ಹಸಿರು ಯೋಧರು - 26
Wednesday, June 23, 2021
Edit
ಜೂನ್ 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರು ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು
ಶಾಲೆಯ ಹೆಸರು:- ಶ್ರೀ ನಾರಾಯಣ ಗುರು ಪದವಿ ಪೂರ್ವ ಕಾಲೇಜು ಮುಲ್ಕಿ ದಕ್ಷಿಣ ಕನ್ನಡ
ಗಿಡದ ಹೆಸರು : ತುಳಸಿ ಗಿಡ
ಈ ಸಸಿಯ ಬೇರಿನಲ್ಲಿ ವಿಶ್ವದ ಸಮಸ್ತ ಪೂಜನೀಯ ತೀರ್ಥಗಳು, ಕಾಂಡದಲ್ಲಿ ಸಮಸ್ತ ದೇವತೆಗಳು, ಎಲೆಗಳಲ್ಲಿ ಚತುರ್ವೇದಗಳು ಸ್ಥಿತವಾಗಿದೆ ಎಂದು ವೇದಗಳು ತಿಳಿಸುತ್ತವೆ. ಬಹುಶಃ ತುಳಸಿ ಗಿಡವಿಲ್ಲದ ಮನೆಯು ಅತಿ ವಿರಳ. ಜಗತ್ತಿನ ಮೂಲೆ ಮೂಲೆಯಲ್ಲಿಯೂ ತುಳಸಿ ಗಿಡವನ್ನು ನೋಡಬಹುದಾಗಿದೆ. ತುಳಸಿಯಲ್ಲಿ ಪ್ರಮುಖವಾಗಿ ಎರಡು ವಿಧಗಳಿದ್ದು:- ಒಂದು ರಾಮ ತುಳಸಿ ಇನ್ನೊಂದು ಕೃಷ್ಣ ತುಳಸಿ. ರಾಮ ತುಳಸಿಯನ್ನು ಪೂಜಾ ವಿಧಿಗೂ ಕೃಷ್ಣ ತುಳಸಿಯನ್ನು ಔಷಧಿಗೆ ಪ್ರಮುಖವಾಗಿ ಉಪಯೋಗಿಸಲ್ಪಡುತ್ತದೆ. ಬಿಳಿ ತುಳಸಿಯನ್ನು ಮನೆಯಲ್ಲಿ, ವ್ಯವಹಾರ ಸ್ಥಳಗಳಲ್ಲಿ ಮತ್ತು ಭೂಮಿಯಲ್ಲಿ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಗೊಳಿಸಲು ಉಪಯೋಗಿಸಲಾಗುತ್ತದೆ. ಹಾಗೆ ಕೃಷ್ಣ ತುಳಸಿಯನ್ನು ದೇಹದಲ್ಲಿರುವ, ಮನೆಗಳಲ್ಲಿರುವ ಇಲ್ಲವೇ ವ್ಯವಹಾರ ಸ್ಥಳಗಳಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ತೆಗೆಯಲು ಉಪಯೋಗಿಸಲ್ಪಡುತ್ತದೆ.
ತುಳಸಿಗೆ ತನ್ನ ಸುತ್ತಲಿನ ವಾತಾವರಣವನ್ನು ಸ್ವಚ್ಛಮಾಡುವ ಶಕ್ತಿಯಿದ್ದು ಕಣ್ಣಿಗೆ ಕಾಣದಿರುವ ಕ್ರಿಮಿ ಕೀಟಗಳನ್ನು ನಾಶ ಮಾಡುತ್ತದೆ. ಆಯುರ್ವೇದದ ಬಂಡಾರವೇ ಆಗಿರುವ ಈ ಸಸಿಯು ಶೇಕಡ ೫೦% ಔಷಧಿಗಳಲ್ಲಿ ಉಪಯೋಗಿಸಲ್ಪಡುತ್ತದೆ. ಮನುಷ್ಯನ ದೇಹದಲ್ಲಿ ಉದ್ಭವಿಸುವ ಪ್ರತಿಯೊಂದು ಖಾಯಿಲೆಗೂ ಈ ಸಸಿಯಲ್ಲಿ ಔಷಧಿಯಿದ್ದು ಇದನ್ನು ಅಮೃತದ ಸಮಾನವೆಂದು ವೇದಗಳಲ್ಲಿ ಹೇಳಲ್ಪಟ್ಟಿದೆ. ತುಳಸಿಯನ್ನು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಎಲ್ಲಾ ದೇಶಗಳಲ್ಲಿಯೂ ಇಂದು ಔಷಧಕ್ಕಾಗಿ ಉಪಯೋಗಿಸಲಾಗುತ್ತದೆ. ದೇಹದ ಸಕಾರಾತ್ಮಕ ಶಕ್ತಿ ವೃದ್ಧಿಯಾಗಲು ತುಳಸಿ ಸಸಿಯ ಕಾಂಡದಿಂದ ಮಾಡಲ್ಪಟ್ಟ ಮಣಿಗಳನ್ನು ಪೋಣಿಸಿ ಧರಿಸಿ ಕೊಳ್ಳುತ್ತಾರೆ.
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ.
ಕನ್ಯಾನ ಗ್ರಾಮ , ಬಂಟ್ವಾಳ ತಾಲೂಕು, ದ.ಕ.
ಗಿಡದ ಹೆಸರು : ಅಲೋವೆರಾ ಗಿಡ (ಲೋಳೆಸರ)
ಇದರ ಎಲೆಯ ಅಂಚು ಗರಗಸದಂತೆ ಅಲ್ಲಲ್ಲಿ ಚೂಪಾಗಿದ್ದು ಬಿಳಿಯ ಹಲ್ಲುಗಳಂತಹ ರಚನೆಯಿರುತ್ತದೆ. ಎಲೆಯ ಮುಳ್ಳುಗಳಲ್ಲಿ ಬೇಸಿಗೆಕಾಲದಲ್ಲಿ ಹೂ ಬಿಡುವ ಸಾಧ್ಯತೆ ಇರುತ್ತದೆ. ತಾಯಿ ಸಸ್ಯದ ಬದಿಗಳಿಂದ ಅಲೋವೆರಾದ ಮರಿಗಳು ಹುಟ್ಟುತ್ತವೆ. ನೀರು ಲಭ್ಯವಿಲ್ಲದ ಸಮಯದಲ್ಲಿ ಎಲೆಯಲ್ಲಿರುವ ಕ್ಲೋರೋಫಿಲ್ ಮಡಿದು ರೋಡೋಕ್ಸಾನ್ಥಿನ್ ಎನ್ನುವ ಕೆಂಪು ಬಣ್ಣದ ಪದಾರ್ಥ ಹುಟ್ಟುತ್ತದೆ. ಇದರಿಂದ ಎಲೆಗಳು ಕೆಂಪಾಗಿ ಕಾಣಿಸುತ್ತವೆ ಮತ್ತು ನೀರು ಸಿಕ್ಕಿದಾಗ ಎಲೆಗಳಲ್ಲಿ ಕ್ಲೋರೋಫಿಲ್ ವೃದ್ದಿಯಾಗುತ್ತವೆ. ಈ ಗುಣವನ್ನು ಆಪ್ಟಿಕಲ್ ಪ್ರಾಪರ್ಟಿ ಎಂದು ಕರೆಯಲಾಗುತ್ತದೆ. ಅಲೋವೆರಾ ವ್ಯಾಪಕವಾಗಿ ಅಲಂಕಾರಿಕ ಗಿಡವಾಗಿ ಬೆಳೆದಿದೆ.
ಪರಿಜ್ಞಾನ ವಿದ್ಯಾಲಯ ಸೋಮೇಶ್ವರ
ಕೋಟೆಕಾರು ಮಂಗಳೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಲಿಂಬೆ ಗಿಡ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾಮದಪದವು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು ; ತುಳಸಿ ಗಿಡ
ದಿ ಯೆನೆಪೊಯಾ ಸ್ಕೂಲ್ ಮಂಗಳೂರು
ಮಂಗಳೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಅಮೃತಬಳ್ಳಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಾಮದಪದವು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು ; ತುಳಸಿ ಗಿಡ
ದೀಪಿಕಾ ಪ್ರೌಢಶಾಲೆ ಮೊಡಂಕಾಪು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ
ಹೋಲಿ ಸೇವಿಯರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಗ್ರಾರ್ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ದಾನಿಶ್. 6 ನೆ ತರಗತಿ.
ಬುರೂಜ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ರಝನಗರ್ ಕಲಾಬಾಗಿಲು. ಬಂಟ್ವಾಳ ತಾಲೂಕು.
ಗಿಡದ ಹೆಸರು : ತೆಂಗಿನಗಿಡ
ಕಲ್ಪವೃಕ್ಷ ಎಂದು ಕರೆಯಲ್ಪಡುವ ಇದು ಮಾನವ ಜೀವನದಲ್ಲಿ ತುಂಬಾ ಉಪಯೋಗವಾಗುವ ಫಲ ಆಗಿದೆ. ಸಸಿಯಿಂದ ದೋಡ್ಡ ಮರವಾಗಿ ಬೆಳೆಯುವ ಮೂಲಕ ಇದು, ಚಿಕ್ಕ ಮಕ್ಕಳಿಂದ ಹಿಡಿದು ಪ್ರಾಯದವರಿಗೂ ಎಳನೀರು ಆರೋಗ್ಯಕ್ಕೆ ತುಂಬಾನೇ ಉಪಯೋಗವಾಗುತ್ತದೆ. ತೆಂಗಿನಕಾಯಿ ಇಲ್ಲದೇ ನಮ್ಮ ದೈನಂದಿನ ಜೀವನ ಸಾಗೋದೇ ತುಂಬಾ ಕಷ್ಟ.. ತೆಂಗಿನ ಮರದ ಬೇರೆ ಬಾಗಗಳು ಸಹ ಬೇರೆ ಬೇರೆ ರೀತಿಯಲ್ಲಿ ಉಪಯೋಗ ವಾಗುತ್ತದೆ. ಒಂದೇ ಮಾತಿನಲ್ಲಿ ಹೇಳೋದಾದರೆ ಬುಡದಿಂದ ತುದಿಯವರೆಗೆ ಬಿಸಾಡುವ ಬಾಗ ಇದರಲ್ಲಿ ಇಲ್ಲ.
ಆವೆ ಮರಿಯಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ಪಜೀರು ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ನಿಂಬೆಗಿಡ
ಹೆಸರು: ಶಿಫಾನ ಫಾತಿಮ ತರಗತಿ:5ನೇ
ಶಾಲೆ: ರೋಸಾ.ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ. ಮಂಗಳೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಮಾವಿನ ಗಿಡ
ಮಾವು ಹಣ್ಣುಗಳ ರಾಜ ಎಂದೇ ಪ್ರಖ್ಯಾತವಾಗಿದೆ. ಮಾವು ಸದಾ ಕಾಲ ದೊರೆಯುವ ಹಣ್ಣುಲ್ಲ. ಬೇಸಿಗೆ ಕಾಲದಲ್ಲಿ ಪ್ರಾರಂಭವಾಗಿ ಮಳೆಗಾಲ ಆರಂಭವಾಗುವವರೆಗೂ ಲಭ್ಯವಿರುತ್ತದೆ. ಸಂಸ್ಕ್ರತದಲ್ಲಿ ಮಾವಿನಹಣ್ಣಿಗೆ ''ಆಮ್ರಫಲ'' ಎಂದು ಕರೆಯುತ್ತಾರೆ. ಮಾವಿನ ಹಣ್ಣಿನಲ್ಲಿ ರಸಪೂರಿ, ಬಾದಮಿ, ಮಲಗೋವ, ತೋತಪುರಿ ಮುಂತಾದ ಹಲವಾರು ಬಗೆಗಳಿವೆ. ಮಾವಿನ ಹಣ್ಣು ಮಿತವಾಗಿ ಬಳಸುವುದು ಒಳ್ಳೆಯದು. ಮಾವಿನ ಹಣ್ಣನ್ನು ತಿಂದಕೂಡಲೇ ನೀರು ಕುಡಿಯಬಾರದು.
ಶಾಲೆ: ರೋಸಾ.ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ. ಮಂಗಳೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ಸೀಬೆ ಹಣ್ಣಿನ ಗಿಡ
ಶಾಲೆ: ರೋಸಾ.ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ. ಮಂಗಳೂರು ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿ ಗಿಡ