-->
ಹೊಸ ವರುಷ ಹೊಸ ಹರುಷ

ಹೊಸ ವರುಷ ಹೊಸ ಹರುಷ

ವೀಕ್ಷಿತ 8ನೇ ತರಗತಿ 
ಸರಕಾರಿ ಪ್ರೌಢಶಾಲೆ  ಮುರುವ, ಮಾಣಿಲ
ಬಂಟ್ವಾಳ ತಾಲೂಕು.

           ಹೊಸ ವರುಷ - ಹೊಸ ಹರುಷ
2020ಎನ್ನುವುದು ಅತ್ಯಂತ ಕ್ರೂರ ವರ್ಷವಾಗಿದೆ. ಈ ವರ್ಷದಲ್ಲಿ ಮಾನವನು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಇದಕ್ಕೆ ಕಾರಣವೇನೆಂದರೆ ಕೊರೋನ ಎಂಬ ಮಹಾಮಾರಿ. ಎಲ್ಲರ ಬದುಕನ್ನೇ ಸರ್ವನಾಶ ಮಾಡಿತು. ಈ ಕೊರೋನಾದಿಂದಾಗಿ ಅನೇಕ ಕಾರ್ಮಿಕರು , ಕಲಾವಿದರ ಬದುಕು ಸ್ಥಬ್ದವಾಯಿತು. ಒಂದು ಹೊತ್ತಿನ ಊಟಕ್ಕೆ ಪರದಾಡುವಂತಹ ಸಂಕಷ್ಟ ಉಂಟಾಯಿತು. ಇಡೀ ದೇಶವೇ ಸಂಪೂರ್ಣವಾಗಿ ಲಾಕ್ಡೌನ್ಆಯಿತು. ಅಂಗಡಿ, ರಸ್ತೆ, ದೇವಾಲಯಗಳಲ್ಲಿ ಜನರು ತುಂಬಿ ತುಳುಕುತ್ತಿದ್ದರು.  
       ಕೊರೋನ ಎನ್ನುವ ಭಯಾನಕ ರೋಗ ನಮ್ಮ ಭಾರತಕ್ಕೆ ಕಾಲಿಟ್ಟಾಗ ಜನರೇ ಮಾಯವಾಗಿಹೋದರು . ಒಂದು ನಿಮಿಷವೂ ಮನೆಯಲ್ಲಿ ಕುಳಿತುಕೊಳ್ಳದೆ ಹೊರಗಡೆಯೇ ಕಾಲ ಕಳೆಯುತ್ತಿದ್ದ ಜನರು ಮನೆಯಲ್ಲಿಯೆ ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿತು. ಈ 2020 ಎಲ್ಲರಿಗೂ ವಿಪರೀತ ಕಷ್ಟಗಳನ್ನೇ ಒದಗಿಸಿತು. ಅದರಲ್ಲೂ ವಿದ್ಯಾರ್ಥಿಗಳಿಗಂತೂ ಬಹಳ ತೊಂದರೆಯನ್ನು ನೀಡಿತು. ಮಕ್ಕಳು ಮೊಬೈಲ್ /ಟಿ.ವಿ ಗಳಲ್ಲಿ ಪಾಠಗಳನ್ನು ನೋಡುವಂತಹ ಪರಿಸ್ಥಿತಿ ಬಂತು .ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದ ನಾವು ಈ ವರ್ಷದ ಅಂತ್ಯದ ದಿನದಲ್ಲಿದ್ದೇವೆ. ಎಲ್ಲಾ ರೋಗ ರುಜಿನಗಳು ದೂರವಾಗಿ ಭಾರತ ಯಥಾಸ್ಥಿತಿಗೆ ಮರುಳುತ್ತಿದೆ ."ತಮಸೋಮಾ ಜ್ಯೋತಿರ್ಗಮಯ " ಕತ್ತಲಿನಿಂದ ಬೆಳಕಿನೆಡೆಗೆ ಎಂಬಂತೆ ಕರಾಳ ದಿನಗಳಿಂದ ಹೊರಬರುತ್ತಿದೆ. 2021 ರ ಕಾಲಘಟ್ಟದಲ್ಲಿ ಎಲ್ಲವೂ ಬದಲಾಗಿ ಸದೃಡ ಭಾರತವು ಶಿರವೆತ್ತಿ ನಿಂತು ಇತರ ದೇಶಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತದೆ. ಹೊಸ ವರುಷದಲ್ಲಿ ಶಾಲೆಗಳು ಆರಂಭಗೊಂಡು ಎಂದಿನಂತೆ ಮಕ್ಕಳು ಶಾಲೆಗೆ ಹೋಗಿ ಕಲಿಯುವಂತಹ ದಿನಗಳು ಬರಲಿ ಎಂದು ನಾನು ಆಶಿಸುತ್ತೇನೆ. ಎಷ್ಟೇ ಆನ್ಲೈನ್ ತರಗತಿಗಳು ನಡೆದರೂ ತರಗತಿಯಲ್ಲಿ ಕುಳಿತು ಪಾಠ ಕೇಳಿದಂತಹ ಅನುಭವ ವಾಗುವುದಿಲ್ಲ . ಶಿಕ್ಷಣ ನೀತಿಯು ಇನ್ನಷ್ಟು ಉತ್ತಮವಾಗಿ ನಮಗೆಲ್ಲರಿಗೂ ಒಳ್ಳೆಯ ಶಿಕ್ಷಣ ದೊರೆತು ದೇಶದ ಅರ್ಥವ್ಯವಸ್ಥೆಯು ಇನ್ನಷ್ಟು ಉನ್ನತ ಸ್ಥಾನಕ್ಕೇರಬೇಕೆಂಬುದು ನನ್ನ ಆಸೆಯಾಗಿದೆ. ಹೊಸವರುಷವು ಎಲ್ಲರಿಗೂ ಹೊಸ ಹರುಷವನ್ನು ತರಲಿ.  ಜೈ ಹಿಂದ್ 

ವೀಕ್ಷಿತಾ 
8 ನೇ ತರಗತಿ 
ಸರಕಾರಿ ಪ್ರೌಢಶಾಲೆ ಮುರುವ 
ಮಾಣಿಲ

Ads on article

Advertise in articles 1

advertising articles 2

Advertise under the article