ಮುಂಜಾನೆ ಕವನ
Monday, May 10, 2021
Edit
ಪ್ರೇಕ್ಷ ದ್ವಿತೀಯ ಪಿಯುಸಿ
ವಿಜ್ಞಾನ ವಿಭಾಗ
ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ
ಮುಂಜಾನೆ ಕವನ
ಮುಂಜಾನೆಯ ಬಾನಲಿ
ಮಂಜಿನ ನಸುಕಿನಲ್ಲಿ
ಕೂಗುತ್ತಿರುವ ಹಕ್ಕಿಗಳ ಕಲರವ.......!!
ಮೂಡಣ ದಿಕ್ಕಿನಲ್ಲಿ
ಆಗ ತಾನೇ ಹುಟ್ಟಿ
ಮೇಲಕ್ಕೇತಿರುವ ಸೂರ್ಯ...!!
ತಂಪ ಬೆಳಕಿನ ಹೊದಿಕೆಯಿಂದ
ಸೂರ್ಯನ ಕಂಡು
ಮರೆಯಾಗುತ್ತಿರುವ ಚಂದಿರ...!!
ಮುಂಜಾನೆಯ ತಂಪಲಿ
ಅರಳುತ್ತಿರುವ ಹೂಗಳು..!!
ನೀಡುತ್ತಿವೆ ಪ್ರಕೃತಿಗೆ ಸೊಬಗನು..!!
ಬೀಸುತ್ತಿರುವ ತಂಪು ಗಾಳಿಯು
ನೀಡುತ್ತಿದೆ ಮನಸ್ಸಿಗೆ ಹಿತವನು..!!
ಮುಂಜಾನೆಯ ಪ್ರಕೃತಿಯ ಸೊಬಗನು .... ಸವಿಯುವುದೇ ಮನಸ್ಸಿಗೆ
ನೀಡುವುದು ಆನಂದವನು......!!!
ಪ್ರೇಕ್ಷ ದ್ವಿತೀಯ ಪಿಯುಸಿ
ವಿಜ್ಞಾನ ವಿಭಾಗ
ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ