ಹಸಿರು ಯೋಧರು - 29
Saturday, June 26, 2021
Edit
ಜೂನ್ 5 ವಿಶ್ವ ಪರಿಸರ ದಿನ
ಲಕ್ಷ್ಮೀಶ 6 ನೇ ತರಗತಿ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ವಿವೇಕಾನಂದ ಸಿಬಿಎಸ್ಇ ಸ್ಕೂಲ್ ,ಪುತ್ತೂರು.
ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಜಾಯಿಕಾಯಿ (Myristica fragrans):
ಜಾಯಿಕಾಯಿಯ ಮರಗಳನ್ನು ಬೆಳೆಸುವುದು ಅತಿ ಸುಲಭ. ಈ ಸಸ್ಯಕ್ಕೆ ಸ್ವಲ್ಪ ನೆರಳಿದ್ದರೆ ಉತ್ತಮ. ಹಿತ್ತಲಿನಲ್ಲಿ ಬಿಸಿಲು ಬೀಳುವ ಕಡೆ, ತೋಟದ ಬದಿಯಲ್ಲಿ ಸದಾ ತೇವಾಂಶವಿರುವ ಮಣ್ಣಿನಲ್ಲಿ ಇವುಗಳನ್ನು ನೆಡಬಹುದು. ಈ ಮರವು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಈ ಮರದ ಎಲೆ ಮತ್ತು ತೊಗಟೆಗಳನ್ನು ಎಣ್ಣೆ ತೆಗೆಯಲು ಉಪಯೋಗಿಸುತ್ತಾರೆ. ಜಾಯಿಕಾಯಿಯನ್ನು ಪೋಷಕಾಂಶಗಳ ಆಗರ ಎಂದು ಕರೆಯುತ್ತಾರೆ. ಏಕೆಂದರೆ ಇದರಲ್ಲಿ ಮ್ಯಾಗ್ನೀಷಿಯಂ, ಮ್ಯಾಂಗನೀಸ್, ಕಾಪರ್, ವಿಟಮಿನ್ ಬಿ1, ಬಿ6 ಮುಂತಾದ ಅಪರೂಪದ ಪೌಷ್ಟಿಕಾಂಶಗಳಿವೆ. ಜಾಯಿಕಾಯಿ ಹಣ್ಣಿನಲ್ಲಿ ಎರಡು ಭಾಗಗಳಿವೆ. ತಿರುಳು (ಕಾಯಿ) ಹಾಗೂ ಅದನ್ನು ಆವರಿಸಿರುವ ಸಿಪ್ಪೆ (ಪತ್ರೆ).
ಕೆನರಾ ಕಿರಿಯ ಪ್ರಾಥಮಿಕ ಶಾಲೆ
ಡೊಂಗರಕೇರಿ ಮಂಗಳೂರು
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕಹಿ ಬೇವಿನ ಗಿಡ
ಯುಗಾದಿಯಿಂದ ಆರಂಭವಾಗಿ ಚೈತ್ರ ಮಾಸವಿಡೀ ಮುಂಜಾನೆ ಬೇವಿನ ಎಲೆಗಳನ್ನು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇಡೀ ವರ್ಷ ರೋಗ ರುಜಿನಗಳು ಬರವುದಿಲ್ಲ ಎಂಬುದು ಹಿರಿಯರ ಮಾತು.
ಹಾನಿಕಾರಕ ಅಣುಜೀವಿಗಳಿಂದ ಹರಡುವ ಸೋಂಕುಗಳ ತಡೆಗೆ ಬೇವು ಉತ್ತಮ ಮದ್ದು. ಬೇವಿನ ಸೊಪ್ಪನಲ್ಲಿ ಮತ್ತು ಎಣ್ಣೆಯಲ್ಲಿ ಕ್ರಿಮಿನಾಷಕ ಗುಣವಿದೆ. ಎಳೆಯ ಬೇವಿನಕಡ್ಡಿಯನ್ನು ಕುಂಚದಂತೆ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆ ಬರುವುದಿಲ್ಲ.
ಬೇವಿನ ಸೊಪ್ಪು, ಬೇವಿನ ಹೋವು, ಬೇವಿನ ಎಣ್ಣೆ, ಬೇವಿನ ತೊಗಟೆಯಲ್ಲಿ ಹಲವು ರೋಗ ನಿವಾರಕ ಅಂಶಗಳಿದ್ದು, ಇವುಗಳಿಂದ ಔಷಧ ತಯಾರಿಸಲಾಗುತ್ತದೆ. ಚರ್ಮ ರೋಗನಿವಾರಣೆಗೆ ಬೇವು ಸಿದ್ಧ ಔಷಧ. ಬೇವಿನ ತಾಜಾ ಸೊಪ್ಪನ್ನು ಹಿಂಡಿ ಸೇವಿಸಿದರೆ ಶಾರೀರಿಕ ದೋಷ ಕೂಡ ನಿವಾರಣೆ ಆಗುತ್ತವೆ ಎಂಬುದು ತಜ್ಞರ ಅಂಬೋಣ.
ಪ್ರತಿದಿನ ಬೆಳಗ್ಗೆ 10-12 ಬೇವಿನ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಚನ್ನಾಗಿ ಅಗೆದು ಒಂದು ಬಟ್ಟಲು ನೀರು ಕುಡಿದರೆ ಕ್ಯಾನ್ಸರ್ ಸಂಬಂಧಿ ರೋಗಗಳು ದೂರವಾಗುತ್ತವೆ ಎಂಬುದು ಹಿರಿಯರ ಅಭಿಪ್ರಾಯ.
ವಿವೇಕಾನಂದ ಸಿ.ಬಿ .ಎಸ್. ಇ ಶಾಲೆ ಪುತ್ತೂರು ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ರಕ್ತ ಚಂದನ
ರಕ್ತಚಂದನ ದಕ್ಷಿಣ ಭಾರತದ ಪರ್ವತ ವ್ಯಾಪ್ತಿಯ ಸ್ಥಳೀಯ ಸಸ್ಯ. ಕೆಂಪು ಸ್ಯಾಂಡರ್ಸ್, ಕೆಂಪು ಶ್ರೀಗಂಧದ ಮರ, ಮತ್ತು ಸೌಂಡರ್ಸ್ ವುಡ್, ಪೆಟೋಕಾರ್ಪಸ್ ಸ್ಯಾಂಟಲಿನಸ್ ಇವು ಈ ಮರಕ್ಕಿರುವ ಸಾಮಾನ್ಯ ಹೆಸರುಗಳು. ಈ ಮರವು ದಕ್ಷಿಣ ಭಾರತದಲ್ಲಿ ಸ್ಥಳೀಯವಾಗಿ ಬೆಳೆಯುವ ಆರೊಮ್ಯಾಟಿಕ್ ಸ್ಯಾಂಟಾಲಮ್ ಸ್ಯಾಂಡಲ್ವುಡ್ ಮರಗಳ ಗುಂಪಿಗೆ ಸೇರುತ್ತವೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದಡ್ಡಲಕಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆ ಪದವು
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಎಸ್. ವಿ . ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬಂಟ್ವಾಳ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಕರಿಬೇವಿನ ಗಿಡ
ಈ ಕರಿಬೇವಿನ ಸೊಪ್ಪನ್ನು ಹೆಚ್ಚಾಗಿ ಅಡುಗೆ ಹಾಗು ಆಯುರ್ವೇದ ಔಷಧಿಯಾಗಿ ಬಳಸಲ್ಪಡುತ್ತದೆ . ಈ ಸೊಪ್ಪಲ್ಲಿ ಕಬ್ಬಿನಾಂಶ , ಫೋಲಿಕ್ ಆಸಿಡ್ ,
ಕ್ಯಾಲ್ಸಿಯಂ , ವಿಟಮಿನ್ ಎ , ವಿಟಮಿನ್ ಸಿ, ಹೀಗೆ ಹಲವಾರು ಅಂಶಗಳಿರುವುದರಿಂದ ಜೀರ್ಣಕ್ರಿಯೆ ಉದರಸಂಬಂಧಿತ ಕಾಯಿಲೆಗಳು ಗ್ಯಾಸ್ಟ್ರಿಕ್ , ರಕ್ತಹೀನತೆ , ಕಫನಿವಾರಣೆ, ಪಿತ್ತದೋಷ , ಮಧುಮೇಹ ಕಣ್ಣಿನ ದೃಷ್ಟಿ , ತಲೆಕೂದಲು ಉದುರುವಿಕೆ ಮುಂತಾದ ಕಾಯಿಲೆಗಳಿಗೆ ಈ ಕರಿಬೇವಿನ ಸೊಪ್ಪು ನಮಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಸೈಂಟ್ ಜೋಸೆಫ್ಸ್ ಜಾಯ್ ಲ್ಯಾಂಡ್ ಸ್ಕೂಲ್ ಕೊಲ್ಯ ಸೋಮೇಶ್ವರ ಮಂಗಳೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅರಶಿನ ಗಿಡ
ಸೈಂಟ್ ಜೋಸೆಫ್ಸ್ ಜಾಯ್ ಲ್ಯಾಂಡ್ ಸ್ಕೂಲ್ ಕೊಲ್ಯ ಸೋಮೇಶ್ವರ ಮಂಗಳೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸದಾಪುಷ್ಪ
ಗಿಡದ ಹೆಸರು : ಕರಿ ಮೆಣಸಿನ ಗಿಡ
ಧ್ರುವಿನ್ 3 ನೇ ತರಗತಿ
ಗಿಡದ ಹೆಸರು : ಅರಿಶಿನ ಗಿಡ
ಆನಂದಾಶ್ರಮ ಪ್ರೌಢಶಾಲೆ ಸೋಮೇಶ್ವರ
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಕೇಶಿಯ ಗಿಡ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮೀನಾದಿ ಮಂಗಳೂರು ತಾಲೂಕು ಕೋಟೆಕಾರು ಪೋಸ್ಟ್
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಂಬೆ ಗಿಡ
ತುಂಬೆ ಒಂದು ಚಿಕ್ಕ ಗಿಡ ಇದರ ಹೂ ಬಿಳಿ ಬಣ್ಣದಾಗಿದೆ. ಇದರ ಹೂವು ಶಿವನಿಗೆ ಬಹಳ ಪ್ರಿಯವಾದ ಹೂವು ಶಿವರಾತ್ರಿಯ ದಿನದಂದು ಈ ಹೂವನ್ನು ತೆಗೆದು ಶಿವನಿಗೆ ಅರ್ಪಿಸುತ್ತಾರೆ. ಔಷಧೀಯ ಗುಣ.. ಚರ್ಮದಲ್ಲಿ ತುರಿಕೆ ಇದ್ದರೆ ಇದರ ಎಲೆಯನ್ನು ಪೇಸ್ಟ್ ಮಾಡಿ ಹಚ್ಚಿದರೆ ತುರಿಕೆ ಕಡಿಮೆಯಾಗುತ್ತದೆ. ಸಂಧಿವಾತ ಗಂಟು ನೋವು ಇದ್ದರೆ ಇದನ್ನು ಅರೆದು ಹಚ್ಚಬೇಕು. ನೋವು ಕಡಿಮೆಯಾಗುತ್ತದೆ. ಮನೆಯಲ್ಲಿ ಸೊಳ್ಳೆಗಳು ಇದ್ದರೆ ಇದರ ಎಲೆಯನ್ನು ಒಣಗಿಸಿ ಹೊಗೆ ಹಾಕುವುದರಿಂದ ಸೊಳ್ಳೆಗಳು ಕಡಿಮೆಯಾಗುತ್ತದೆ. ಚಿಕ್ಕ ಮಕ್ಕಳಿಗೆ ಇದರ ಎಣ್ಣೆಯನ್ನು ಕಾಯಿಸಿ ಹಚ್ಚುತ್ತಾರೆ.
ಅಯಾತುಲ್ ಇಸ್ಲಾಂ ಇಂಗ್ಲಿಷ್ ಮೀಡಿಯಂ ಸ್ಕೂಲ್
ಗಿಡದ ಹೆಸರು : ದೊಡ್ಡ ಪತ್ರೆ ಗಿಡ ಮತ್ತು
ಕರಿಬೇವಿನ ಗಿಡ
ಸೈಂಟ್ ಆಂಟನಿ ಇಂಗ್ಲಿಷ್ ಮೀಡಿಯಂ ಶಾಲೆ ಅಲ್ಲಿಪಾದೆ , ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಚಿಕ್ಕು ಗಿಡ
ಸಾಮಾನ್ಯವಾಗಿ ಯಾವುದೇ ಹಣ್ಣುಗಳನ್ನು ಬೆಳೆಯಲು ರಾಸಾಯನಿಕ ಹಾಗೂ ಕೀಟನಾಶಕಗಳನ್ನು ಬಳಸುತ್ತಾರೆ. ಆದರೆ ಈ ಚಿಕ್ಕು ಹಣ್ಣಿನಲ್ಲಿ ಅತ್ಯಂತ ಕಡಿಮೆ ರಾಸಾಯನಿಕ ಮತ್ತು ವಿರಳವಾಗಿ ಕೀಟನಾಶಕಗಳ ಬಳಕೆಯಿಂದ ಬೆಳೆಯುವ ಹಣ್ಣು. ಇದರ ಎಲೆಗಳಿಂದ ತಯಾರಿಸಿದ ಕಷಾಯದಿಂದ ಬಾಯಿ ಮುಕುಳಿಸಿದರೆ ಬಾಯಲ್ಲಿರುವ ಹುಣ್ಣುಗಳು ಗುಣವಾಗುತ್ತದೆ ಮತ್ತು ಚೆನ್ನಾಗಿ ಮಾಗಿದ ಹಣ್ಣು ಬಹಳ ಸಿಹಿ ಅಷ್ಟೇ ರುಚಿಕರವಾಗಿರುತ್ತದೆ. ಆಹಾರ ತಜ್ಞರು ಇದನ್ನು ಪೌಷ್ಠಿಕಾಂಶಗಳ ಕಣಜವೆಂದೆ ಹೇಳುತ್ತಾರೆ.100 ಗ್ರಾಂ ಚಿಕ್ಕು ಹಣ್ಣಿನಲ್ಲಿ 83 ಕ್ಯಾಲರಿಗಳಿವೆ. ಇದು ಬಾಳೆಹಣ್ಣು ಹಾಗೂ ಸಿಹಿಗೆಣಸಿಗೆ ಸಮವಾಗಿದ್ದು ಮತ್ತು 100 ಗ್ರಾಂ ಚಿಕ್ಕು ಹಣ್ಣು ತಿಂದರೆ ದೇಹಕ್ಕೆ 25 ಗ್ರಾಂ ಸಿಹಿ ಜೀವಸತ್ವ ಲಭಿಸುತ್ತದೆ.
ಶ್ರೀ ಸರಸ್ವತಿ ವಿದ್ಯಾಲಯ ಕನ್ಯಾನ. ಕನ್ಯಾನ
ಬಂಟ್ವಾಳ ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಪಪ್ಪಾಯಿ ಗಿಡ
ಪಪ್ಪಾಯಿ ಎಲೆಯ ರಸವನ್ನು ಡೆಂಗೀ ಜ್ವರ ಕ್ಕೆ ಮದ್ದಾಗಿ ಸೇವಿಸುತ್ತಾರೆ. ಇದು ಉತ್ತಮ ಔಷಧಿ. ಇದರಿಂದ ನಮ್ಮ ಶರೀರದಲ್ಲಿ ರಕ್ತದ ಪ್ಲೇಟ್ ಲೆಟ್ ಸಂಖ್ಯೆಯ ಸಮತೋಲನವನ್ನು ಕಾಪಾಡುತ್ತದೆ. ಪಪ್ಪಾಯಿ ಹಣ್ಣು ತಿನ್ನಲು ಬಹಳ ರುಚಿ. ಇದನ್ನು ಸೇವಿಸುವುದರಿಂದ ನಮ್ಮ ಶರೀರದಲ್ಲಿ ಪ್ರತಿರೋಧಕ ಶಕ್ತಿಯನ್ನು ಉತ್ಪಾದಿಸಿ ಅನೇಕ ರೋಗಗಳಿಂದ ರಕ್ಷಿಸುತ್ತದೆ. ಪಪ್ಪಾಯಿ ಹಣ್ಣನ್ನು ಸಾಬೂನು, ಮುಲಾಮು ತಯಾರಿಸಲು ಬಳಸುತ್ತಾರೆ. ಮಹಿಳೆಯರು ಪಪ್ಪಾಯಿ ಹಣ್ಣನ್ನು ಮುಖಕ್ಕೆ ಹಚ್ಚಲು ಬಳಸುವರು. ಇದು ಉತ್ತಮ ಸೌಂದರ್ಯ ವರ್ಧಕವಾಗಿದೆ ಪಪ್ಪಾಯಿ ಕಾಯಿಯನ್ನು ಪಲ್ಯ, ಸಾರು ಮಾಡುತ್ತಾರೆ. ಇದು ಉತ್ತಮ ತರಕಾರಿಯೂ ಹೌದು.
ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆ,ವಿಟ್ಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ