-->
ಆದಿಯ ಚಿತ್ರ ಪತ್ರ - 50

ಆದಿಯ ಚಿತ್ರ ಪತ್ರ - 50

    ಆದಿ ಸ್ವರೂಪ
    ಸ್ವರೂಪ ಅಧ್ಯಯನ ಸಂಸ್ಥೆ
    ಮಂಗಳೂರು


                ಆದಿಯ ಚಿತ್ರ ಪತ್ರ - 50

                     ಆದಿಯ ಚಿತ್ರ ಪತ್ರ - 50

               ಈಗ ನಿತ್ಯ ಮಾತ್ರೆ .. ಹ..ಹ.. ಹ...

                ಅಪ್ಪನ ಗೆಳೆಯ ಪದ್ಮನಾಭರು, ಬೆಂಗಳೂರಲ್ಲಿ ಉದ್ಯಮಿ. ಬೆಂಗಳೂರಿಂದ ಹಾಸನಕ್ಕೆ ಕಾರಲ್ಲಿ ಬರುತ್ತಿದ್ದೆವು. ಪದ್ಮನಾಭ ಸರ್ ಡ್ರೈವಿಂಗ್ ಮಾಡುತ್ತಿದ್ದರು. ಅವರ ಮಗಳು ಪ್ರಿಯಾ ಮತ್ತು ನಾನು ಹಿಂದಿನ ಸೀಟಲ್ಲಿ ಕುಳಿತಿದ್ದೆವು. ಅಪ್ಪ ಮಾತು ಆರಂಭಿಸಿದರು.  ಪದ್ಮಣ್ಣ ನೀವು ಕಾರ್ ಡ್ರೈವಿಂಗ್ ಮಾಡುವಾಗ ಹಾಗೆಲ್ಲ ಆಚೆ ಬದಿಯ ಲಾರಿಯವನಿಗೆ ಬೈದದ್ದಕ್ಕೆ ಅವನೂ ಹಾಗೆಯೇ ನಿಮಗೆ ಕೈ ತೋರಿಸಿ, ಬೋಮಗ, ಸೂಮಗ, ಬೇಸೀ.. ಅಂತೆಲ್ಲಾ ಹೇಳಿದ ಅಂತಾನೆ ಕಾಣ್ತದೆ.

       ಪದ್ಮಣ್ಣ ಪರವಾಗಿಲ್ಲ..... ಒಂದು ಸಣ್ಣ ಬದಲಾವಣೆ ಮಾಡಿ ನೋಡಿ. ನೀವು ಅವನಿಗೆ ಬೈಯೋದು ಬೈಯಿರಿ. ನೆಗಡಿಕೊಂಡೆ ಬೈದು ಸಿಟ್ಟು ತೀರಿಸಿಕೊಳ್ಳಿ ನೋಡೋಣ. ನೀವು ಆಗೊಮ್ಮೆ ಸಿಟ್ಟಿಂದ ಬೈದಾಗ ನಮ್ಮ ಕಾರು ಓರೆ ಕೋರೆ ಹೋಗಿ ದೊಡ್ಡ ಆಕ್ಸಿಡೆಂಟ್ ಆಗ್ತಿತ್ತು. ಹೌದಪ್ಪ ಅಂತ ಹಿಂದಿನಿಂದ ಪ್ರಿಯಾಳೂ ವಿನಂತಿಸಿಕೊಂಡಳು...

ವಾಹ್..ಪ್ರಯೋಗ ಆರಂಭವಾಯ್ತು.....

       ಪದ್ಮಣ್ಣನಿಗೆ ಸಿಟ್ಟು ಬಂತು. ಆಚೆ ಬದಿಯ ಟೆಂಪೋದವ ಓವರ್ ಟೇಕ್ ಮಾಡಿದ್ದ. ಪದ್ಮಣ್ಣ ನೆಗಾಡಿಕೊಂಡೆ ಬೈದ್ರು. ಆಚೆ ಗಾಡಿಯವ ನೆಗಾಡಿಕೊಂಡೆ ಏನೋ ಹೇಳಿದ. ನಾವೆಲ್ಲರೂ ನೆಗಾಡಿದೆವು. ಪದ್ಮಣ್ಣ ಈಗ ಹೆಂಗುಟ್ಟು...? ಸರಿ ಆದೆ ಅಣ್ಣ ಅಂದ್ರು. ಓಕೆ.. ಇನ್ನು ಮುಂದೆ ಬರೀ ನಗಾಡಿ... ಆಗಲಿ ಅಣ್ಣಾ ಒಪ್ಪಿದೆ. ಅಂತೆಯೇ.. ಪದ್ಮಣ್ಣ ನಗಾಡಿದ್ರು. ಅವನೂ ಇವನನ್ನು ನೋಡಿ ನಕ್ಕ. ಆ ಕಾರೂ ಸರಿಯಾಗಿ ಓಡಿತು. ನಮ್ಮ ಗಾಡಿಯೂ ಈಗ ಸರಿಯಾಗಿ ಓಡಿತು. ಆಕ್ಸಿಡೆಂಟ್ ತಪ್ಪಿತು...!

      ಹಲೋ ಪದ್ಮಣ್ಣ ನಿಮ್ಮ ಕಾಣದೆ ಬಹಳ ದಿನ ಆಯ್ತು. ಈಗ ಹೇಗಿದ್ದೀರಿ...?. BP, ಶುಗರ್ ಮಾತ್ರೆ ಬಿಟ್ಟು ಬಹಳ ದಿನ ಆಯ್ತಣ್ಣ.   ಮನೆಯವರೆಲ್ಲಾ ಹೇಗಿದ್ದಾರಣ್ಣ...? ಅಣ್ಣ ಈಗ ಎಲ್ಲಾ ನಗೋದೇ. ಮೊದಲು ಹೆಂಡತಿ ಮಕ್ಕಳ ತಪ್ಪು ಕಂಡಾಗಲೆಲ್ಲಾ ಬೈತಿದ್ದೆ.. ಬಾರೀ ಕಿರಿ ಕಿರಿ ಮಾಡ್ತಿದ್ದೆ ಅಣ್ಣಾ..ಈಗ..?
ಈ..ಗಾ.. ಹ. ಹ.. ಹ..!!
ನೋಡಿ ಗೋಪಣ್ಣ ಮನೆಯವರು, ಮಕ್ಕಳು ಎಲ್ಲರೂ ನಗೋದು ಕೇಳ್ತದಾ..!! ನೋಡಿ..!!..? ಹ.. ಹ.. ಹ..!.
ಈ ಮಾತ್ರೆ ಹೆಸರು ಏನಣ್ಣ..?.
ಹ.. ಹ.. ಹ..!!.

ನಮ್ಮ ಮನೆಯಲ್ಲೂ ಬೆಳಗ್ಗೆ ಎಚ್ಚರವಾದಾಗ ತಕ್ಷಣ ಮೊದಲ ನೋಟಕ್ಕೆ... ಹ.. ಹ.. ಹ..

ಅಪ್ಪನ ಮಿತ್ರರಾದ..
ಪರಿಸರ ಪ್ರೀತಿ ಕಾಳಜಿಯ, ಕಲಾ - ರಂಗ - ವನದೊಳಗಿನ ಬದುಕಿನ...
ಸೌಗಂಧಿಕ ಚಂದ್ರರಿಗೆ ಅರ್ಪಣೆ.....

------- ಆದಿ ಸ್ವರೂಪ. 
ಸ್ವರೂಪ ಅಧ್ಯಯನ ಕೇಂದ್ರ  
ಮಂಗಳೂರು.

Ads on article

Advertise in articles 1

advertising articles 2

Advertise under the article