-->
ಸಣ್ಣ ಕವನಗಳು

ಸಣ್ಣ ಕವನಗಳು

ಶ್ರೇಯ 8 ನೇ ತರಗತಿ
ಆಂಗ್ಲ ಮಾಧ್ಯಮ ವಿಭಾಗ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ


ಸೂರ್ಯ   

ಮುಂಜಾನೆ ಬಂದ ಸೂರ್ಯ   
ಬೆಳಕನು ಚೆಲ್ಲಿದ...
ಹಸಿರಿನಿಂದ ಕಂಗೊಳಿಸಿತು ಇಳೆ.
ಖುಷಿಯಿಂದ ಕುಣಿದವು 
ಗಿಡ ಮರ ಎಲೆ....
ಚಿಗುರಿ ಬೆಳೆದವು ಗಿಡಗಳು
ಮರದಿಂದ ದೊರೆತವು ಹಣ್ಣುಗಳು..! 
ದಿನದ ಪ್ರಾರಂಭ ನಿನ್ನಿಂದ....
ನೀನು ಮರೆಯಾದರೆ 
ಬೆಳಕು ಎಲ್ಲಿಂದ..?
ಪ್ರಕೃತಿ

ಸುಂದರವಾದ ಪ್ರಕೃತಿ
ಸದಾ ಹಸಿರಾಗಿ ಕಂಗೊಳಿಸುತಿದೆ....
ಪ್ರಾಣಿ ಪಕ್ಷಿಗಳಿಗಾಸರೆ
ಸಕಲವನ್ನೂ 
ಒದಗಿಸುವ ಇಳೆ
ಗಿಡ ಮರಗಳೇ ನಿತ್ಯ
ನೆರಳು - ಆಹಾರ ನೀಡುತ್ತವೆ....
ಅರಣ್ಯ ಸಂಪತ್ತುಗಳನ್ನು ಹೊಂದಿ
ಚಿನ್ನ ಬೆಳ್ಳಿ 
ಈ ಭೂಮಿಯಲ್ಲಡಗಿದೆ....
ಸುಂದರ ಸೊಬಗು
ವಿಸ್ಮಯ ಈ ಪ್ರಕೃತಿ...!!!
 ಮಳೆ 

ಮಳೆ ಬಂತು ಭೂಮಿಗೆ
ಗುಡುಗು ಸಿಡಿಯಿತು
ಮಿಂಚು ಕಂಡಿತು
ತುಂಬಿ ಹರಿಯಿತು ನದಿಗಳು..... 
ಖುಷಿಯ ಕೇಕೆ 
ನಕ್ಕು ನಲಿದು
ಆಟ ಆಡಿದೆವು....!!
ಹಸಿರ ಮೆರುಗು
ನದಿಯ ಸೊಬಗು
ಕಂಡು ಬೆರುಗು
ಪುಳಕರಾದೆವು...!!!


 ಬಿಸಿಲು

ಧಗ ಧಗ 
ಸುಡುವ ಬಿಸಿಲು...
ಒಣಗಿ ಹೋದವು 
ಗಿಡಮರಗಳು....!
ಖಾಲಿ-ಖಾಲಿ ಆದವು 
ನದಿ ಕೆರೆಗಳು...!!
ಮರೆಯಾಯಿತು ನೀರು
ಕಷ್ಟವಾಯಿತು ಬದುಕಲು .....!!!

 ತಾಯಿ

ತಾಯಿ ಎಂಬ ಎರಡಕ್ಷರ
ನನ್ನ ಉಸಿರು....
ಅವಳು ನಮ್ಮನ್ನು 
ಒಂಬತ್ತು ತಿಂಗಳು
ಹೊತ್ತು - ಹೆತ್ತು
ಸಾಕಿ ಸಲಹುವಳು...!!
ಅವಳಿಗೆ ಎಷ್ಟೇ ಕಷ್ಟವಾದರು
ಅದನು ನಮಗೆ ತೋರಿಸದೆ
ನಗು ನಗುತ್ತಾ ಇರುವಳು...!!
ಏನು ಬೇಕು 
ಕೇಳಿದ ತಕ್ಷಣ
ಕೊಡಿಸುವಳು ತಾಯಿ 
ಅವಳೆಂದರೆ ಕಣ್ಣಿಗೆ 
ಕಾಣುವ ದೇವರು ......!!! ಕನಸು

ಕನಸು ಕಂಡರೆ ಅದು
ಸಿಹಿ ಸಿಹಿಯಾಗಿರಬೇಕು
ಕನಸು ನನಸಾಗಬೇಕು...!!
ಕೆಟ್ಟ ಕನಸು  
ಕಾಣಲೇಬಾರದು .....
ಜೀವನ ಹೀಗೆ ಸಾಗಬೇಕು
ಕುಣಿಯುತ ನಲಿಯುತಲಿದ್ದರೆ 
ಖುಷಿಯಾಗುತದೆ ಮನಸು.....!!!

 ಹೆಣ್ಣು

ಅಮ್ಮ , ಅತ್ತೆ , ಅಜ್ಜಿ .... 
ಅಕ್ಕ ತಂಗಿ.......
ಬರುವ ಜೀವನದ 
ಎಲ್ಲಾ ಪಾತ್ರವನ್ನು  
ನಿಭಾಯಿಸುತ್ತಾಳೆ 
ಚೆನ್ನಾಗಿ ಹೆಣ್ಣು....!!
ಯಾವುದು ಇಲ್ಲ 
ಅಸಾಧ್ಯದ ಕೆಲಸ .....
ಗೌರವ ನೀಡಬೇಕು ಹೆಣ್ಣಿಗೆ
ಸಾಟಿ ಇಲ್ಲ ಯಾರು ಅವಳಿಗೆ
ಹೆಣ್ಣು ಸಂಸಾರದ ಕಣ್ಣು....!!!!


ಶ್ರೇಯ 8 ನೇ ತರಗತಿ
ಆಂಗ್ಲ ಮಾಧ್ಯಮ ವಿಭಾಗ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

Ads on article

Advertise in articles 1

advertising articles 2

Advertise under the article