-->
ಸಂಭ್ರಮದ ಮಕರ ಸಂಕ್ರಮಣ

ಸಂಭ್ರಮದ ಮಕರ ಸಂಕ್ರಮಣ

      ಆದ್ಯಂತ್ ಅಡೂರು 
      7ನೇ ತರಗತಿ 
      ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ,                          ಈಶ್ವರಮಂಗಲ, ಪುತ್ತೂರು ದ.ಕ. ಜಿಲ್ಲೆ


            ಸಂಭ್ರಮದ ಮಕರ ಸಂಕ್ರಮಣ 

             ಭಾರತದ ಹೆಚ್ಚಿನ ಹಬ್ಬಗಳು ಬೇರೆ ಬೇರೆ ದಿನಗಳಲ್ಲಿ ಬರಬಹುದು. ಆದರೆ ಸಂಕ್ರಾಂತಿ ಹಬ್ಬವು ಮಾತ್ರ ಇಡೀ ಪ್ರಪಂಚದ ಎಲ್ಲಾ ಕಡೆಗಳಲ್ಲಿಯೂ ನಿಶ್ಚಿತವಾಗಿ ಒಂದೇ ದಿನ ಬರುವ ಹಬ್ಬ. ಹೀಗಾಗಿ ಸಂಕ್ರಾಂತಿ ಹಬ್ಬವು ಜಾಗತಿಕ ಹಬ್ಬವಾಗಿದೆ. ಹೆಚ್ಚಿನ ರಾಷ್ಟ್ರಗಳಲ್ಲಿ ಈ ಹಬ್ಬವನ್ನು ವಿಶೇಷ ಕ್ರಮಗಳಲ್ಲಿ ಆಚರಿಸುತ್ತಾರೆ. ಬಹಳ ವರ್ಷಗಳ ಹಿಂದೆ ಮಕರ ಸಂಕ್ರಾಂತಿಯನ್ನು ಮಾಘ ಮೇಳವೆಂದು ಆಚರಿಸಲಾಗುತ್ತಿತ್ತು ಎಂಬ ಉಲ್ಲೇಖವಿದೆ. 
          ಈ ಮಕರ ಸಂಕ್ರಾಂತಿ ಹಬ್ಬವು ಸೂರ್ಯ ದೇವರ ಹಬ್ಬ. ಸೂರ್ಯ ದೇವರ ಮಹತ್ವವು ಋಗ್ವೇದದಲ್ಲಿ ದೇವಿ ಗಾಯತ್ರಿ ಮಂತ್ರದ ಮಹಿಮೆಯನ್ನು ತಿಳಿಸುತ್ತದೆ. ಸೂರ್ಯ ದೇವನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವುದಕ್ಕೆ ಸಂಕ್ರಾಂತಿ ಎನ್ನುತ್ತಾರೆ. ಹಾಗೂ ಸೂರ್ಯನ ಚಲನೆಯು ದಕ್ಷಿಣದ ಭಾಗದಿಂದ ಉತ್ತರದ ಕಡೆಗೆ ಆರಂಭವಾಗುವುದಕ್ಕೆ ಮಕರ ಸಂಕ್ರಮಣ ಎಂದು ಹೆಸರು. 

              ಈ ದಿನ ಉತ್ತರಾಯಣ ಪುಣ್ಯಕಾಲ ಎಂಬುದಾಗಿ ತಿಳಿದು ಬಂದಿದೆ. ಈ ಕಾಲದಲ್ಲಿ ಹಗಲು ಹೆಚ್ಚು ಹಾಗೂ ರಾತ್ರಿ ಕಡಿಮೆ. ಮಹಾಭಾರತದ ಸಮಯದಲ್ಲಿ ಭೀಷ್ಮರು ಕುರುಕ್ಷೇತ್ರ ರಣರಂಗದಲ್ಲಿ ತಾನು ಸಾಯಲು ಈ ದಿನಕ್ಕಾಗಿ ಕಾಯುತ್ತಿದ್ದರು ಎಂಬುದಾಗಿ ಉಲ್ಲೇಖವಿದೆ. ಹರ್ಯಾಣ, ಹಿಮಾಚಲಪ್ರದೇಶ ಮತ್ತು ಪಂಜಾಬಿನಲ್ಲಿ ಸಂಕ್ರಾಂತಿಯನ್ನು ಮಾಘಿ ಸಂಕ್ರಾಂತಿ ಎಂದು ಕಾಶ್ಮೀರದಲ್ಲಿ ಶಿಶೂರ್ ಸೈನ್ಕ್ರಾತ್ ಎಂದು ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಖಿಚ್ಡಿ ಸಂಕ್ರಾಂತಿ ಎಂದೂ ಮತ್ತು ಪಶ್ಚಿಮ ಬಂಗಾಳದಲ್ಲಿ ಪೌಶ್ ಸಂಗ್ಕ್ರಾಂತಿ ಎಂದು ಪ್ರಾದೇಶಿಕ ಬದಲಾವಣೆಗಳೊಂದಿಗೆ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. 

             ಈ ದಿನ ಕೇರಳದ ಶಬರಿಮಲೆ ದೇವಾಲಯದಲ್ಲಿ ಅಯ್ಯಪ್ಪ ದೇವರ ಮಕರ ಜ್ಯೋತಿ ಕಾಣುತ್ತದೆ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿಯನ್ನು 2 ದಿನಗಳು ಆಚರಿಸಲಾಗುತ್ತದೆ. ಮೊದಲನೇ ದಿನದಂದು ಭೋಗಿ ಹಬ್ಬವೆಂದು ಅಭ್ಯಂಜನ ಸ್ನಾನ ಮಾಡಿ ಗೃಹ ದೇವತೆಯನ್ನು ಪೂಜಿಸಲಾಗುತ್ತದೆ. 'ಸೂರ್ಯ ಪೊಂಗಲ್' ಎರಡನೇಯ ದಿವಸದ ಹಬ್ಬ. ಅಂದಿನ ಭೋಜನಕ್ಕೆ ಹಾಲು - ಸಕ್ಕರೆಯ ಅಕ್ಕಿ ಪಾಯಸಕ್ಕೆ ಪ್ರಧಾನ. ತಮ್ಮ ಆಪ್ತಗೆಳೆಯರನ್ನು ಆ ದಿವಸದ ಊಟಕ್ಕೆ ಕರೆಯಲಾಗುವುದು. 

          ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ 'ಪೊಂಗಲ್ ಉಂಡೆ' ಗಳೆಂದು ಬಗೆಬಗೆಯ ಬಣ್ಣದ ತಿಂಡಿಯನ್ನು ಮಾಡಿ ಹಕ್ಕಿಗಳಿಗಾಗಿ ಬಯಲಿನಲ್ಲಿ ಇಡುವ ಪದ್ಧತಿ ಇದೆ. ಆ ದಿನ ಮನೆಯಲ್ಲಿ ತಯಾರಿಲಾದ ಪಕ್ವಾನ್ನಗಳೆನ್ನೆಲ್ಲಾ ಗೋವುಗಳಿಗೆ ತಿನ್ನಿಸುತ್ತಾರೆ. ಗೋವುಗಳನ್ನು ತರತರದ ಹೂವಿನಿಂದ ಹೂಮಾಲೆ ಮಾಡಿ ಗೋವುಗಳನ್ನು ಶೃಂಗರಿಸುತ್ತಾರೆ. ಕೇರಳದಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಹಬ್ಬದೂಟವನ್ನು ಮಾಡಿ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ.

ಆದ್ಯಂತ್ ಅಡೂರು 
7ನೇ ತರಗತಿ 
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ, ಪುತ್ತೂರು ತಾಲೂಕು ದಕ್ಷಿಣ ಕನ್ನಡ ಜಿಲ್ಲೆ

Ads on article

Advertise in articles 1

advertising articles 2

Advertise under the article