-->
ಭವಿಷ್ಯದತ್ತ ನಮ್ಮ ಚಿತ್ತ..!

ಭವಿಷ್ಯದತ್ತ ನಮ್ಮ ಚಿತ್ತ..!

               ಹಸೈನ್ ಸಿನಾನ್ 10ನೇ ತರಗತಿ 
           ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು 
                     ಬಂಟ್ವಾಳ ತಾಲೂಕು

           ಭವಿಷ್ಯದತ್ತ ನಮ್ಮ ಚಿತ್ತ.. !

         ಶಾಲೆಯಲ್ಲಿ ಆಟಗಳು, ಪಾಠಗಳು, ತಮಾಷೆ ಮಾತುಗಳು ಇವೆಲ್ಲವೂ ಇರುವಂತಹ ಒಂದು ಸಂದರ್ಭವಾಗಿತ್ತು. ಆದರೆ 2020 ಮಾರ್ಚ್ ತಿಂಗಳಿನಲ್ಲಿ ಇವೆಲ್ಲದಕ್ಕೂ ಬ್ರೇಕ್ ಬಿತ್ತು. ಕೊರೋನ ರೋಗದಿಂದ ಶಾಲಾ ದಿನಗಳು ರಜಾ ದಿನಗಳಾದವು. ನಾವೆಲ್ಲರು ಮನೆಯಲ್ಲಿದ್ದು ಕಾಲ ಕಳೆಯುವಂತ ಪರಿಸ್ಥಿತಿ ನಮ್ಮ ಕಣ್ಣೆದುರಿಗೆ ಬಂತು...!!

      ಮೊದ ಮೊದಲು ನಾನು ಸಂತೋಷದಿಂದ 
ಆ ರಜೆಯನ್ನು ಸ್ವೀಕರಿಸಿದೆ. ನನ್ನ ಮನೆಯ ಅಕ್ಕ ಪಕ್ಕದಲ್ಲಿ ನನ್ನ ವಯಸ್ಸಿನವರು ಇಲ್ಲದಿದ್ದ ಕಾರಣ. ನನ್ನ ಸ್ನೇಹಿತರೆಲ್ಲರೂ ಶಾಲೆಯ ಅಂಗಳದಲ್ಲಿ ಕ್ರಿಕೆಟ್ ಆಟ ಆಡುತ್ತಿದ್ದರು. ಆದ್ದರಿಂದ ನಾನೂ ಅಲ್ಲಿಗೆ ಹೋಗಿ ಕ್ರಿಕೆಟ್ ಆಡುತ್ತಿದ್ದೆ. ಈ ಕ್ರಿಕೆಟ್ ಆಡುವುದು ನನ್ನ ಅಭ್ಯಾಸ ವಾಯಿತು. ಶಾಲೆಯ ಚಿಂತೆಯನ್ನು ಬಿಟ್ಟು ಕ್ರಿಕೆಟ್ ಆಡುವುದು ನನ್ನ ದೈನಂದಿನ ರೂಡಿಯಾಯಿತು. ಹೀಗೆಯೇ ಒಂದು ತಿಂಗಳು ಕಳೆದವು ಆದರೆ ಅಲ್ಲಿಗೂ ಬಂತು ಈ ಕೊರೋನ ಮಾರಿಯ ಕಾಟ. ಲಾಕ್ ಡೌನ್ ಮತ್ತು ಸೀಲ್ ಡೌನ್ ಎಂಬ ನಿಯಮದ ಮೂಲಕ ನನ್ನ ಎಲ್ಲಾ ಸಂತೋಷವನ್ನು ಈ ಕೊರೋನ ರೋಗ ಕಿತ್ತುಕೊಂಡಿತು. 
 
                ಹಾಗೆಯೇ ದಿನಗಳು ಉರುಳಿದವು. ದಿನಾ ಟೀವಿ ನೊಡಿ ಬೋರೆನಿಸಿತು. ನೋಡಿದ ಮುಖವನ್ನೆ ನೋಡಿ ನೋಡಿ ಬೇಜಾರೆನಿಸಿತು. ಮತ್ತೆ ಶಾಲೆಯ ಅಂಗಳಕ್ಕೆ ಹೋಗುವ ಎಂದರೆ ಮನೆಯಲ್ಲಿ ಒಪ್ಪಿಗೆ ನೀಡುತಿರಲಿಲ್ಲ . ಕಾರಣ ಲಾಕ್ ಡೌನಿನ ಸಮಯವಾಗಿತ್ತು. ಮನೆಯಲ್ಲಿ ಕೂತು ಕೂತು ದುಃಖಕ್ಕೆ ಒಳಾಗಾದೆ ಏನೊ..!! ಒಂದು ಥರಾ... ಮಾನಸಿಕ ಖಿನ್ನತೆಗೆ ಒಳಾಗಾಗುವಂತಹ ಪರಿಸ್ಥಿತಿ ಎದುರಾಯಿತು...!!!
 
             ಸ್ವಲ್ಪ ದಿನ ಕಳೆದಂತೆಯೇ ಸೇತುಬಂಧ, ಸಂವೇದ ತರಗತಿಗಳು ದೂರದರ್ಶನದ ಮೂಲಕ ಪ್ರಾರಂಭವಾದವು. ಅದರಲ್ಲಿ ಬರುವಂತಹ ಪಾಠ ಗಳನ್ನು ವೀಕ್ಷಿಸುತ್ತಿದ್ದೆ. ಅದರಲ್ಲಿ ಬರುವಂತಹ ಗೃಹ ಕಾರ್ಯಗಳನ್ನು ಮಾಡ್ತಿದ್ದೆ. ಸ್ವಲ್ಪ ದಿನ ಕಳೆದಂತಯೇ ಅದೂ ಕೂಡ ಬೋರೆನಿಸಿತು. ದೂರದರ್ಶನದ ಮೂಲಕ ಎಷ್ಟೇ ಪಾಠ ಕೇಳಿದರೂ ಶಾಲೆಯಲ್ಲಿ ಪಾಠ ಕೇಳಿದಂತೆ ಆಗುತ್ತಿರಲಿಲ್ಲ...!! ಸರಿಯಾಗಿ ಅರ್ಥವೂ ಆಗುತ್ತಿರಲಿಲ್ಲ...!!
ಉದಾಹರಣೆಗೆ : ಹಲವು ಪ್ರೇಕ್ಷಣೀಯ ಸ್ಥಳಗಳು ಗಳನ್ನು ಟಿ.ವಿ ಅಥವಾ ಮೊಬೈಲ್ ನಲ್ಲಿ ನೋಡುವುದಕ್ಕೂ ವಾಸ್ತವವಾಗಿ ನಮ್ಮ ಕಣ್ಣೆದುರಿಗೆ ನೋಡುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಅದೇ ರೀತಿ ದೂರದರ್ಶನದ ಮೂಲಕ ಪಾಠ ಕೇಳುವುದಕ್ಕೂ ಶಾಲೆಯಲ್ಲಿ ಪಾಠ ಕೇಳುವುದಕ್ಕೂ ತುಂಬಾ ವ್ಯತ್ಯಾಸ ಇದೆ...!!!

          ಆದರೆ ನಮ್ಮ ಪುಣ್ಯ..... ವಿಧ್ಯಾಗಮ ತರಗತಿಗಳು ಆರಂಭವಾದವು..! ದೂರದಿಂದ ದೂರಕ್ಕೆ ಸರ್ಕಾರದ ನಿಯಮವನ್ನು ಪಾಲಿಸಿ ನಮ್ಮ ಸ್ನೇಹಿತರನ್ನು ಬೇಟಿಯಾಗಲು, ನಾವು ಬರೆದಂತಹ ಗೃಹಕಾರ್ಯ ಶಿಕ್ಷಕರಿಗೆ ತೋರಿಸಲು ವಾರಕ್ಕೊಮ್ಮೆ ಶಾಲೆಗೆ ಹೋಗುತ್ತಿದ್ದೆವು. ಆದರೆ ಕೊರೋನದ ಭಯದಿಂದ ಅದೂ ಕೂಡ ನಿಂತು ಹೋಯಿತು. ಮತ್ತೆ ಬೇಸರಗೊಂಡೆ ಆದರೆ ಯಾವುದೊ ಒಂದು ಸುದ್ದಿ ಹರಡಲಾರಂಭಿಸಿತು. ಹೊಸ ವರುಷದ ಮೊದಲ ದಿನ ಪ್ರೌಢಶಾಲಾ 10ನೇ ತರಗತಿಗಳು ಆರಂಭ ಎಂಬ ಸುದ್ದಿ ಯಾಗಿತ್ತು. ಅಂದಿನಿಂದ ಕ್ಯಾಲೆಂಡರ್ ನೋಡುತ್ತಾ ದಿನ ಕಳೆದೆ...!!

          ಅಂತೂ ಇಂತೂ 2021ಜನವರಿ 1 ಬಂದೇ ಬಿಟ್ಟಿತು. ಶಾಲೆ ಆರಂಭದ ದಿನ ನನಗೆ ಆದಂತಹ ಸಂತೋಷ ಯಾವ ಹಬ್ಬಕ್ಕೂ ಕೂಡಾ ಕಡಿಮೆ ಆಗಿರಲಿಲ್ಲ. ನಾನು ಮಾತ್ರ ಅಲ್ಲ ನನ್ನ ಎಲ್ಲಾ ಸ್ನೇಹಿತರು ಕೂಡ ಬಹಳ ಸಂತೋಷದಿದ ಶಾಲೆಗೆ ಬಂದರು. ಲಾಕ್ ಡೌನಿನಲ್ಲಿ ಅನುಭವಿಸಿದ ದುಃಖ ಗಳು ಶಾಲಾ ಪ್ರಾರಂಭದ ಮೊದಲ ದಿನವೇ ಮರೆತು ಹೋಯಿತು. ಹೋದ ಜೀವ ಮತ್ತೆ ಬಂದಂತಾಯಿತು. 

    ಆದ್ದರಿಂದ ಈ ಶಾಲೆ ಅನ್ನುವುದು ದೇಗುಲವಿದ್ದಂತೆ. ದೇವಾಲಯದಲ್ಲಿ ಎಷ್ಟು ಖುಷಿ ಸಿಗುತ್ತದೆ ಅಷ್ಟೇ ಖುಷಿ - ನೆಮ್ಮದಿ ಶಾಲೆಯಲ್ಲಿ ಸಿಗುತ್ತದೆ. ಸರ್ಕಾರದ ನಿಯಮವನ್ನು ಪಾಲಿಸಿ ದಿನಾಲು ಶಾಲೆಯತ್ತ ನಮ್ಮ ಹೆಜ್ಜೆ ಇರಲಿ. ಆದ್ದರಿಂದ "ಕಳೆದುಹೋದ ಸಮಯಕ್ಕೆ ಚಿಂತಿಸಿ ಫಲವಿಲ್ಲ" ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಕಹಿನೆನಪುಗಳನ್ನು ಮರೆಯುವಂತಾಗಲಿ.. ಹೊಸ ಬದುಕನ್ನು ಕಟ್ಟುವಂತಾಗಲಿ...!!
    
                          
              ಹಸೈನ್ ಸಿನಾನ್ 10ನೇ ತರಗತಿ 
           ಸರಕಾರಿ ಪ್ರೌಢಶಾಲೆ ಮಂಚಿ-ಕೊಳ್ನಾಡು 
                    ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article