-->
ಹಸಿರು ಯೋಧರು - 1

ಹಸಿರು ಯೋಧರು - 1

     ಜೂನ್ - 5 ವಿಶ್ವ ಪರಿಸರ ದಿನ 
    ಮಕ್ಕಳ ಹಸಿರ ಲೇಖನ ಮಾಲೆ
    ಮಕ್ಕಳ ಜಗಲಿಯ ಹಸಿರು ಯೋಧರು
ಹೆಸರು : ಅಂಕಿತ
ತರಗತಿ : 8
ದ. ಕ. ಜಿ. ಪಂ. ಹಿ. ಪ್ರ. ಶಾಲೆ ಅನಂತಾಡಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಅಲೋವೆರಾ ಗಿಡ :
     ಅಲೋವೆರಾ ಒಂದು ರಸಭರಿತ ಜಾತಿಯ ಗಿಡ.
ಇದನ್ನು ಕನ್ನಡದಲ್ಲಿ ಲೋಳೆಸರ ಎಂದು ಕರೆಯುತ್ತಾರೆ. ಇದರ ಹುಟ್ಟಿನ ಮೂಲ ಉತ್ತರ ಆಫ್ರಿಕಾದಲ್ಲಿ. ಅಲೋವೆರಾ ಅನೇಕ ಪ್ರಯೋಜನ ನೀಡುವ ಸಸ್ಯಗಳಲ್ಲಿ ಒಂದು. ವಿಟಮಿನ್ C ಮತ್ತು E ಭರಿತ ಅಲೋವೆರಾ ಚರ್ಮವನ್ನು ಆರೋಗ್ಯ ಮತ್ತು ಕಾಂತಿಯುಕ್ತವಾಗಿ ಇಡುತ್ತದೆ. ಇದನ್ನು ಸಾಕಷ್ಟು ಔಷಧಿಗಳಲ್ಲಿ ಮತ್ತು ನಾಟಿ ಔಷಧಿಗಳಲ್ಲಿ ಆಯುರ್ವೇದದಲ್ಲಿ ಬಳಕೆ ಮಾಡುತ್ತಾರೆ.


 ಮಿಥಿಲ್ ವಿಟ್ಲ    5ನೇ ತರಗತಿ
 ಡಿ. ಪಾಲ್ ಆಂಗ್ಲ ಮಾಧ್ಯಮ ವಸತಿ ಶಾಲೆ, ಮೈಸೂರು

  ಗಿಡದ ಹೆಸರು : ಅಮೃತಬಳ್ಳಿ 
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗಿಡಬಳ್ಳಿಗಳಲ್ಲಿ ಅಮೃತ ಬಳ್ಳಿ ಯೂ ಒಂದು. ಆಯುರ್ವೇದ ದಲ್ಲಿ ಅಮೃತ ಬಳ್ಳಿಗೆ ಹೆಚ್ಚಿನ ಮಹತ್ವವಿದೆ. ಇದನ್ನು ಔಷದಿಯಾಗಿಯೂ ಉಪಯೋಗಿಸುತ್ತಾರೆ. ಜ್ವರ ಬಂದಾಗ ಅಮೃತ ಬಳ್ಳಿಯ ಕಷಾಯ ಒಂದು ಉತ್ತಮ ಔಷಧಿ. 
  ಹೆಸರು: ವರ್ಷ
  ದ. ಕ. ಜಿ. ಪಂ. ಹಿ. ಪ್ರ. ಶಾಲೆ ಅನಂತಾಡಿ ಬಂಟ್ವಾಳ       ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

 ಗಿಡದ ಹೆಸರು : ಬಿಳಿದಾಸವಾಳ
 
 ಉಪಯೋಗ :- ಈ ದಾಸವಾಳ ಎಲೆಯಿಂದ ತಂಪು ಪಾನೀಯ ತಯಾರಿಸಲಾಗುತ್ತದೆ.ಹಾಗೂ ಈ ದಾಸವಾಳ ಹೂವಿನ ದಳದಿಂದ ದೋಸೆ ಮಾಡುತ್ತಾರೆ. ಹಾಗೂ ಇದರ ಹೂವನ್ನು ಒಣಗಿಸಿ ಅದನ್ನು ಪುಡಿ ಮಾಡಿ ತೆಂಗಿನ ಎಣ್ಣೆ ಗೆ ಹಾಕಿ ಅದನ್ನು ಕಾಯಿಸಿ ತಲೆಗೆ 
ಹಚ್ಚಿದರೆ ತಲೆ ನೋವು ಕಡಿಮೆಯಾಗುವುದು.
ಹಾಗೂ ಉಷ್ಣವನ್ನು ಕೂಡ ಕಡಿಮೆಯಾಗುವುದು. 
ಮತ್ತು ತಲೆ ತಂಪೆನಿಸುತ್ತದೆ. ಮತ್ತು ಉಷ್ಣದಿಂದ ಹೊಟ್ಟೆ ನೋವು ಬಂದರೆ ಇದರ ಎಲೆ ಸಹಕಾರಿಯಾಗುತ್ತದೆ.
 ಈ ಹೂವಿನಲ್ಲಿ *ಔಷಧಿಯ* ಗುಣ ಇದೆ ...
ಹೆಸರು : ಶರಣ್ಯ
ದ. ಕ. ಜಿ. ಪಂ. ಹಿ. ಪ್ರ. ಶಾಲೆ ಅನಂತಾಡಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಈ ಗಿಡದ ಹೆಸರು ಸಪೋಟ
ಇದರಿಂದ ಆಗುವ ಉಪಯೋಗ :
ಇದು ಚರ್ಮ ಮತ್ತು ಕೂದಲಿನ ಅರೋಗ್ಯ ಗೆಚ್ಚಿಸಲು ಸಹಾಯ ಮಾಡುತ್ತೆ. ಕೂದಲಿಗೆ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮತ್ತು ಮಾನಸಿಕ ಆರೋಗ್ಯ ಕಾಪಾಡುತ್ತದೆ. ಕಣ್ಣಿನ ಆರೋಗ್ಯಕ್ಕೆ ಸಪೋಟ ಹಣ್ಣಿನಿಂದ ವಿಟಮಿನ್ *ಎ* ಕಣ್ಣಿನ ದೋಷವನ್ನು ಸರಿ ಮಾಡುತ್ತೆ. ದೇಹದ ಮತ್ತು ಚರ್ಮದ ಆರೋಗ್ಯ ಉತ್ತಮವಾಗಿ ನೋಡಿಕೊಳ್ಳುತ್ತೆ. ಸಪೋಟ ಹಣ್ಣಿನ ಬೀಜದ ಎಣ್ಣೆ ಕೂಡಲನ್ನು ಮೃದುಗೊಳಿಸುತ್ತೆ. ಇದು ಸೌಂದರ್ಯ ಹೆಚ್ಚಾಗಲು ಸಹಾಯವಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ಸಹಾಯವಾಗುತ್ತೆ.
ವಿಭಾಶ್ರೀ 9ನೇ ತರಗತಿ 
ಎಸ್ . ವಿ . ಎಸ್ ಟೆಂಪಲ್ ಸ್ಕೂಲ್
ಬಂಟ್ವಾಳ ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು: ಭೃಂಗರಾಜ
ಭೃಂಗರಾಜ ಒಂದರಿಂದ ಎರಡು ಅಡಿ ಎತ್ತರ ಬೆಳೆದು ನೆಲದಲ್ಲಯೋ ಹರಡುವ ಸಣ್ಣಗಿಡ . ನೀರಿರುವ, ನೀರು ನಿಲ್ಲುವ ಪ್ರದೇಶದಲ್ಲಿ ಬೆಳೆಯುವ ಸಸ್ಯ. ಭೃಂಗರಾಜ, ಕೇಶ ರಾಜ ಆಯುರ್ವೇದದಲ್ಲಿ ನ ಹೆಸರುಗಳು. ಭೃಂಗರಾಜ ಸೊಪ್ಪಿನ ಇಡೀ ಗಿಡ ಅಥವಾ ಖಾಂಡ ಸಹಿತ ಎಲೆಗಳನ್ನು ಔಷಧಿಗಾಗಿ ಬಳಸುತ್ತಾರೆ. ರುಚಿಯಲ್ಲಿ ಸ್ವಲ್ಪ ಕಹಿ ಇರುವ ಇದು ಕಫ, ವಾತ ಸಂಬಂಧ ತೊಂದರೆ, ರಕ್ತಹೀನತೆ, ಕೆಮ್ಮು, ದಮ್ಮು, ಚರ್ಮದ ಕಾಯಿಲೆ, ಕೂದಲುದುರುವುದು. ಮುಂತಾದವುಗಳನ್ನು ನಿವಾರಿಸುತ್ತದೆ.


ಹೆಸರು : ಆಶ್ವಿಕ್
ತರಗತಿ : 1
ದ.ಕ. ಜಿ. ಪಂ. ಹಿ. ಪ್ರ. ಶಾಲೆ ಅನಂತಾಡಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಸಾಂಬ್ರಾಣಿ ಗಿಡ (ದೊಡಪತ್ರೆ)-

ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಮಹತ್ವದ ಸ್ಥಾನ.
ಇದನ್ನು ಸಾಂಬ್ರಾಣಿ, ಸಂಬಾರಬಳ್ಳಿ, ಅಜವಾನದೆಲೆ, ಕರ್ಪೂರವಳ್ಳಿ, ಚೆಂಪರವಳ್ಳಿ ಹೀಗೆ ಹಲವು ಹೆಸರುಗಳಿಂದ ಕರೆಯುತ್ತೇವೆ.ಇದರ ಎಲೆಗಳು ದಪ್ಪವಾಗಿದ್ದು, ನೀರಿನ ಅಂಶ ಹೆಚ್ಚಿರುತ್ತದೆ.
ಹೆಸರು: ಶ್ರೇಯಾ
ತರಗತಿ:8
ದ. .ಕ. ಜಿ. ಪಂ. ಹಿ. ಪ್ರ. ಶಾಲೆ ಅನಂತಾಡಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು : ಎಕ್ಕ ಗಿಡ ( ಲಕ್ಕಿ ಗಿಡ) 
ಉಪಯೋಗ :
ಎಕ್ಕದ ಗಿಡವನ್ನು ಔಷಧೀಯ ಗಿಡವೆಂದು ಕರೆಯುತ್ತಾರೆ.
ಎಕ್ಕದ ಗಿಡವೂ ಚಿಕ್ಕದಾಗಿರುತ್ತದೆ ಎಲೆಯು ಆಲದ ಮರದ ಎಲೆಯ ಹಾಗೆ ದಪ್ಪ ಇರುತ್ತದೆ 
ಹೂವುಗಳಿಂದ ಡಯಾಬಿಟೀಸ್, ಕುಷ್ಠರೋಗ ಮತ್ತು ಎಲೆಗಳಿಂದ ಸ್ಕಿನ್ ಅಲರ್ಜಿ,ಕೆರೆತವೂ ದೂರವಾಗುತ್ತದೆ 
 ಇದರ ಹೂವನ್ನು ಇಂಗ್ಲಿಷ್ ಅಲ್ಲಿ crown flower ಎನ್ನುತ್ತಾರೆ.  ಕೀಲು ನೋವಿಗೆ ಎಕ್ಕ ಗಿಡದ ಎಲೆ ಸಹಾಯಕಾರಿ. ಎಕ್ಕದ ಎಲೆಗಳನ್ನು ಕೀಳುವಾಗ ಅದರ ಹಾಲು ಕಣ್ಣಿಗೆ ಬೀಳದಂತೆ ನೋಡಿಕೊಂಡು ಕೀಳಬೇಕು ಎಕ್ಕದ ಗಿಡದಲ್ಲಿ ಅನೇಕ ಔಷಧಿ ಗುಣಗಳಿಗೆ.
ಹೆಸರು :ಸಾನಿಕ
ತರಗತಿ :5
ದ .ಕ. ಜಿ. ಪಂ. ಹಿ. ಪ್ರ. ಶಾಲೆ ಅನಂತಾಡಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಅರಶಿನ ಗಿಡ :  ಪ್ರಯೋಜನಗಳು : 
ರಕ್ತದ ಸೋರಿಕೆಯನ್ನು ತಡೆಯಲು ಅಥವಾ ಗಾಯವನ್ನು ಗುಣಪಡಿಸಲು ಅರಿಶಿನನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಕೆಲವೊಮ್ಮೆ ಅರಿಶಿನ ಹಾಲನ್ನು ಕಫಾ ಕಡಿಮೆ ಮಾಡಲು ಮತ್ತು ನೋವು ನಿವಾರಿಸಲು ಬಳಸಲಾಗುತ್ತದೆ. ಶೀತವಾದರೆ ಹಾಲಿಗೆ ಅರಿಶಿನವನ್ನು ಬೆರೆಸಿ ಕುಡಿದರೆ ಶೀತ ಬೇಗನ ಕಡಿಮೆಯಾಗುತ್ತದೆ.ಹಸಿ ಅರಿಶಿನ, ಒಣ ಅರಶಿನ, ಕಸ್ತೂರಿ ಅರಶಿನ ಹೀಗೆ ಬೇರೆ ಬೇರೆ ವಿಧಗಳ ಅರಿಶಿನಗಳು ಲಭ್ಯವಿವೆ.ಆಯುರ್ವೇದ ಔಷಧ ಪದ್ಧತಿಗಳಲ್ಲೂ ಅರಿಶಿನಕ್ಕೆ ಒಂದು ಪ್ರಮುಖ ಸ್ಥಾನವಿದೆ. ಅರಶಿನದ ಎಲೆಯಿಂದ ಕಡುಬು ಮಾಡುತ್ತಾರೆ.
ಹೆಸರು. ರಿತಿಕಾ  
ತರಗತಿ. 7ನೇ ತರಗತಿ 
ದ .ಕ. ಜಿ. ಪಂ. ಹಿ. ಪ್ರ. ಶಾಲೆ ಅನಂತಾಡಿ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

ಗಿಡದ ಹೆಸರು. ನಿತ್ಯಪುಷ್ಪ 
ಉಪಯೋಗ :  ಆಹಾರವನ್ನು ಪಚನಗೊಳಿಸಿ ಶಕ್ತಿಯುತವಾಗಿ ಮಾಡುತ್ತದೆ ಡಯಾಬಿಟೀಸ್ ಮಲೇರಿಯಾ ಗಂಟಲು ನೋವು ಕಾಯಿಲೆಗಳಿಗೆ ಔಷಧ ಬಳಸುತ್ತಾರೆ ಹಾಗೆ ರಕ್ತದೊತ್ತಡ ವನ್ನು ಕಡಿಮೆ ಮಾಡಬಹುದು ಇದರ ಎಲೆಗಳನ್ನು ಒಣಗಿಸಿ ಪುಡಿಮಾಡಿ ತಿಂದರೆ ಡಯಾಬಿಟೀಸ್ ಕಡಿಮೆಯಾಗುತ್ತದೆ ನಿತ್ಯಪುಷ್ಪ ಗಿಡದಿಂದ ತುಂಬಾ ಉಪಯೋಗವಿದೆ
   ಚರಿಷ್ಮಾ 4 ನೇ ತರಗತಿ 
   ಎಸ್. ವಿ. ಎಸ್. ಟೆಂಪಲ್ ಸ್ಕೂಲ್ ಬಂಟ್ವಾಳ 
   ದಕ್ಷಿಣ ಕನ್ನಡ ಜಿಲ್ಲೆ
    ಗಿಡದ ಹೆಸರು : ಕೇಪಳ ಹೂವು
Ads on article

Advertise in articles 1

advertising articles 2

Advertise under the article