-->
ತಾಯಿ ಕ್ಷಮಯಾಧರಿತ್ರಿ

ತಾಯಿ ಕ್ಷಮಯಾಧರಿತ್ರಿ

     ಲಾವಣ್ಯ ಎಸ್ ಜಿ 9ನೇ ತರಗತಿ
     ಸರಕಾರಿ ಪ್ರೌಢಶಾಲೆ ಕಾಡುಮಠ 
     ಬಂಟ್ವಾಳ ತಾಲೂಕು

                ತಾಯಿ ಕ್ಷಮಯಾಧರಿತ್ರಿ

       ತಾಯಿಯನ್ನು ಜನನಿ, ಮಾತೆ, ಅಮ್ಮ ಎಂಬ ಪದಗಳಿಂದ ಸಂಬೋಧಿಸುತ್ತಾರೆ. ತಾಯಿ ಈ ಪದ ಅತ್ಯಮೂಲ್ಯವಾದದ್ದು. ತಾಯಿ ಒಂಬತ್ತು ತಿಂಗಳು ಗರ್ಭದಲ್ಲಿ ಮಗುವನ್ನು ಸಲುಹಿ ಆ ಮಗುವಿಗೆ ಜನ್ಮ ಕೊಡುತ್ತಾಳೆ. ಇದು ಪ್ರತಿಯೊಬ್ಬ ಹೆಣ್ಣಿಗೆ ಮರುಜನ್ಮ ! 

          ಪ್ರತಿಯೊಬ್ಬ ತಾಯಿಯು ತನ್ನ ಮಕ್ಕಳಿಗಾಗಿ, ಮಕ್ಕಳ ಏಳಿಗೆಗಾಗಿ ಹಗಲು-ರಾತ್ರಿಯೆನ್ನದೆ ಕಷ್ಟಪಡುತ್ತಾಳೆ. ಅವರು ಏನೇ ತಪ್ಪು ಮಾಡಿದರೂ ಕ್ಷಮಿಸಿ ತಿದ್ದಿ ಬುದ್ಧಿ ಹೇಳುತ್ತಾಳೆ. ಅದಕ್ಕೆ ತಾಯಿಯನ್ನು ಕ್ಷಮಯಾಧರಿತ್ರಿ ಅಂತ ಹೇಳುವುದು. " ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು" ಎಂಬ ಈ ಮಾತು ಅಕ್ಷರಶ: ಸತ್ಯ.!

             ಒಂದು ಮಗುವಿಗೆ ತಾಯಿ ಮೊದಲ ಗುರುವಾಗಿ ಇರುತ್ತಾಳೆ. ತಾಯಿಯಾದವಳು ಮಕ್ಕಳಿಗೆ ಸಂಸ್ಕಾರ, ಸಂಪ್ರದಾಯ, ವಿನಯತೆ ಯನ್ನು ಕಳಿಸುತ್ತಾಳೆ. ಮಕ್ಕಳಿಗೆ ಏನಾದರೂ ಅನಾರೋಗ್ಯವಿದ್ದಾಗ ತಾಯಿಯಾದವಳು ಪಡುವ ಪಾಡು ಬಹಳ ದುಃಖಕರ, ಮಕ್ಕಳು ಎಷ್ಟೇ ಕಷ್ಟ ಕೊಟ್ಟರು ಮನಸ್ಸಿಗೆ ಹಾಕಿಕೊಳ್ಳದೆ ಸದಾ ಅವರ ಏಳಿಗೆಯನ್ನು ಬಯಸುವವಳು ತಾಯಿ.

               ಕೆಲವು ಮಕ್ಕಳಿದ್ದಾರೆ ಅವರು ದೊಡ್ಡವರಾದ ನಂತರ ತಾಯಿಯನ್ನು ಕಡೆಗಣಿಸಿ, ಬಂಧು-ಬಳಗ ವಿದ್ದರೂ ವೃದ್ಧಾಶ್ರಮಕ್ಕೆ ಸೇರಿಸುವವರೂ ಇದ್ದಾರೆ. ಇದು ನಾವು ತಾಯಿಯಾದವಳಿಗೆ  ಮಾಡುವ ಬಹುದೊಡ್ಡ ಅವಮಾನ. ಇನ್ನು ಕೆಲವರಿದ್ದಾರೆ ಯಾರಾದರೂ ಬಂದು" ಇವರು ನಿನ್ನ ತಾಯಿಯಾ? " ಎಂದು ಕೇಳಿದರೆ. "ಇವರು ನನ್ನ ತಾಯಿ  ಹೇಳಲು ಮುಜುಗರವಾಗಿ ಇವರು ಯಾರು ಅಂತ ನಂಗೆ ಗೊತ್ತಿಲ್ಲಪ್ಪ " ಅಂತ ಹೇಳೋರು ಇದ್ದಾರೆ. 

           ಆದರೆ ತಾಯಿಯಾದವಳು ತನ್ನ ಮಕ್ಕಳು ಕುರುಡರಾಗಿರಲಿ, ಕುಂಟರಾಗಿರಲಿ, ತನ್ನ ಮಕ್ಕಳು ಹೇಗೆ ಇರಲಿ. ಯಾವ ತಾಯಿಯು ಇದುವರೆಗೆ ಮುಜುಗರವಾಗಿ , ಇವನು ನನ್ನ ಮಗ ಅಥವಾ ಮಗಳು ಅಲ್ಲ ಎಂದು ಹೇಳಿಲ್ಲ.  ಎಲ್ಲರೆದುರಿಗೂ ಇವರು ನನ್ನ ಮಕ್ಕಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವಳು ತಾಯಿ. ತಾಯಿ ತ್ಯಾಗಮಯಿ. ತಾಯಿ ದೇವರ ಸ್ವರೂಪ. ಎಂದು ಹೇಳಿದರೆ ತಪ್ಪಾಗಲ್ಲ. ಅದಕ್ಕೆ ಹೇಳೋದು ತಾಯಿ ಪ್ರೀತಿಯನ್ನು ತುಂಬಿದ ಬಹು ದೊಡ್ಡ ಸಾಗರ !!. 
            
ಕಲ್ಪನಾ ಲೋಕದ ವಿಹಾರಿ

Ads on article

Advertise in articles 1

advertising articles 2

Advertise under the article