-->
ಹಸಿರು ಯೋಧರು - 4

ಹಸಿರು ಯೋಧರು - 4

ಜೂನ್ 5 ವಿಶ್ವ ಪರಿಸರ ದಿನ 
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು


ಹೆಸರು - ಧನೀಷ್  ತರಗತಿ - 10 thA
ಶಾಲೆಯ ವಿಳಾಸ - ವಿಠಲ ಪದವಿ ಪೂರ್ವ ಕಾಲೇಜು- ಪ್ರೌಢಶಾಲೆ ವಿಭಾಗ. ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನೇರಳೆ ಹಣ್ಣಿನ ಗಿಡ
             ನೇರಳೆ ಮರದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಕಾಣಸಿಗುವುದು ಅದು ಯಾವುದೆಂದರೆ. ಈ ಮರದಲ್ಲಿ ದೊರೆಯುವ ತೊಗಟೆಯಿಂದ ಕಷಾಯವನ್ನು ತಯಾರಿಸಿ ಕುಡಿದರೆ ದೇಹದಲ್ಲಿನ ಕೆಮ್ಮು ಸಂಬಂಧಿತ ಕಾಯಿಲೆಗಳು ಗುಣವಾಗುವುವು.ಮತ್ತು ಈ ಮರದಲ್ಲಿ ದೊರೆಯುವ ಹಣ್ಣಿನ    ಬೀಜವನ್ನು ಉಪಯೋಗಿಸಿ ಕೆಲವೊಂದು ಔಷಧಿಯನ್ನುತಯಾರಿಸುವರು ಹಾಗೂ ಈ ಮರದಲ್ಲಿ ದೊರಕುವ ನೇರಳೆ ಹಣ್ಣು ಕೂಡ ದೇಹಕ್ಕೆ ಬಹಳ ಒಳ್ಳೆಯದು. 




ಅನುಲಕ್ಷ್ಮಿ 9ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಮಲ್ಲಿಗೆ ಗಿಡ

 ನಮ್ಮ ಪರಿಸರದಲ್ಲಿ ಹಲವಾರು ತರಹೇವಾರಿ ಗಿಡಗಳಿವೆ. ಅದರಲ್ಲಿ ನಾನಿಂದು "ಸುಗಂಧದ ರಾಜ" ಎಂದು ಕರೆಯಲ್ಪಡುವ ಮಲ್ಲಿಗೆಯ
 ಗಿಡವನ್ನು ನೆಡುತ್ತಿದ್ದೇನೆ. ಇದು ಒಂದು ಸುವಾಸನೆಯುಕ್ತ ಹಾಗೂ ಆಕರ್ಷಕ ಗಿಡವಾಗಿದೆ. ಇದು ನಮ್ಮ ಮನೆಯ ಸೊಬಗನ್ನು ಹೆಚ್ಚಿಸುವ ಗಿಡವಾಗಿದೆ.
     ಮಲ್ಲಿಗೆ ಎಂದರೆ ಅದರ ಕಂಪಿಗೆ ಮನಸೋಲದವರೇ ಇಲ್ಲ.ಆದ್ದರಿಂದ ಇದು ಹೆಚ್ಚಾಗಿ ಎಲ್ಲರಿಗೂ ಅತ್ಯಂತ ಪ್ರಿಯವಾದ ಹೂವು.ಇದು ವಿವಿಧ ಹೆಸರು,ಹಾಗೂ ವಿಭಿನ್ನ ತರಹದ ಸುವಾಸನೆಯನ್ನು ಹೊಂದಿರುವ ಹೂವಾಗಿದೆ. ಇದನ್ನು ನಾವು ಮನೆಯ ಅಂಗಳದಲ್ಲಿ,ಹಿತ್ತಲಲ್ಲಿ,ಅಥವಾ ಆಸುಪಾಸಿನಲ್ಲಿ ನೆಡಬಹುದು. ಇದು ಬಳ್ಳಿ ಗಿಡವಾದ್ದರಿಂದ ಇದಕ್ಕೆ ಚಪ್ಪರವನ್ನು ಹಾಕುತ್ತಾರೆ. ಇಲ್ಲದಿದ್ದರೆ   
ಯಾವುದಾದರೂ ಮರಕ್ಕೆ ಹಬ್ಬುವಂತೆ ವ್ಯವಸ್ಥೆ ಮಾಡುತ್ತಾರೆ. ಇದನ್ನು ಹೆಚ್ಚಾಗಿ ಸೂರ್ಯನ ಬೆಳಕು ಹಾಗೂ ನೆರಳು ಇರುವ ಜಾಗದಲ್ಲಿ ನೆಡಬೇಕು. ಇದು 2-3 ವಾರಗಳಲ್ಲಿ ಚಿಗುರುತ್ತದೆ. ಅನಂತರ ಮೊಗ್ಗು ಅರಳುವ ಸಮಯದಲ್ಲಂತೂ ತುಂಬಾ ಸುವಾಸನೆಯಿಂದ ಕೂಡಿರುತ್ತದೆ. ಹಾಗೆಯೇ ಈ ಗಿಡವು ಹೆಚ್ಚು ಉಪಯುಕ್ತ ಹಾಗೂ ಪ್ರಯೋಜನಕಾರಿ ಹೂವಾಗಿದೆ. ಇದರಿಂದ ಔಷಧಗಳನ್ನು, ಅಲಂಕಾರ ಮಾಡಲು,ಹಾಗೂ ಮುಖ್ಯವಾಗಿ ದೇವರ ಪೂಜೆಗೆ ಉಪಯೋಗಿಸಲಾಗುತ್ತದೆ. ಅಷ್ಟೇ ಅಲ್ಲದೇ ಶ್ಯಾಂಪೂ, ಸುಗಂಧ ದ್ರವ್ಯ, ಸೌಂದರ್ಯ ವರ್ಧಕ ವಸ್ತುಗಳಿಗೆ ಈ ಒಂದು ಹೂವನ್ನು ವಿಶೇಷವಾಗಿ ಬಳಸುತ್ತಾರೆ. ಹಾಗೆಯೇ ಚೀನಾ ದೇಶದಲ್ಲಿ ಚಹಾದಲ್ಲಿ ಸುಗಂಧ ಬರಿಸಲು ಮಲ್ಲಿಗೆ ಹೂಗಳನ್ನು ಹಾಕಿ ಚಹಾ ತಯಾರಿಸುತ್ತಾರೆ. ಕಿವಿ ಮತ್ತು ಮೂಗಿನ ರೋಗಗಳಲ್ಲಿ ಮಲ್ಲಿಗೆಯಿಂದ ತಯಾರಿಸಿದ ತೈಲವನ್ನು ಉಪಯೋಗಿಸುತ್ತಾರೆ. ಇದು ಸ್ಥಳೀಯವಾಗಿ ಮಂಗಳೂರು, ಮುಂಬೈ, ಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.
    ಹೀಗೆ ನಾವು ಹೆಚ್ಚು ಹೆಚ್ಚು ಗಿಡಗಳನ್ನು ಉಳಿಸಿ ಬೆಳೆಸುತ್ತಾ ಪರಿಸರ ಸಂರಕ್ಷಣೆ ಮಾಡೋಣ.
ನಮ್ಮ ಮನೆಯ ಸುತ್ತಮುತ್ತಲೂ ಖಾಲಿ ಇರುವ ಜಾಗದಲ್ಲಿ ಗಿಡಗಳನ್ನು ನೆಟ್ಟು ಪೋಷಿಸೋಣ. ಪ್ರತಿಯೊಬ್ಬ ನಾಗರೀಕನಿಗೂ ಈ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸೋಣ. ಕೇವಲ ವರ್ಷಕ್ಕೆ ಒಂದು ದಿನ ಪರಿಸರ ಸಂರಕ್ಷಣೆಯೆಂಬುದು ಸೀಮಿತವಾಗಬಾರದು.ವರ್ಷದ ಪ್ರತಿದಿನವೂ ನಮಗೆ ಪರಿಸರ ದಿನವಾಗಬೇಕು.


ಹೆಸರು : ಲಹರಿ ಎಚ್  7ನೆ ತರಗತಿ 
ಶ್ರೀ ಶ್ರೀ ರವಿ ಶಂಕರ್ ವಿದ್ಯಾ ಮಂದಿರ ಶಾಲೆ ಕೊಂಚಾಡಿ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ನೀಡದ ಹೆಸರು : ಕರಿಬೇವಿನ ಗಿಡ
ಕರಿಬೇವಿನ ಎಲೆಯು ಸಮೃದ್ಧ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಇದನ್ನು ಪೋಷಕಾಂಶಗಳ ಆಗರ, ಶಕ್ತಿ ಮನೆ ಎಂದೆಲ್ಲಾ ಕರೆಯಲಾಗುವುದು. ಈ ಪುಟ್ಟ ಎಲೆಗಳಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಬಿ12 ಗಳು ಅಧಿಕವಾಗಿರುತ್ತದೆ ಅಲ್ಲದೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿರುತ್ತದೆ ನಿತ್ಯವೂ ಇದನ್ನು ಆಹಾರದಲ್ಲಿ ಕಡ್ಡಾಯವಾಗಿ ಸೇರಿಸಬೇಕು.ಆಗಲೇ ನಮ್ಮ ಆರೊಗ್ಯದಲ್ಲಿ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ನೈಸರ್ಗಿಕವಾಗಿಯೇ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.




ಪ್ರದ್ಯುಮ್ನ ಡಿ ಆಚಾರ್ಯ  5 ನೇ ತರಗತಿ
ಸುದಾನ ವಸತಿಯುತ ಶಾಲೆ ಪುತ್ತೂರು.
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕರಿಬೇವಿನ ಗಿಡ
       ಇದನ್ನು ಸಮಾನ್ಯವಾಗಿ ಅಡುಗೆಯ ಒಗ್ಗರಣೆಗೆ ಬಳಸುತ್ತೇವೆ. ಇದರಲ್ಲಿರುವ ಸುವಾಸನೆ ಮತ್ತು ಆರೋಗ್ಯಕರ ಅಂಶಗಳು ಆಹಾರದ ರುಚಿ ಹಾಗೂ ಪರಿಮಳವನ್ನು ಬದಲಿಸುವುದು ಆಹಾರ ಪದಾರ್ಥಗಳನ್ನು ನಾವು ನಿತ್ಯದ ಆಹಾರದಲ್ಲಿ ಸೇರಿಸಿಕೊಂಡರೆ ಬಹುತೇಕ ಅನಾರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು. ನೈಸರ್ಗಿಕ ಗಿಡಮೂಲಿಕೆಯಾದ ಕರಿಬೇವಿನ ಎಲೆಯು ಸಮೃದ್ಧವಾದ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. 



ಪ್ರಾರ್ಥನಾ ಡಿ ಆಚಾರ್ಯ 
ಸುದಾನ ವಸತಿಯುತ ಶಾಲೆ ನೆಹರು ನಗರ ಪುತ್ತೂರು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಬಾಳೆಗಿಡ
ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ. ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ, ಅದು ಸಂಪ್ರದಾಯ ಸಹ ಹೌದು. ಹಾಗಾಗಿಯೇ, ಮದುವೆ, ದೇವಾಲಯಗಳ ಪ್ರಸಾದ ಭೋಜನ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ. ಮನೆಯ ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ ಬಾಳೆಗಿಡಗಳನ್ನು ಬೆಳೆಸುವುದು ಶುಭಕರವೆಂದು ಹೇಳಲಾಗುತ್ತದೆ.   




ಮೋಕ್ಷಾ  10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಾಣಿಲ ಬಂಟ್ವಾಳ ತಾಲೂಕು 
ದ.ಕ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ  
ಇದು ಸಾಧಾರಣವಾಗಿ 2-3 ಅಡಿ ಎತ್ತರ ಬೆಳೆಯುವ ಗಿಡವಾಗಿದ್ದು ದುಂಡಾಕಾರದ ಎಲೆಯನ್ನು ಹೊಂದಿರುತ್ತದೆ. ನೀಲ ವರ್ಣದ ಹೂವುಗಳು ಕಪ್ಪು ವರ್ಣದ ಬೀಜಗಳಾಗಿ ಮಾರ್ಪಡುತ್ತದೆ.
ಧರ್ಮ ಗ್ರಂಥಗಳ ಪ್ರಕಾರ ತುಳಸಿಯಲ್ಲಿ ಹಲವು ವಿಧಗಳಿವೆ ಅವುಗಳೆಂದರೆ - ರಾಮ ತುಳಸಿ, ಕೃಷ್ಣ ತುಳಸಿ, ಜ್ಞಾನ ತುಳಸಿ, ರಾಜ ತುಳಸಿ, ಲಕ್ಷ್ಮೀ ತುಳಸಿ, ಭೂಮಿ ತುಳಸಿ, ರಕ್ತ ತುಳಸಿ, ನೀಲ ತುಳಸಿ, ಬಿಳಿ ತುಳಸಿ, ವನ ತುಳಸಿ ಮುಂತಾದವುಗಳು.
ತುಳಸಿಯ ಕಷಾಯವು ಕೆಮ್ಮು, ನೆಗಡಿ, ಶೀತ , ಶ್ಲೇಷ್ಮಾದಿಗಳ ನಿವಾರಕವಾಗಿದೆ.



ಮನ್ವಿತ್ 3ನೇ ತರಗತಿ 
ಎಸ್ ವಿ ಎಸ್ ದೇವಳ ಸ್ಕೂಲ್ ಬಂಟ್ವಾಳ
 ದಕ್ಷಿಣ ಕನ್ನಡ ಜಿಲ್ಲೆ 
ಗಿಡದ ಹೆಸರು : ತುಳಸಿ ಗಿಡ




ಶ್ರುತಿಕಾ, ಮತ್ತು ಶ್ರೇಯಾ.ಜೆ    ತರಗತಿ: 10 ಶಾಲೆ:ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರ್ ಮೂಡಬಿದ್ರೆ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸದಾಪುಷ್ಪ
ನಿತ್ಯಪುಷ್ಪದ ಉಪಯೋಗ: ನಿತ್ಯಪುಷ್ಪವನ್ನು ಸಂಸ್ಕರಿಸಿ ಕ್ಯಾನ್ಸರ್ ರೋಗಿಗಳಿಗೆ ಔಷಧಿಯಾಗಿ ಬಳಕೆ ಮಾಡಲಾಗುತ್ತದೆ. ಮಧುಮೇಹ ರೋಗಿಗಳಿಗೆ ಸಹ ಗಿಡ ಮತ್ತು ಹೂವನ್ನು ಬಳಕೆ ಮಾಡಲಾಗುತ್ತದೆ. ಚಿಕ್ಕ ಮಕ್ಕಳ ಹೊಟ್ಟೆ ನೋವಿಗೆ ಈ ಎಲೆಯ ರಸ ಬಳಸುತ್ತಾರೆ. ಸಕ್ಕರೆ ಕಾಯಿಲೆಗೆ ಈ ಗಿಡದ ಎಲೆಗಳನ್ನು ಅಗಿದು ತಿಂದರೆ ಸಕ್ಕರೆ ಕಾಯಿಲೆ ನಿವಾರಣೆಯಾಗುತ್ತದೆ.




ವೈಷ್ಣವಿ ಎಸ್ ತುಂಗ 3 ನೇ ತರಗತಿ 
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕೇಪಳ
ಕೇಪಳ ಹೂವಿನಲ್ಲಿ ಅನೇಕ ವಿಧದ ಬಣ್ಣದ ಹೂವುಗಳಿವೆ. ಇದರ ಮೊಗ್ಗುಗಳು ಚೂಪಾಗಿವೆ. ಇದರ ಹೂವಿನ ಆಕಾರ ಕೊಳವೆ ಆಕಾರದಲ್ಲಿದೆ. ಇದರ ಕಾಯಿ
ಗಳು ಮೊದಲಿಗೆ ಹಸಿರಾಗಿದ್ದು ಬಳಿಕ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದರ ಉಪಯೋಗಗಳು ಯಾವುವೆಂದರೆ ಇದು ಒಂದು ಔಷಧೀಯ ಸಸ್ಯ. ಇದರ ಎಲೆ, ಬೇರು, ಕಾಂಡವನ್ನು ಔಷಧವಾಗಿ ಬಳಸಬಹುದು. ಇದರ ಹಣ್ಣು ಸಿಹಿ ಇರುವುದರಿಂದ ತಿನ್ನಬಹುದು. ಇದನ್ನು ದೇವರ ಪೂಜೆಗೂ ಬಳಸುತ್ತಾರೆ.



ತನಿಷ.ಎಸ್ 7 ನೇ ತರಗತಿ
ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಡಿಕೆ ಮರ
    ಅಡಿಕೆಯನ್ನು ತಾಂಬೂಲದಲ್ಲಿ ವೀಳ್ಯದೆಲೆಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ಅಡಿಕೆಯ ಮರದಿಂದ ಹೆಚ್ಚು ಆಮ್ಲಜನಕ ದೊರೆಯುತ್ತದೆ. ಇದರ ರಸಕ್ಕೆ ಕ್ರಿಮಿನಾಶಕದ ಗುಣವಿದೆ.




ಹೆಸರು, ಕಿರಣ್ ಹಡಪದ  ತರಗತಿ, 9ನೇ ತರಗತಿ
ಶಾಲೆ ಹೆಸರು : ಸೈಂಟ್  ಜೋಸೆಫ್ ಪ್ರೌಢಶಾಲೆ ಕಂಕನಾಡಿ  ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕರಿಬೇವು 



ನಿಶಾರ    ನಾಲ್ಕನೇ ತರಗತಿ 
ಸೈಂಟ್ ಜೋಸೆಫ್ ಜಾಯ್ಲ್ಯಾಂಡ್ ಸ್ಕೂಲ್ ಕೊಲ್ಯ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಒಂದೆಲಗ (ತಿಮರೆ)

























 



Ads on article

Advertise in articles 1

advertising articles 2

Advertise under the article