವಾಗ , ಕೋಪದ ಕುದುರೆ ರೈತನ ಮಗನಿಗೆ ಮೆಟ್ಟಿತು . ಇದನ್ನು ಪಾಪದ ಕುದುರೆ ನೋಡಿತು. ಆಗ ಪಾಪದ ಕುದುರೆಗೆ ಕೋಪ ಬಂದಿತು. ಇನ್ನೊಂದು ದಿನ ಕೋಪದ ಕುದುರೆ ಮತ್ತು ಪಾಪದ ಕುದುರೆ ಮೇಯಲು ಹೋಗುವಾಗ ಪಾಪದ ಕುದುರೆ ಕೋಪದ ಕುದುರೆಗೆ ಮೆಟ್ಟಿತು. ಕೋಪದ ಕುದುರೆ ಹೆದರಿ ಓಡಿ ಹೋಯಿತು .....!!!!
...........ನಿನಾದ್ ಕೈರಂಗಳ 3 ನೇ ತರಗತಿ
ಪ್ರಗತಿ ಸ್ಕೂಲ್ ಕುಕ್ಕಾಜೆ , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ