ಜೀವನಯಾನ - ಕವನ
Thursday, February 4, 2021
Edit
ಯುವರಾಜ್ 10 ನೇ ತರಗತಿ
ಸ.ಪ್ರೌ.ಶಾಲೆ ,ಕಡೇಶಿವಾಲಯ
ಬಂಟ್ವಾಳ ತಾಲೂಕು
ಜೀವನ ಯಾನ - ಕವನ
ದೋಣಿಯೊಂದು ಕನಸುಗಳ ಹೊತ್ತು
ಸಾಗುತಲಿತ್ತು ನದಿಯಲಿ,
ನದಿ ಕೂಡ ಹರಿಯುತಲಿತ್ತು
ತೀರವಿರುವ ದಿಶೆಯಲಿ...!
ಕಂಪನು ಸೂಸುತಲಿತ್ತು
ತಂಗಾಳಿ ,
ಬಿರುಗಾಳಿ ಬೀಸಿತು
ದೋಣಿ ಬರಲು
ನದಿಯ ಮಧ್ಯದಲ್ಲಿ..!
ಕನಸ ಹೊತ್ತ ದೋಣಿ
ಮುಳುಗಿತು ನದಿಯಲಿ..!
ಕನಸೆಲ್ಲ ನೆಲ ಕಚ್ಚಿತು
ನಾವಿಕನೇ ಇರಲಿಲ್ಲ
ಆ ದೋಣಿಗೆ,ತಲುಪುವುದು ತೀರವ ಇನ್ನೆಲ್ಲಿ....!!!
ನಮಗೂ ಹಾಗೆ
ನಮ್ಮ ಬಾಳ ನೌಕಾ ಯಾನಕೆ
ಗುರುವಿನ ಮಾರ್ಗದರ್ಶನವೇ ದಿಕ್ಸೂಚಿ.....
ಗುರಿಯಿರಲಿ ಕಣ್ಣಮುಂದೆ
ಗುರುವಿರಲಿ ನಮ್ಮ ಜೊತೆಯಲಿ...
ಯಶಸ್ಸು ದೊರೆಯುವುದು ನೌಕೆ ತೀರವ ಸೇರುವುದು...!!
ಯುವರಾಜ್ 10 ನೇ ತರಗತಿ
ಸ.ಪ್ರೌ.ಶಾಲೆ ,ಕಡೇಶಿವಾಲಯ
ಬಂಟ್ವಾಳ ತಾಲೂಕು