
ನಾನು ಮತ್ತು ಮುಳ್ಳುಹಂದಿ
Wednesday, January 13, 2021
Edit
3 ನೇ ತರಗತಿ
ನಮ್ಮದೊಂದು ಹಳ್ಳಿಯಲ್ಲಿ ಮನೆ. ಮನೆಗೆ ಹೋಗುವ ದಾರಿಯ ಅತ್ತ ಇತ್ತ ಕಾಡುಗಳು. ಒಂದು ದಿನ ಅಮ್ಮನಿಗೆ ಐಸ್ಕ್ರೀಮ್ ತಿನ್ನಲು ಆಸೆಯಾಯಿತು.
ಅದಕ್ಕೆ ನಾನು ಅಪ್ಪನ ಜೊತೆ ಗುಡ್ಡ ದಾಟಿ ಸಿಗುವ ಅಂಗಡಿಗೆ ಹೋದವು. ಅಲ್ಲಿ ಅಂಗಡಿಗಳು ಮುಚ್ಚಿದ್ದವು.
ನಂತರ ದೂರದ ಊರಿಗೆ ಐಸ್ಕ್ರೀಮ್ ತರಲು ಹೋದೆವು. ಬರುವಾಗ ಕತ್ತಲಾಯಿತು. ಕತ್ತಲ ದಾರಿಯಲ್ಲಿ ಗುಡ್ಡದ ಬದಿಯಲ್ಲಿ ಸಾಗುವಾಗ ದಬಕ್ಕನೇ ಒಂದು ಮುಳ್ಳು ಹಂದಿ ನನ್ನ ಕಣ್ಣಿಗೆ ಕಾಣಿಸಿತು. ನಾನು ಅಪ್ಪನಲ್ಲಿ ಹೇಳಿದೆ. ನನಗೆ ಹೆದರಿಕೆಯಾಯಿತು. ಅಪ್ಪ "ಸದ್ದು ಮಾಡಬೇಡ ದೈರ್ಯದಿಂದಿರು " ಎಂದು ಹೇಳಿದರು.
ಅಪ್ಪ ಗಾಡಿ ನಿಲ್ಲಿಸಿ ನನ್ನನ್ನು ಮೆಲ್ಲ ಹಿಂದಕ್ಕೆ ಕೂರು ಮುಳ್ಳುಹಂದಿ ಮುಳ್ಳು ರಟ್ಟಿಸುತ್ತದೆ ಎಂದು ಹೇಳಿದರು. ನಾನು ಅಪ್ಪನನ್ನು ಗಟ್ಟಿ ಹಿಡಿದುಕೊಂಡೆ. ಅಪ್ಪ ನಿಧಾನವಾಗಿ ಬೈಕ್ ಓಡಿಸಿದರು. ಮತ್ತೆ ಮನೆ ಬಂತು. ಮನೆಗೆ ಹೋದ ಕೂಡಲೇ ಅಮ್ಮ ಅಜ್ಜಿ ಮತ್ತು ತಂಗಿಯಲ್ಲಿ ಹೇಳಿದೆ. ಇಲ್ಲಿಗೆ ಈ ಕಥೆ ಮುಗಿಯಿತು.
ವೈಷ್ಣವಿ ವೈ.ಕೆ.
3 ನೇ ತರಗತಿ