
ಗಣರಾಜ್ಯ - ಕವನ
Friday, January 29, 2021
Edit
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು
ಗಣರಾಜ್ಯ ಬಂದಿತು ಈ ದಿನ
ಕಾನೂನುಗಳು ಜಾರಿಗೆ ಬಂದ ಈ ದಿನ...!
ಸ್ವತಂತ್ರಕ್ಕೆ ಪರಿಪೂರ್ಣ ಅರ್ಥ ಕೊಟ್ಟ ದಿನ
ಸಂವಿಧಾನದ ಅರ್ಥ ಪರಿಚಯಿಸಿದ ದಿನ...!!
ಪ್ರಜಾಪ್ರಭುತ್ವದ ಹರಿಕಾರ
ದೀನದಲಿತರ ಪಾಲಿನ ಧೀರ
ಸಂವಿಧಾನ ರಚನಾಕಾರ
ಅವರೇ ಡಾ|ಬಿ.ಆರ್.ಅಂಬೇಡ್ಕರ...!!
ದೀನದಲಿತರಿಗೆ ಶಿಕ್ಷಣ ಕಲ್ಪಿಸಿಕೊಟ್ಟ ಶೂರ..
ಇವರೇ ಇಂದಿನ ಗಣರಾಜ್ಯದ ಶಿಖರ...
ನಮ್ಮೆಲ್ಲರ ಹೃದಯದಲ್ಲಿ ಮೊಳಗಲಿ
ನಮ್ಮ ಭಾರತ !!
ಇಲ್ಲಿರುವುದೆಲ್ಲಾ ಸತ್ಯ ಮಾರ್ಗದ ಸಂಕೇತ...
ಬಂಧು-ಬಳಗ ಕೂಡಿ ಆಚರಿಸುವ
ಗಣರಾಜ್ಯದ ದಿನ
ದೇಶಕ್ಕೆ ಗಣತಂತ್ರವಾದ ಈ
ಸುಂದರ ದಿನ...!!
ದೆಹಲಿಯಲ್ಲಿ ನಡೆಯುವ ಪರೇಡಿನಲ್ಲಿ
ಸೈನಿಕರ ಶಿಸ್ತು !
ಹಾಗೆಯೇ ಅಲ್ಲಿರುವ ಪೋಲೀಸರ ಗಸ್ತು ...!!
ನೋಡಲು ಬಹಳ ಚಂದದಲಿ
ಕಣ್ಣುಗಳು ತುಂಬಿದೆ ಆನಂದದಲಿ.. !
ಈ ಗಣರಾಜ್ಯೋತ್ಸವವನ್ನು ದೇಶಕಾಯುವ
ಯೋಧರಿಗೆ ಅರ್ಪಿಸುವ...!
ಹಾಗೆಯೇ ಅವರಿಗೆ ಶತಶತ ನಮನಗಳನ್ನು
ಸಲ್ಲಿಸುವ...!!
ದೇಶವ ಕಾಯುವ... ವೀರಯೋಧರಿಗೆಲ್ಲ
ಶತಕೋಟಿ ನಮನ...
ಅವರಿಗೆ ನಾನು ಅರ್ಪಿಸುವೆ
ಈ ಕವನ...!!!
ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಬಂಟ್ವಾಳ ತಾಲೂಕು