-->
ಗಿಡಮರ - ಕವನ

ಗಿಡಮರ - ಕವನ

ಕೃತಿಕ. ಕೆ 8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು


       ಗಿಡ ಮರ - ಕವನ

ಗಿಡಮರಗಳೇ ನೀವೆಲ್ಲ ಹಸಿರು, 
ಆದರೆ ನಿಮ್ಮಿಂದಲೇ ನಮ್ಮೆಲ್ಲರ ಉಸಿರು !

ನಿಮ್ಮನ್ನು ಕಡಿದರೆ ನಮಗೆ ಲಾಭ, 
ಆದರೆ ನಿಮ್ಮೆಲ್ಲರನ್ನು ನಾಶಗೊಳಿಸಿದರೆ 
ತಂಪಾಗದು ನಭ..!

ನಿಮ್ಮ ಸುಂದರವಾದ ದೃಶ್ಯಗಳನ್ನು 
ನೋಡುವುದೇ ಚಂದ, 
ಅದನ್ನು ನೋಡಿ ಕಣ್ತುಂಬಿಕೊಳ್ಳುವುದೇ.. ನಮಗೊಂದು ಆನಂದ !

ನೀವು ಬಿಟ್ಟ ಹೂವುಗಳ ಬಣ್ಣ, 
ಅದರ ಸುವಾಸನೆಯೇ ಒಂದು ಚೆನ್ನ!!

ನಿತ್ಯ ಹಸಿರು - ಹಸಿರಾಗಿ  
ಹೂಗಳರಳಿ, ಮನಕೆ ತಂಪಾಗಿ
ಸದಾ ಕಂಗೊಳಿಸುತ್ತಿರಿ...!!!

.......ಕೃತಿಕ. ಕೆ 8ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು 
ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article