
ಸೂರ್ಯೋದಯ ಮತ್ತು ನವಿಲು - 2 ಕವನಗಳು
Wednesday, March 3, 2021
Edit
ಸುಹಾನ್ ನಾಯಕ್ 7ನೇ ತರಗತಿ
ಬಿ.ಎಂ.ಅ.ಹಿ.ಪ್ರಾ.ಶಾಲೆ, ಮೂರೂರು,
ಹಿರ್ಗಾನ, ಕಾರ್ಕಳ ತಾಲೂಕು
ಸೂರ್ಯದಯ - ಕವನ
ನೀಲಗಗನದಿ ಸರಿಸುತ್ತಾ ಕತ್ತಲೆಯ
ಆಯಿತು ಸೂರ್ಯೋದಯ...!!
ಲೋಕಕೆ ದಿನಗರೆಯುವ ಸೂರ್ಯ
ಅಹಂಕಾರವೇನೆಂಬುದನರಿಯ...!!
ಮೇಲು-ಕೀಳೆಂಬ ಬೇಧಭಾವವನರಿಯ
ಎಲ್ಲರಿಗೂ ಸರಿಸಮಾನ ಬೆಳಕು
ನೀಡುವ ಸೂರ್ಯ......!!
ಎಷ್ಟೇ ಇರಲಿ ಭೂಮಿಯ ಮಾಲಿನ್ಯ
ಅದನೆಲ್ಲಾ ಸಹಿಸುತ್ತಾ ಮಾಡುವನು
ತನ್ನ ಕಾರ್ಯ...!!
******************************
ನವಿಲು - ಕವನ
ಅಂಗಳದಲಿ ನವಿಲೊಂದು ಕುಣಿಯುತಿದೆ
ಸುಮ್ಮನಿರುವ ಮನಸನದು ಸೆಳೆಯುತಿದೆ !
ಮನಸೋತೆ ನಾನದರ ಸೊಬಗಿನ ನಾಟ್ಯಕೆ
ಕುಣಿಯುತಿರಲು ಹರುಷದಿಂದ ತನ್ನಷ್ಟಕೆ !
ಬಹುಮಾನ ಬೇಕಿಲ್ಲ, ಯಾರ ಮೆಚ್ಚಿಸಲಲ್ಲ
ಗರಿಬಿಚ್ಚಿ ಕುಣಿಯುತಿರಲು
ನೋಡುತಿಹರು ಜನರೆಲ್ಲ ..!
ತೋರುತಿರಲು ನವಿಲದು ಸುಂದರ ಗರಿಗಳ
ಸೆಳೆದಿದೆ ನಲಿಯುತ
ಸಾವಿರ ಮನಗಳ...!!
................ಸುಹಾನ್ ನಾಯಕ್ 7ನೇ ತರಗತಿ
ಬಿ.ಎಂ.ಅ.ಹಿ.ಪ್ರಾ.ಶಾಲೆ, ಮೂರೂರು,
ಹಿರ್ಗಾನ, ಕಾರ್ಕಳ ತಾಲೂಕು