
ತಾಯಿ - ಕವನ
Wednesday, March 3, 2021
Edit
ಪ್ರೇಕ್ಷ ದ್ವಿತೀಯ ಪಿಯುಸಿ
ವಿಜ್ಞಾನ ವಿಭಾಗ
ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ
ಬಂಟ್ವಾಳ ತಾಲೂಕು
ತಾಯಿ - ಕವನ
ನನ್ನ ಉಸಿರು ನನ್ನ ತಾಯಿ,
ಅವಳು ನೀಡುವ ಮಮತೆಗೆ ಕೊನೆಯೆಲ್ಲಿ
ನನ್ನ ತಾಯಿ ನನಗೆ ಎಲ್ಲರಿಗಿಂತ ಮಿಗಿಲು,
ತಾಯಿ ಜೊತೆಯಲ್ಲಿದ್ದರೆ ಅದೇ ಆನಂದ..!
ಹಸಿವಾದಾಗ ತಾಯಿ ಉಣಿಸುವಳು ಕೈತುತ್ತು,
ದುಃಖ ಬಂದಾಗ ನೀಡುವಳು ಸಾಂತ್ವಾನ ಖುಷಿಯಾದಾಗ ಭಾಗಿಯಾಗುವಳು
ಎಲ್ಲಾ ಸಮಯದಲ್ಲಿ ಜೊತೆಗಿರುವ ಜೀವ ತಾಯಿ
ಕಷ್ಟ ಬಂದಾಗ ಮಾಡುವಳು ಸಹಾಯ ,
ಸುಖ ಬಂದಾಗ ಇರುವಳು ಜೊತೆಯಲಿ,
ಪ್ರೀತಿ ಅಕ್ಕರೆಯಿಂದ ಬೆಳೆಸುವ ಜೀವ ತಾಯಿ,
ಅವಳು ನೀಡುವ ಪ್ರೀತಿಗೆ ಕೊನೆಯೆಲ್ಲಿ...!
ನಮ್ಮ ಸಂತೋಷ ದುಃಖ ಅರ್ಥೈಸುವ ಜೀವ
ಅವಳೇ ಪ್ರೀತಿಯ ತಾಯಿ
ತಂದೆ ಶಿಸ್ತು ನೀತಿಯಿಂದ ಬೆಳೆಸುವರು ,
ಪ್ರೀತಿ ವಾತ್ಸಲ್ಯ ನೀಡಿ ತಾಯಿ ಕಾಪಾಡುವರು...
ಜಗತ್ತಿನಲ್ಲಿ ಬೆಲೆಕಟ್ಟಲಾಗದ ಜೀವ ತಾಯಿ,
ಸಿಗಬಹುದು ಕಳೆದುಕೊಂಡ ವಜ್ರ- ಬಂಗಾರ
ತಾಯಿ ಬಾಂಧವ್ಯ ಮಮತೆ ಕಳೆಯ ಬೇಡ
ಆರಿದ ಹಣತೆಯಂತೆ ಮತ್ತೆ ಸಿಗುವರಾ..?
...................ಪ್ರೇಕ್ಷ ದ್ವಿತೀಯ ಪಿಯುಸಿ
ವಿಜ್ಞಾನ ವಿಭಾಗ
ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ
ಬಂಟ್ವಾಳ ತಾಲೂಕು