ಪ್ರಕೃತಿಮಾತೆಯ ಸೊಬಗು - ಕವನ
Wednesday, February 3, 2021
Edit
ರೂಪಶ್ರೀ ಕನ್ಯಾನ , ಪ್ರಥಮ ಪಿಯುಸಿ
ಸರ್ಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ
ಬಂಟ್ವಾಳ ತಾಲೂಕು
ಪ್ರಕೃತಿ ಮಾತೆಯ ಸೊಬಗು - ಕವನ
ಮೂಡಣದಿ ದಿನಕರನ ಉದಯ...
ಹಕ್ಕಿಗಳ ಇಂಚರದಿ ಲೋಕವೆಲ್ಲಾ ನಾದಮಯ...!
ಸುಮಗಳ ಮೊಗದ ಮೇಲೆ
ರವಿಕಿರಣಗಳ ನರ್ತನ...
ಇಬ್ಬನಿಯ ಭಾರಕೆ ಬಾಗಿರುವ ಪರ್ಣ....!!!
ವಾಯುವಿನ ತಾಳಕೆ ತಲೆದೂಗೋ
ತರು-ಲತೆಗಳ ಚೆಲುವು...
ಹೇಗೆ ವರ್ಣಿಸಲಿ ಪ್ರಕೃತಿ ಮಾತೆಯ ಸೊಬಗು...!!
ಕಿವಿಗೆ ಇಂಪು ಕೋಕಿಲನ
ಮಧುರ ವಾಣಿಯ ಕಂಪು...
ಹಸಿರು ಗಿಡಗಳ ಮೇಲೆ ಹೂ ಬರೆದ
ಚಿತ್ತಾರ ಕಣ್ಣಿಗೆ ತಂಪು.... !!!
ಹಸಿರು ಸೀರೆಯ ತೊಟ್ಟು
ಹೂಗಳ ಮುಡಿದಿಟ್ಟು...
ಕಂಗೊಳಿಸುತಿಹಳು ನಮ್ಮೀ ಭೂರಮೆ...!
ಪ್ರಕೃತಿ ಮಾತೆಯ ಸೊಬಗಿನಂದಕೆ...
ಸರಿ ಸಾಟಿ ಅಲ್ಲವೇ ಅಲ್ಲ ಆ ಸ್ವರ್ಗದ ರಂಭೆ....!!
ಸೂರ್ಯ,ಚಂದ್ರರೇ ಪ್ರಕೃತಿ ಮಾತೆಯ ಕಣ್ಣುಗಳು...
ನಕ್ಷತ್ರಗಳೇ ಈಕೆಯ ಕಿರೀಟದ ಮಣಿಗಳು...
ಇಂತು ಸೊಗಸಾಗಿರುವ ಮಾತೆಯ ಸಿರಿ...
ಕವಿಯ ವರ್ಣನೆಗೆ ಸಿಗದ ಐಸಿರಿ....!!!
ರೂಪಶ್ರೀ ಕನ್ಯಾನ , ಪ್ರಥಮ ಪಿಯುಸಿ
ಸರ್ಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ
ಬಂಟ್ವಾಳ ತಾಲೂಕು