-->
ಭೂಮಿ - ಕವನ

ಭೂಮಿ - ಕವನ

    ಸಾನಿಕ. ಡಿ.ಡಿ.   7 ನೇ ತರಗತಿ 
    ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ.     
    ಸುಳ್ಯ ತಾಲೂಕು         



                     ಭೂಮಿ - ಕವನ

 ಬಗೆ ಬಗೆ ನಾಮಗಳ ಹೊಂದಿರುವ ನೀ ,
 ಹಲವು ನದಿಗಳೇ ನಿನ್ನ ಜೀವನಾಡಿ !
 ನಿನ್ನ ಪೋಷಿಸಿದರೆ ಬಿಡುವುದಿಲ್ಲ ಕೈ... 
 ಕಾಪಾಡಿ ಪೋಷಿಸುವೆ ರೈತನ....! 

 ಸಕಲ ಜೀವರಾಶಿಗೆ ನೀನೇ ಆಶ್ರಯದಾತೆ 
 ಮುನಿದರೆ ಮಾತ್ರ ವಿನಾಶ ನಮಗೆಲ್ಲ....!!!
 ಸಮೃದ್ಧ ಕಾನನ ತಾಪವ ತಡೆಯುವುದು
 ಬೇಗೆಯ ಕಳೆದು ಪೊರೆಯುವುದು ಬದುಕು !

 ಮತಿಹೀನ ಮನುಜ ಎದ್ದೇಳು ಬೇಗ.!
 ರಕ್ಷಿಸು ನಿನ್ನ ತಾಯೊಡಲ.....
 ಪ್ರೀತಿಸು ಕಾಡು-ಮೇಡುಗಳ... ಜೀವರಾಶಿಗಳ !
 ಎಲ್ಲವೂ ನಿನ್ನ ಮನೆಯವರಂತೆ..!!

 ಸಾನಿಕ. ಡಿ.ಡಿ. 
 7 ನೇ ತರಗತಿ 
 ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ.

Ads on article

Advertise in articles 1

advertising articles 2

Advertise under the article