
ಚುಟುಕುಗಳು
Wednesday, February 3, 2021
Edit
ಆದ್ಯಂತ್ ಅಡೂರು 7ನೇ ತರಗತಿ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ, ಪುತ್ತೂರು ತಾಲೂಕು,
ದಕ್ಷಿಣ ಕನ್ನಡ ಜಿಲ್ಲೆ.
ಚುಟುಕುಗಳು
ಬಾತುಕೋಳಿ
ಈಜುವುದರಲ್ಲಿ ಪರಿಣತ ಪಕ್ಷಿಯು
ಬಹುವರ್ಣದ ಬಾತುಕೋಳಿಯು
ಚಳಿಗಾಲದಲ್ಲಿ ವಲಸೆ ಹೋಗುವುದು
ಗುಂಪಾಗಿ ಇದ್ದು ಒಗ್ಗಟ್ಟು ಸಾರುವುದು !
ಗಗನ
ನೀಲಿ ಬಣ್ಣದ ಗಗನದಲಿ
ಹಕ್ಕಿಗಳು ಹಾರುವುವು ಹರುಷದಲಿ
ಸೂರ್ಯ, ಚಂದ್ರ, ತಾರೆಗಳು ನೋಡಲು ಚಂದ
ಆಕಾಶವನ್ನು ನೋಡಿದಾಗ ಆಗುವುದು ಆನಂದ !
ದ. ರಾ ಬೇಂದ್ರೆ
ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು
ಅಂಬಿಕಾತನಯದತ್ತ ಎಂದು ಪ್ರಸಿದ್ಧರಾದರು
ಅನೇಕ ಕವನಗಳನ್ನು ಬರೆದರು
ಎಲ್ಲರ ಮನವನು ಗೆದ್ದವರು !
ಚಂಡಮಾರುತ
ಚಂಡಮಾರುತವು ಬಂದಿತು
ಬಿರುಸಿನ ಮಳೆಯು ಸುರಿಯಿತು
ಚಳಿ ಚಳಿ ಗಾಳಿಯು ಬೀಸಿತು
ವಿವಿದೆಡೆ ಗುಡ್ಡವು ಕುಸಿಯಿತು !
ಧಾರಾವಾಹಿ
ಧಾರಾವಾಹಿ ನೋಡಬೇಡಿ
ಮನಸ್ಸನ್ನು ಕೆಡಿಸಬೇಡಿ
ಕೆಟ್ಟದ್ದನ್ನು ಕಲಿಯಬೇಡಿ
ಒಳ್ಳೆಯದನ್ನು ಬಿಡಲೇಬೇಡಿ !!
ಆದ್ಯಂತ್ ಅಡೂರು 7ನೇ ತರಗತಿ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.