-->
ಹಸಿರು ಯೋಧರು - 2

ಹಸಿರು ಯೋಧರು - 2

ಜೂನ್ - 5 ವಿಶ್ವ ಪರಿಸರ ದಿನ
ಮಕ್ಕಳ ಹಸಿರ ಲೇಖನಮಾಲೆ
ಮಕ್ಕಳ ಜಗಲಿಯ ಹಸಿರು ಯೋಧರು


ಶ್ರಾವ್ಯ 10 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಕೋಕೋ ಗಿಡ               
                                                                                            ಪ್ರಕೃತಿಯಲ್ಲಿ ನಾನಾತರಹದ ಗಿಡಮರಗಳು ಇದೆ. ನಾನು ಕಂಡ ಹಾಗೆ ಪ್ರಕೃತಿಯಲ್ಲಿರುವ ಕೋಕೋ ಗಿಡವು ನಮಗೆ ಅತ್ಯಂತ ಉಪಯುಕ್ತ ಹಾಗೂ ಪ್ರಯೋಜನಕಾರಿ, ಲಾಭದಾಯಕವೂ ಹೌದು. ಬೀಜದಿಂದ ಗಿಡವಾಗಿ,ಉದ್ದವಾಗಿ ಅಗಲವಾದ ಎಲೆಗಳನ್ನು ಹೊಂದಿರುವ ಈ ಗಿಡ ಬೆಳೆಯುತ್ತಾ ರೆಂಬೆ ಕೊಂಬೆಗಳನ್ನು ಚಾಚಿ ಅಡಿಯಿಂದ ಮುಡಿಯವರೆಗು ಹಣ್ಣನ್ನು ನೀಡುತ್ತದೆ. ಇದರ ಹಣ್ಣುಗಳು ಪ್ರಾರಂಭದ ಹಂತದಲ್ಲಿ ಗಿಳಿ ಹಸಿರಾಗಿ ಬೆಳೆಬೆಳೆಯುತ್ತ ಹಳದಿ ಬಣ್ಣವಾಗಿ ಬದಲಾಗುತ್ತದೆ.ಈ ಬೆಳೆಯು ಪ್ರಾರಂಭದ ಹಂತದಲ್ಲಿ ಅಮೆರಿಕದಲ್ಲಿ ಕಂಡು ಬಂದು ನಂತರ ದೇಶದೆಲ್ಲೆಡೆ ಬೆಳೆಯಲು ಪ್ರಾರಂಭವಾಯಿತು. ಇದು ಇಡೀ ವರ್ಷದಲ್ಲಿ ಹಣ್ಣು ನೀಡುವುದರಿಂದ ಇದೊಂದು ಲಾಭದಾಯಕ ವಾಣಿಜ್ಯ ಬೆಳೆಯಾಗಿ ಸ್ಥಾನ ಪಡೆದುಕೊಂಡಿತು. ಎಲ್ಲಾ ಬೆಳೆಗಳಂತೆ ಕೇವಲ ಒಂದು ಋತುವಿನಲ್ಲಿ ಮಾತ್ರವಲ್ಲದೆ ಎಲ್ಲ ವಾತಾವರಣದಲ್ಲಿ ಒಗ್ಗಿಕೊಂಡು ಹಣ್ಣನ್ನು ನೀಡುವುದರಿಂದ ಇದೊಂದು ವಾಣಿಜ್ಯ ಬೆಳೆಯಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಆರಂಭವಾಯಿತು. ಈ ಬೆಳೆಯನ್ನು ಹೆಚ್ಚಾಗಿ ಚಾಕಲೇಟ್ ತಯಾರಿಕೆಯಲ್ಲಿ ಬಳಸುವುದರಿಂದ ಇದರ ಬೇಡಿಕೆ ಹೆಚ್ಚಾಗಿದೆ, ಇದು ಕೇವಲ ಚಾಕೊಲೇಟ್ ತಿಂಡಿ ತಿನಿಸುಗಳ ತಯಾರಿಕೆಗೆ ಮಾತ್ರವಲ್ಲದೆ ಪರಿಣಾಮಕಾರಿ ಔಷಧಿಯಾಗಿಯೂ ಬಳಕೆಯಲ್ಲಿದೆ. ಕೋಕೋ ದಲ್ಲಿನ ತಿಯೋಬ್ರೋಮಿನ್ ಎಂಬ ಅಂಶವು ಹೆಚ್ಚಿರುವುದರಿಂದ ಇದು ಎದೆನೋವು, ಕ್ಯಾನ್ಸರ್, ಡಯಾಬಿಟಿಸ್ಗಳಂತಹ ರೋಗದಿಂದ ರಕ್ಷಣೆ ಹೊಂದಲು ಇದು ಸಹಾಯಕಾರಿಯಾಗಿದೆ. ಮಕ್ಕಳಿಗೆ ಚಾಕಲೇಟ್ ಗಳೆಂದರೆ ಬಲು ಇಷ್ಟ. ಆದರೆ ಆ ಚಾಕಲೇಟು ಯಾವ ಹಣ್ಣಿಂದ, ಯಾವ ಹಣ್ಣಿನ ಬೀಜದಿಂದ ತಯಾರಾಗುತ್ತದೆ ಎಂದು ತಿಳಿದಿಲ್ಲ. ಚಾಕಲೇಟ್ ತಿನ್ನುವ ಜೊತೆಗೆ ಅದು ಎಲ್ಲಿಂದ ತಯಾರಾಗುವುದು ಎಂಬ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.           
    ಕೋಕೋ ಗಿಡದ ಹಾಗೆ ನಮ್ಮ ಸುತ್ತಮುತ್ತ ಸಾವಿರಾರು ಗಿಡ-ಮರಗಳಿಗೆ ಸಾಕಷ್ಟು ಉಪಯುಕ್ತ ಗಳನ್ನು ನೀಡುತ್ತದೆ. ಹಬ್ಬ-ಹರಿದಿನಗಳನ್ನು ಆಚರಣೆ ಮಾಡುವಾಗ ಕೇವಲ ತಿಂಡಿ ತಿನಿಸುಗಳನ್ನು ಮಾಡಿ ತಿಂದು ತೇಗುವ ಬದಲು ಒಂದೊಂದು ಹಬ್ಬಕ್ಕೂ ಆಚರಣೆಗೂ ಒಂದೊಂದು ಗಿಡ ನಡೋಣ. ವಿಶ್ವ ಪರಿಸರ ದಿನದಂದು ಮಾತ್ರ ಗಿಡನಡುವುದಲ್ಲದೆ ಪ್ರತಿದಿನವನ್ನು ಪರಿಸರ ದಿನವೆಂದು ಯೋಚಿಸೋಣ. ಗಿಡಗಳನ್ನು ನೆಡೋಣ ಪ್ರಕೃತಿಯನ್ನು ಉಳಿಸಿ ಬೆಳೆಸೋಣ . 


      

ಗಿಡದ ಹೆಸರು : ತುಳಸಿ ಗಿಡ
ಮನೀಶ್ ಕುಮಾರ್ 10 ನೇ ತರಗತಿ
ಸರಕಾರಿ ಪ್ರೌಢಶಾಲೆ ಕಲ್ಲರಕೋಡಿ 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ



ಹೆಸರು - ನಿಶಾಂತ್  ತರಗತಿ - 5 th A
S. V.S Temple English Medium school BANTWAL. D.K.
ಗಿಡದ ಹೆಸರು : ಅಡಿಕೆ ಗಿಡ 
ಅಡಿಕೆ ಕರ್ನಾಟಕ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ.ಅಡಿಕೆ ಸೇವನೆಯಿಂದ ಜೀರ್ಣಶಕ್ತಿ ಹೆಚ್ಚುತ್ತದೆ ಎಂಬುದು ತಜ್ಞರ ಅಭಿಪ್ರಾಯ.ಕೃಷಿಕರ ಆರ್ಥಿಕ ಮತ್ತು ಸಾಮಾಜಿಕ ಸುಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಡಿಕೆ ಮರದ ಕಾಂಡವನ್ನು ಮನೆ ಕಟ್ಟಲು ಉಪಯೋಗಿಸಲಾಗುತ್ತದೆ.  ಹಾಳೆಯಿಂದ ತಟ್ಟೆ ಮಾಡಿ ಉಪಯೋಗಿಸುತ್ತಾರೆ. 



ಗಿಡದ ಹೆಸರು :ಕೋಕೋ ಗಿಡ
ಅಜಿತ್ ಎಸ್. 9 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಾಣಿಲ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ




ಧನುಷ್.ಪಿ   8 ನೇ ತರಗತಿ 
ಶ್ರೀ ಗುರುದೇವ ವಿದ್ಯಾ ಪೀಠ ಒಡಿಯೂರು 
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
 ಗಿಡದ ಹೆಸರು : ಮಾವಿನ ಮರ

ಮಾವಿನ ಹಣ್ಣು ‘ಹಣ್ಣುಗಳ ರಾಜ’ ಎಂದೇ ಕರೆಯಲ್ಪಡುತ್ತದೆ. ಮಾವಿನ ಗಿಡವು ಕೇವಲ ಹಣ್ಣುಗಳನು ನೀಡುವುದಲ್ಲದೆ ಹಲವಾರು ‌ಪ್ರಾಣಿ , ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ಮಾತ್ರವಲ್ಲದೆ ದಣಿದು ಬಂದವರಿಗೆ ತಂಪಾದ ನೆರಳು ನೀಡುತ್ತವೆ. ಮಾವಿನ ಮರದ ತೊಗಟೆಗಳಿಂದ ಹಲವಾರು ಮರದ ಪೀಠೋಪಕರಣ ನಿರ್ಮಿಸಲು ಸಾಧ್ಯ. ಮಾವಿನ ಹಣ್ಣುಗಳಿಂದ ಹಲವಾರು ತಿಂಡಿ, ತಿನಿಸುಗಳನ್ನು ತಯಾರಿಸಬಹುದು. ಒಟ್ಟಿನಲ್ಲಿ ಹೇಳುವುದೆಂದರೆ ಮಾವಿನ ಮರವು ಪ್ರಯೋಜನಕಾರಿ ಮರವೆಂದು ಹೇಳಬಹುದು
            ‌ 
                      


ಗಿಡದ ಹೆಸರು : ತುಳಸಿ ಗಿಡ 
ಲಿಖಿತ್ ಎಂ ಆರ್ 6ನೇ ತರಗತಿ 
ಮುಳ್ಯ ಅಟ್ಲೂರು ಶಾಲೆ ಅಜ್ಜಾವರ 
ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ





ಹೆಸರು : ವಿನುತ್    ತರಗತಿ : 5ನೇ ತರಗತಿ
ಶಾಲೆ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ, ಪೆರ್ಮಾಣು ಅಂಚೆ, ಬೆಳ್ತಂಗಡಿ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ 574214

ಗಿಡದ ಹೆಸರು : ತುಳಸಿ ಗಿಡ

ಆಯುರ್ವೇದದಲ್ಲಿ ತುಳಸಿ ಗಿಡವನ್ನು ಔಷಧಿಯಾಗಿ ಪರಿಗಣಿಸಲಾಗಿದ್ದು, ಹಿಂದೂ ಧರ್ಮದಲ್ಲಿ ದೇವತೆಯಂತೆ ಪೂಜಿಸಲ್ಪಡುತ್ತಿದೆ. ತುಳಸಿ ಗಿಡವು ದೇಹದ ಕಫ ಕಡಿಮೆ ಮಾಡುವ ಗುಣ ಹೊಂದಿದೆ. ಆದ್ದರಿಂದ ಶೀತ, ಕೆಮ್ಮು ಮುಂತಾದವುಗಳಿಗೆ ತುಂಬಾ ಹಿತಕಾರಿ ಔಷಧವಾಗಿದೆ. ತುಳಸಿ ಗಿಡದ ಎಲೆಗಳನ್ನು 
{ 5-16 } ತೊಳೆದು ಅದರ ರಸಕ್ಕೆ 1-2 ಲವಂಗ, 1/2 ಇಂಚು ಶುಂಠಿ, ಒಂದು ಚಿಟಿಕೆ ಅರಸಿನ ಹಾಕಿ ಸ್ವಲ್ಪ ನೀರು ಹಾಕಿ 5 ನಿಮಿಷ ಕುದಿಸಿ ಕಷಾಯ ತಯಾರಿಸಿ. ಅದನ್ನು ಬೆಳಗ್ಗೆ, ಸಾಯಂಕಾಲ 2 ಬಾರಿ ಸೇವಿಸುವುದರಿಂದ ಕೆಮ್ಮು, ನೆಗಡಿ ಕಡಿಮೆಯಾಗುತ್ತದೆ.
{ 5-8 } ತುಳಸಿ ಗಿಡದ ಎಲೆಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ, ಒತ್ತಡ ನಿವಾರಣೆಯಾಗುತ್ತದೆ. ಚರ್ಮ ರೋಗಗಳಿಗೆ 
ತುಳಸಿ ಎಲೆಯ ರಸ ಹಚ್ಚಿದರೆ ಬೇಗ ಗುಣಮುಖವಾಗಬಹುದು.





ಗಿಡದ ಹೆಸರು - ಸಾಂಬ್ರಾಣಿ ಗಿಡ
ಲಾವಣ್ಯ.ಡಿ.  2ನೇ. ತರಗತಿ 
ಶ್ರೀದೇವಿ ಹಿರಿಯ ಪ್ರಾಥಮಿಕ ಶಾಲೆ ದೇವಿನಗರ,ಪುಣಚ. ಬಂಟ್ವಾಳ ತಾಲೂಕು, 
ದಕ್ಷಿಣ ಕನ್ನಡ ಜಿಲ್ಲೆ




ಹೆಸರು:-Ashton Leswin vas
ತರಗತಿ :-10
ಶಾಲೆ :-ಹೋಲಿ ಸೇವಿಯರ್ ಇಂಗ್ಲೀಷ್ ಮೀಡಿಯಂ ಶಾಲೆ ಆಗ್ರಾರ್ ಬಂಟ್ವಾಳ್ 574211 ದ. ಕ.

ಗಿಡದ ಹೆಸರು : ಅಮೃತಬಳ್ಳಿ 
ಹಿಂದಿಯಲ್ಲಿ ಗಿಲೊಯ್ , ಇಂಗ್ಲಿಷ್ನಲ್ಲಿ ಹಾರ್ಟ್ ಲಿವಡ್ ಮೂನ್ ಸೀಡ್ , ಮಲಯಾಳಂನಲ್ಲಿ ಚಿಟ್ಟಾಮೃತಾ ಅಂತ ಹೇಳುತ್ತಾರೆ. ಈ  ಬಳ್ಳಿ ತ್ರೀದೋಷ ಅಂದ್ರೆ ವಾತ, ಪಿತ್ತ, ಮತ್ತು ಕಫ ವನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿದೆ. ಇದನ್ನು ಎಲ್ಲಿ ಬೇಕಾದ್ರು ಯಾವಾಗ ಬೇಕಾದ್ರು ಬೆಳಸಬಹುದು.  ಯಾವುದೇ ಗೊಬ್ಬರ ಬೇಕಾಗಿಲ್ಲ ನೀರು ಒಂದು ಇದ್ದರೆ ಸಾಕು. ಈ ಗಿಡದ ಎಲೆ, ಬೇರು, ಬಳ್ಳಿಯಲ್ಲಿಯೂ ಮದ್ದಿನ ಗುಣಗಳು ಇವೆ. ಜ್ವರಕ್ಕೆ ಇದರ ಕಷಾಯ ಹೇಳಿದ ಮದ್ದು. ಇದನ್ನು   "ಇಂಡಿಯನ್ ಕ್ವೀನೈನ್ " ಎಂಬ ಹೆಸರು ಕರೆಯುತ್ತಾರೆ. 




ಆದಿತ್ಯ ಕೆ  9ನೇ ತರಗತಿ 
ಎಸ್. ವಿ. ಎಸ್. ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ
ಗಿಡದ ಹೆಸರು : ತುಳಸಿಗಿಡ





















Ads on article

Advertise in articles 1

advertising articles 2

Advertise under the article