-->
ಬಾನಿನ ಚಿತ್ತಾರ - ನೇಸರ

ಬಾನಿನ ಚಿತ್ತಾರ - ನೇಸರ

    ಬಿಂದುಶ್ರೀ  10 ನೇ ತರಗತಿ
    ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ 
    ಬಂಟ್ವಾಳ ತಾಲೂಕು

    
          ಬಾನಿನ ಚಿತ್ತಾರ - ನೇಸರ

ಮುಂಜಾನೆಯ ಮಂಜಿನ ವಾತಾವರಣ 
ಉಣಬಡಿಸುತ್ತಿತ್ತು ಚಳಿಯ ಹೊತ್ತು , ನಮಗೌತಣ !
ಈ ಕೊರೆಯುವ ಚಳಿಗೂ 
ಹಕ್ಕಿಗಳ ಚಿಲಿಪಿಲಿಯ ಗಾನ 
ಎಷ್ಟೊಂದು ಪ್ರಶಾಂತವಾಗಿದೆ ಈ ಕ್ಷಣ !

ಮರಗಿಡಗಳೆಲೆಗಳ ನಡುವೆ 
ತೂರಿ ಬಂತೊಂದು ಕಿರಣ 
ಕೋಳಿಯು ಕೂಗಿತು 'ಬೆಳಗಾಯಿತು ಏಳಣ್ಣಾ' !  
ದಡಬಡಿಸುತ ನಿದ್ದೆಯಿಂದೆದ್ದರು ಜನ 
ಇನ್ನೂ ನಿದಿರೆಯ ಮಂಪರಿನಲ್ಲಿತ್ತು 
ಪುಟ್ಟ ಮಕ್ಕಳ ಮನ !

'ಶುಭ ಮುಂಜಾನೆ ' ಎನ್ನುತ ಸೂರ್ಯನ ಆಗಮನ 
ಸೂರ್ಯಕಾಂತಿಗಳು ತಲೆಬಾಗಿ 
ಮಾಡಿದವು ನಮನ !
ಮತ್ತೆ ರಸ್ತೆಯಲ್ಲಿ ವಾಹನಗಳ ಗದ್ದಲ, 
ವೇಗವಾಗಿ ಜನರ ಪ್ರಯಾಣ ....
ಆ ವೇಗವೆಷ್ಟೆಂದರೆ, ಸೇರಬೇಕೆಂಬ ಆಸೆ ಮಸಣ ! 

ಮುಗುಳ್ನಗುತ್ತಾ ನೇಸರ ಮೇಲೇರತೊಡಗಿದ 
ನಿಧಾನವಾಗಿ ತನ್ನ ಶಾಖವನ್ನು ಹೆಚ್ಚಿಸತೊಡಗಿದ ! 
ಬಿಸಿಲ ಧಗೆಗೆ ಭೂಮಿಯೇ 
ಹೊತ್ತಿಯುರಿಯುತ್ತಿರುವಂತೆ ಭಾಸ !
ಮರದಡಿ ಕುಳಿತರು ಕೆಲ ದಾರಿಹೋಕರು 
ನೀಗಲು ಆಯಾಸ....!!

ರವಿಯು ಸೇರಲು ಅಣಿಯಾದ ಪಡುವಣ 
ಬಣ್ಣಗಳಿಂದ ರಂಗೇರಿತು ತೆಂಕಣ - ಬಡಗಣ !
ಮರಳಿ ನಿವಾಸವ ಸೇರಲು ಅಣಿಯಾದವು 
ಹಕ್ಕಿ- ಪಕ್ಕಿಗಳು .....
ಹೆಚ್ಚಾಗತೊಡಗಿತು ತಂಪು ತಂಪಾದ ಚಳಿಗಾಳಿಯು ...!

ನೋಡುತಲಿದ್ದೆ ಪ್ರತಿದಿನವೂ 
ಈ ಸುಂದರ ಚಿತ್ರಣ !
ಇದಕನುಸಾರ ಮನವು 
ನುಡಿಯಿತೊಂದು ಕವನ !
ಬರೆದೆನು ವಾತಾವರಣದ 
ಈ ಸುಂದರ ಬೆಡಗನ್ನ...
ಅಷ್ಟೊತ್ತಿಗೆ ಆವರಿಸಿತು ನಿದ್ದೆಯೊಂದು ನನ್ನನ್ನ !!!


ಬಿಂದುಶ್ರೀ 10 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ 
ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article