-->
ಕಹಿ ನೆನಪು ಸಿಹಿ ಹುರುಪು - ಕವನ

ಕಹಿ ನೆನಪು ಸಿಹಿ ಹುರುಪು - ಕವನ

         ರಶ್ಮಿ
        5 ನೇ ತರಗತಿ
       ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಮಂಕುಡೆ
       ಬಂಟ್ವಾಳ ತಾಲೂಕು


ಕಹಿ ನೆನಪು ಸಿಹಿ ಹುರುಪು - ಕವನ

ಹಳೆಯ ಕರಿ ನೆರಳಿನ ಮಸಿ ನೆನಪಿಗೆ 
ವಿದಾಯ ಹೇಳೋಣ
ಹೊಸತಾದ ಹುರುಪಿನ ಬದುಕಿಗೆ 
ಆಮಂತ್ರಣ ನೀಡೋಣ !
ಕೆಟ್ಟ ದಿನಗಳು ಕ್ಷಣ ಗಣನೆ ಯಲ್ಲಿ
ಮರೆಯಾಗಿ ಹೋಗಲಿ
ಹೊಸ ದಿನಗಳು ಯುಗಾಂತ್ಯದವರೆಗೆ
ಸಿಹಿ ಕ್ಷಣಗಳ ನೀಡಲಿ !
ಮತ್ತೆ ಮತ್ತೆ ಹೇಳಿದರೆ ಅದೇ ನೆವನ
ಸಾಕಾಯಿತು ಹಳೆಯ ಕಹಿ,
ಅನುಭವ ಇನ್ನಾದರೂ ಸಿಗಲಿ 
ಬದುಕ ಬಂಗಾರಗೊಳಿಸುವ ಜೀವನ !
              ರಶ್ಮಿ
        5 ನೇ ತರಗತಿ

Ads on article

Advertise in articles 1

advertising articles 2

Advertise under the article