ರೈತ ಮತ್ತು ಧ್ಯೇಯ - 2 ಕವನಗಳು
Wednesday, March 3, 2021
Edit
ಧೃತಿ 8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ಳಾಡು ಗ್ರಾಮ ಬಂಟ್ವಾಳ ತಾಲೂಕು
ರೈತ - ಕವನ
ಮಣ್ಣಿಲಿ ಚಿನ್ನ
ಎಲ್ಲರ ಅನ್ನ
ಬೆಳೆಯುವ ರೈತ ದೊಡ್ಡವನು...!
ಬಿಸಿಲು ಮಳೆ ಚಳಿಯ
ಗಣಿಸದೆ ದುಡಿಮೆಗೆ
ಬದುಕನು ಮುಡಿಪಾಗಿಟ್ಟಿಹನು..!
ಮಣ್ಣನು ತಣಿಸಿ
ಬೆವರನು ಸುರಿಸಿ
ಗದ್ದೆಯಲಿ ನಾಟಿ ಮಾಡುವನು...
ಬಗೆ ಬಗೆ ಕಾಳು
ಹಣ್ಣು ಹಂಪಲು
ಬೀಜವ ಬಿತ್ತಿ ಬೆಳೆದಿಹನು..!
ತನ್ನ ಕಷ್ಟವನು
ಗಣಿಸದೆ ಪರರಿಗೆ
ಅನ್ನದ ಕಣಜವನು ನೀಡುವನು...!!!
****************************************
ಧ್ಯೇಯ - ಕವನ
ವಿದ್ಯೆ ಎಂಬ ಮಂತ್ರವನ್ನು
ಕಲಿಯಲೆಂದು ದಿನಲು ನಾವು
ಶಾಲೆ ಎಂಬ ಗುಡಿಯ ಒಳಗೆ
ಬರುತಲಿರುವೆವು....!!
ದಿನವು ನಾವು ಪಾಠ ಕಲಿತು
ಎಲ್ಲರೊಂದಿಗೆ ಹಾಡಿ ನಲಿದು
ಸಂತೋಷದಿಂದಿರುವೆವು....!!
ಭೇದ ಭಾವವನ್ನು ಮರೆತು
ಶಿಸ್ತಿನಿಂದ ಶಾಲೆಗೆ
ಹೋಗಿ ಬರುವೆವು..!!
ಮನಸಲಿ ದೊಡ್ಡ ಗುರಿಯನ್ನಿಟು
ಜೀವನದಲಿ ಮುಂದೆ ಬರಲು
ಹುಮ್ಮಸ್ಸಿನಿಂದ ಓದಿ ಕಲಿಯವೆವು..!!
..................ಧೃತಿ 8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ಳಾಡು ಗ್ರಾಮ
ಬಂಟ್ವಾಳ ತಾಲೂಕು