ಹೊಸತು - ಕವನ
Wednesday, February 3, 2021
Edit
ಸುಹಾನ್ ನಾಯಕ್ 7ನೇ ತರಗತಿ
ಬಿ.ಎಂ.ಅ.ಪ್ರಾ.ಶಾಲೆ ಮೂರೂರು,
ಹಿರ್ಗಾನ , ಕಾರ್ಕಳ
ಹೊಸತು - ಕವನ
ಹೊಸ ಪುಸ್ತಕದಲಿ
ಮೊದಲ ಪುಟದ ಅಕ್ಷರಗಳು
ಎಷ್ಟು ಸುಂದರ....!
ಹೊಸ ವಸ್ತುವಿನಿಂದ
ಮೂಡುವ ಭಾವನೆಯೂ
ಹೊಸತೇ ಆಗಿದೆ....!!
ಹೊಸ ವರ್ಷ, ಹೊಸ ಕವನ,
ಹೊಸ ಜನರು, ನಮ್ಮ ಯೋಚನೆಯೂ
ಹೊಸದಾಗಿರಲಿ !!
ಏನೇ ಇರಲಿ ಹೊಸತರಿಂದ
ಮೂಡುವ ಭಾವನೆ ನನ್ನಲ್ಲೂ
ಇಂದು ಹೊಸತಾಗಿದೆ !!!
ಸುಹಾನ್ ನಾಯಕ್ 7ನೇ ತರಗತಿ
ಬಿ.ಎಂ.ಅ.ಪ್ರಾ.ಶಾಲೆ
ಮೂರೂರು,ಹಿರ್ಗಾನ,
ಕಾರ್ಕಳ .