
ಕೊರೋನ - ಕವನ
Monday, May 10, 2021
Edit
ಧೃತಿ 8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ಳಾಡು ಗ್ರಾಮ ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
ಕೊರೋನ - ಕವನ
ಕೊರೊನಾ ನಿನಗೇಕೆ
ನಮ್ಮ ಮೇಲೆ ಕೋಪ...!!
ನಾವೇನು ಮಾಡಿದ್ದೇವೆ
ಅಷ್ಟೊಂದು ಪಾಪ...!!
ಅಳಿದು ಹೋಗು ಒಮ್ಮೆ ಬೇಗ....
ನೀ ಹೋದರೆ.....
ಖುಷಿಯಾಗುವುದು ಆಗ...!!
ನೀನೇಕೆ ಬಂದೆ
ಈ ಭೂಮಿಗೆ ಮಹಾಮಾರಿ ....!!
ಮಾಸ್ಕ್ ಹಾಕಿ ಎಂದು ಹೇಳುವರು
ಸಾರಿ ಸಾರಿ...!!!
ಒಬ್ಬರಿಂದ ಒಬ್ಬರಿಗೆ ಹರಡುವುದು
ನೀ ಬೇಗ
ನಿತ್ಯ ಮರಣ ಮೃದಂಗ
ನೂರಾರು ರೋಗಿಗಳಿಗೆ...!!
ಮದ್ದನ್ನು ಕಂಡುಹಿಡಿಯುವ ಜನ
ಸಾವಿರಾರು .....!!!
ಫಲಿಸಲು ನಾವ್ಯಾರು...
ಪ್ರಕೃತಿಯ ಏಟಿಗೆ...!!
ಓ ಕೊರೊನಾ ನೀ ಹೋಗು ಬಾರದೂರಿಗೆ
ಇನ್ನು ಎಂದಿಗೂ ಬಾರದಿರು ನಮ್ಮೂರಿಗೆ...!!!
ಧೃತಿ 8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಗ್ರಾಮ ಬಂಟ್ವಾಳ ತಾಲೂಕು