ಎಲ್ಲರೊಂದಿಗೆ ನಾವು - ಕವನ
Thursday, February 4, 2021
Edit
ತಿಲಕ್ ರಾಜ್
10 ನೇ ತರಗತಿ
ಸ ಪ್ರೌ ಶಾಲೆ ಕಡೆಶಿವಾಲಯ , ಬಂಟ್ವಾಳ ತಾಲೂಕು
ಎಲ್ಲರೊಂದಿಗೆ ನಾವು
ಮುಂಜಾನೆಯ ಮಂಜಿನ ಹನಿ
ಮುಸ್ಸಂಜೆಯ
ಮೋಹಕ ನೋಟ
ಪ್ರಕೃತಿಯ ಜೊತೆ ನಾವು.....
ಮಸ್ತಕದಿ ನೆನಪುಗಳ
ಪ್ರತಿಪುಟವೂ
ನಮ್ಮುಸಿರ ಕಣಕಣದಿ
ತುಂಬಿಹುವುದು
ನಮ್ಮ ಜೊತೆ ನಾವು......
ಜನ್ಮ ನೀಡಿ ಸಂಸ್ಕಾರ ಕೊಟ್ಟ ಹೆತ್ತವರು
ವಿದ್ಯೆ ಕಲಿಸಿ ಬದುಕ ನೀಡಿದ ಗುರುಗಳು
ಬಂಧಗಳೊಂದಿಗೆ ನಾವು......
ಹೀಗೆ ಎಲ್ಲದರೊಂದಿಗೆ
ಎಲ್ಲರೊಡನೆ ನಾವು
ವಿಶ್ವ ಕಣಕಣದಿ ನಾವು...!!!
.......ತಿಲಕ್ ರಾಜ್
10 ನೇ ತರಗತಿ
ಸ ಪ್ರೌ ಶಾಲೆ ಕಡೆಶಿವಾಲಯ ಬಂಟ್ವಾಳ ತಾಲೂಕು