-->
ನೆನಪಾದಾಗ - ಕಥೆ

ನೆನಪಾದಾಗ - ಕಥೆ

ರಾಜೇಶ್ ರೊಡ್ರಿಗಸ್. 
10ನೇ ತರಗತಿ.
ಸರ್ಕಾರಿ ಪ್ರೌಢಶಾಲೆ, ದರೆಗುಡ್ಡೆ
ಮೂಡಬಿದ್ರೆ ತಾಲೂಕು


                       ನೆನಪಾದಾಗ - ಕಥೆ

              ಒಬ್ಬಳು ಹುಡುಗಿ ಶಾಲೆಗೆ ಹೋಗುತ್ತಿದ್ದಳು. ಶಾಲೆಗೆ ಹೋಗುವ ದಾರಿಯಲ್ಲಿ ಒಬ್ಬಳು ಮುದುಕಿ ತನ್ನ ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುತ್ತಿದ್ದಳು. ಆಗ ಆ ಅಜ್ಜಿಯನ್ನು ಕಂಡು ಆ ಹುಡುಗಿಗೆ ತನ್ನ ಬಾಲ್ಯದಲ್ಲಿ ತನ್ನ ಅಜ್ಜಿಯ ಜೊತೆ ಕಳೆದ ದಿನಗಳು ನೆನಪಾದವು. 

               ಅವಳು ತನ್ನ ಅಜ್ಜಿಯನ್ನು ನೆನಪಿಸಿಕೊಂಡು ದಾರಿಯ ಬಳಿ ಕುಳಿತಿದ್ದ ಅಜ್ಜಿಯ ಸಮೀಪ ಹೋಗಿ ಅವರ ಯೋಗಕ್ಷೇಮವನ್ನು ವಿಚಾರಿಸಿದಾಗ . ಆ ಅಜ್ಜಿಯು "ಅಳುತ್ತ ಮಗು ನನಗೆ ಹೊಟ್ಟೆ ಹಸಿವಾಗುತ್ತಿದೆ ನಾನು ಎರಡು ದಿನವಾಯಿತು ಏನು ತಿನ್ನದೇ " ಎಂದಳು.               
           
                ಆ ಅಜ್ಜಿಯ ಹಸಿವನ್ನು ಕಂಡು ತಾನು ಮದ್ಯಾಹ್ನದ ಉಪಹಾರಕ್ಕೆ ಎಂದು ತಂದಿದ್ದ ಬುತ್ತಿಯನ್ನು ಅಜ್ಜಿಗೆ ಕೊಟ್ಟಳು.  ಆದರೆ ಅಜ್ಜಿಯು ಬೇಡ ಎಂದು ಕೈ ಅಡ್ಡ ಹಿಡಿದಾಗ....... " ನೀವು ನನ್ನ ಅಜ್ಜಿಯ ಹಾಗೆ, ನಿಮ್ಮನ್ನು ಕಂಡು ನನಗೆ ನನ್ನ ಅಜ್ಜಿಯ ನೆನಪಾಯಿತು" ಎಂದು ಹೇಳಿ, ಆ ಬುತ್ತಿಯನ್ನು ಅಜ್ಜಿಯ ಕೈಯಲ್ಲಿಟ್ಟು ಶಾಲೆಯತ್ತ ನಡೆದಳು......

                       ರಾಜೇಶ್ ರೊಡ್ರಿಗಸ್. 
                           10ನೇ ತರಗತಿ.

Ads on article

Advertise in articles 1

advertising articles 2

Advertise under the article