-->
ಮೂರು ಕವನಗಳು

ಮೂರು ಕವನಗಳು

    ಉಮಾವತಿ 8 ನೇ ತರಗತಿ
    ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
    ಬಂಟ್ವಾಳ ತಾಲೂಕು

   ..............ಮೂರು ಕವನಗಳು............

            ನಟನೆ

ನಗು ತುಂಬಿರೊ ಮೊಗದಲಿ
ಮಂದಹಾಸದ ಸುಳಿವಿಲ್ಲ....!!
ಬಣ್ಣಗಳೇ ತುಂಬಿರುವ ಈ ಲೋಕದ
ಹಲವರ ಬದುಕಿನಲ್ಲಿ ನಗು ಚೆಲ್ಲುವ
ಬಣ್ಣಗಳಿಲ್ಲ....!!
ಸಂತೋಷವಿರದ ಬದುಕಿನಲ್ಲಿ
ಖುಷಿ ಇರುವ ಹಾಗೆ ನಟಿಸಿ 
ಬದುಕುವವರೆ ಎಲ್ಲಾ.....!!!!

     *************************

           ವರುಣನ ಆರ್ಭಟ 

ಶಾಂತವಾಗಿತ್ತು ನಿನ್ನ ಮನ
ಆ ಮನವನ್ನು ಕಲಕಿ ತಪ್ಪು ಮಾಡಿದರಲ್ಲ...!
ನಿನ್ನ ಈ ಆರ್ಭಟ ರೌದ್ರಾವತಾರಕ್ಕೆ
ಬಲಿಯಾದವರಲ್ಲಿ ಲೆಕ್ಕವಿಲ್ಲ...!!!

                ಯಾರು ಎಷ್ಟೇ ಕೇಳಿಕೊಂಡರು ಕೂಡ
                 ಯಾಕೆ ನಿನ್ನ ಮನ ಶಾಂತಗೊಳ್ಳಲಿಲ್ಲ 
                 ಅಷ್ಟೊಂದು ನೋವು ಮಾಡಿದರೆ??

ನೀನು ಶಾಂತಗೊಳ್ಳುವಷ್ಟರಲ್ಲಿ
ಅದೆಷ್ಟೋ ಜನ - ಮನ ಅನಾಥವಾಗಿದೆ
ಅದಕ್ಕೆ ಪರಿಹಾರ ನಿನ್ನಿಂದ ಕೊಡಲಾಗುವುದೇ..!!

                  ನಿನ್ನಡೆಗೆ ಕರಿಸಿಕೊಂಡವರನ್ನು
                  ನಾನಿರುವೆಡೆಗೆ ಕಳುಹಿಸಿಕೊಡಬಲ್ಲೇಯಾ

                 ಸಾಧ್ಯನಾ ಗೆಳೆಯ??
ಈಗ ಮತ್ತೆ ಶಾಂತವಾಗಿರುವೆ
ಯಾರು ಏನು ಮಾಡಬಹುದೆಂದು
ನೋಡುತ್ತಿರುವೆಯಾ ಅಥವಾ ಅವರ 
ತಪ್ಪುಗಳನ್ನು ಲೆಕ್ಕ ಹಾಕುತ್ತಿರುವೆಯಾ??

************************************

ಮಕ್ಕಳು

ಮಕ್ಕಳಿಗೆಲ್ಲೂ ಭೇದ ಇಲ್ಲ
ಮಕ್ಕಳ ಸ್ವಭಾವ ಅರಿತಿರಿ ಎಲ್ಲಾ
ಅವರ ಪುಟ್ಟ ಕೈಕಾಲು 
ನಿಲ್ಲುವುದಿಲ್ಲ ಎಲ್ಲೂ....!!
     
    ಸಿಹಿ ತಿಂಡಿ ಅವರಿಗೆ ಇಷ್ಟ
    ಆಟಿಕೆ ಇಲ್ಲದಿದ್ದರೆ ತುಂಬಾ ಕಷ್ಟ
    ಅಳುತ್ತಾರೆ ಎಲ್ಲರ ಮುಂದು
    ನಗುತ್ತಾರೆ ಎಂದೆಂದೂ...!!

.......................ಉಮಾವತಿ 8 ನೇ ತರಗತಿ
    ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
    ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article