-->
ಆದಿಯ ಚಿತ್ರ ಪತ್ರ - 48

ಆದಿಯ ಚಿತ್ರ ಪತ್ರ - 48

    ಆದಿ ಸ್ವರೂಪ
    ಸ್ವರೂಪ ಅಧ್ಯಯನ ಸಂಸ್ಥೆ
    ಮಂಗಳೂರು

              ಆದಿಯ ಚಿತ್ರ ಪತ್ರ - 48

                ಆದಿಯ ಚಿತ್ರ ಪತ್ರ - 48

     " ಮಕ್ಕಳಿಗಾಗಿ ಏನು ಮಾಡಿದ್ರಿ ಸಾರ್..? "

               ಅಭಿನಂದನೆಗಳು ಸರ್. ನಿಮಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ಗೊತ್ತಾಗಿ, ನಿಮಗೆ ಅಭಿನಂದನೆ ಹೇಳಲು, ಸುಮಾರು 200 ಕಿ.ಮೀ. ದೂರದಿಂದ ನಿಮ್ಮ ಮನೆ ಹುಡುಕಿಕೊಂಡು ಬಂದೆ ಸರ್. 

         ತುಂಬಾ ಸಂತೋಷವಾಗ್ತಿದೆ ಸರ್. ನಿಮಗೆ ರಾಷ್ಟ್ರಪ್ರಶಸ್ತಿ ಹೇಗೆ ಸಿಕ್ತು ಸರ್..? 

          ಅದೇ ಸಂಚಯಿಕಾ ಬ್ಯಾಂಕ್ ತೆರೆದೆ. ಕಾಂಪೌಂಡ್ ವಾಲ್ ಕಟ್ಟಿಸಿದೆ. ಗೋಡೆಗೆ ಚಿತ್ರ ಬರೆಸಿದೆ. ವಾಟರ್ ಟ್ಯಾಂಕ್ ಮಾಡಿಸಿದೆ. ಲಿಸ್ಟ್ ಪ್ರಕಾರ ಪ್ರಶಸ್ತಿ ಸಿಗಲು ಏನೇನ್ನೆಲ್ಲ ಮಾಡ್ಬೇಕು ಅದನ್ನು ಮಾಡಿದೆ. 

         ಅದಲ್ಲಾ.. ಸರ್.. ಪ್ರಶಸ್ತಿ ಸಿಗಲು ನೀವು ಏನೇನೆಲ್ಲ ಶ್ರಮ ಪಟ್ಟಿದ್ದೀರಿ ಸರ್... 
ಹೌದೌದು ಶ್ರಮ.. ತುಂಬಾ ಪಟ್ಟಿದ್ದೇನೆ. ಮೂರು ಮಂತ್ರಿಗಳ ಮನೆಗೆ ಮೂರು ವರ್ಷದಿಂದ ಸುತ್ತಾಡಿದ್ದೇನೆ. ಅದಲ್ಲಾ.. ಸಾರ್. ಅದು ನಾವು ಕೊಡಿಸಿದ್ದು ಅಂತ ಮಂತ್ರಿಗಳೂ ಭಾಷಣದಲ್ಲಿ ಅಲ್ಲಲ್ಲಿ ಹೇಳೋದು ಕೇಳಿದ್ದೇನೆ. ಅದು ಬಿಡಿ ಸಾರ್. ಅದು ಸಣ್ಣ ವಿಷಯ..

       ಅದಲ್ಲಾ ಸರ್... ಮಕ್ಕಳಿಗಾಗಿ ಏನು ಮಾಡಿದ್ರಿ ಸರ್.. ಅದೇ ಮಕ್ಕಳು ಈಗ ನಾನು ಕಟ್ಟಿಸಿದ ವಾಟರ್ ಟ್ಯಾಂಕಿನಿಂದ ನೀರು ಕುಡೀತಾರೆ. ಈಗ ಮಕ್ಕಳು ಕಾಂಪೌಂಡ್ ಹಾರಿ ಹೋಗುವುದಿಲ್ಲ. ಅದಲ್ಲಾ ಸಾ..ರ್. ಮಕ್ಕಳ ಬೆಳವಣಿಗೆಗೆ ಏನಾದ್ರು ಮಾಡಿದ್ರ ಸರ್. ತರಕಾರಿ ಬೆಳಸಿದ್ದನ್ನು ಬಿಸಿ ಊಟಕ್ಕೆ ಚೆನ್ನಾಗಿ ಬಳಕೆ ಮಾಡ್ತಾರೆ. 

            ಅದಲ್ಲಾ ಸರ್... ಮಕ್ಕಳ ಬೆಳವಣಿಗೆ ಗಾಗಿ ಪ್ರಶಸ್ತಿ ಸಿಕ್ಕ ಮೇಲೆ ಎನು ಮಾಡಿದ್ರಿ ಸರ್. ಊರವರೆಲ್ಲ ಮೆರವಣಿಗೆ ಮಾಡಿ ಸನ್ಮಾನ ಮಾಡಿದ್ರು. ಸಿಕ್ಕಿದ ಪ್ರಶಸ್ತಿ ಸನ್ಮಾನದ ಸಾಲುಗಳನ್ನು ಹೊಸ ಶೋ ಕೇಸ್ ಮಾಡಿ ಇಟ್ಟಿದ್ದೇನೆ . ನನ್ನದೇ ರೆಕಾರ್ಡ್ ಇಟ್ಟು ನನ್ನ ಶಾಲೆಯ ಮತ್ತೊಬ್ಬರಿಗೆ ಪ್ರಶಸ್ತಿ ಸಿಗುವ ಹಾಗೆ ಮಾಡಿದ್ದೇನೆ. 

           ಅಯ್ಯೋ ಅದಲ್ಲಾ ಸಾ...ರ್... 
ಜಗತ್ತಿಗೆ ಶ್ರೇಷ್ಠ ಸಾಧಕರಾಗಬೇಕಾಗಿದ್ದ ಮಕ್ಕಳು ಯಾರಿಂದ ವಂಚಿತರಾಗಿದ್ದಾರೆ..? ಹೇಳಿ ಸಾರ್. ಉತ್ತರ ಕೊಡಿ ಸಾರ್.

        ದೇಶದ ಪ್ರಜೆಗಳೇ ಈ ಮಾತು ಅವರ ಕಿವಿಗೆ ಬೀಳಲೇ ಇಲ್ಲ ಕ್ಷಮಿಸಿ. ಪ್ರಶಸ್ತಿಗೆ ಫೈಲ್ ರೆಡಿ ಮಾಡಿ ಬಹಳ ಮಂದಿ ಇನ್ನೂ ಹೋರಾಡುತ್ತಿದ್ದಾರೆ. ಅವರ ಜೀವನ - ಬದುಕು ಸಾರ್ಥಕವಾಗಲಿ. ಅವರು ಬೇಗ ಮನೆ ಸೇರಲಿ. ಹೊಸ ಶಿಕ್ಷಣ ನೀತಿ ಬರುತ್ತಿದೆಯಂತೆ. ದಯವಿಟ್ಟು ಅವರಿಗೆ ಪ್ರಶಸ್ತಿ ಬೇಗ ಕೊಡಿ.

          ಸರ್ ನಾನು ನಿಮ್ಮದೇ ಸ್ಟೂಡೆಂಟ್ ಸರ್. ಏನು ಹೇಳಿದ್ರಿ..?. ನಾನು ನಿಮ್ಮದೇ ಸ್ಟೂಡೆಂಟ್.. ಬಹಳ ಸಂತೋಷ. ನಿಮ್ಮಂತವರು ಬಹಳ ಮಂದಿ ನನ್ನ ಸ್ಟೂಡೆಂಟ್ ಆಗಿದ್ರು.. ಹಾಗಲ್ಲಾ ಸಾರ್.
ನಾನು 9 ನೇ ತರಗತಿಯಲ್ಲಿದ್ದಾಗ ನನಗೆ ನೀವು ಕ್ಲಾಸ್ ಟೀಚರ್ ಆಗಿದ್ರಿ ಸಾ..ರ್. ನನಗಿನ್ನೂ ಓದ್ಲಿಕ್ಕೆ ಬರಿಯಲಿಕ್ಕೆ ಸರಿಯಾಗಿ ಬರ್ತಿಲ್ಲ ಸರ್.
ಅದೂ...ನನ್ನ ದೊಡ್ಡ ಮಗ ಅಮೇರಿಕ....ದ..

         ಅದಲ್ಲಾ ಸರ್.. ನಿಮಗೆ ಪ್ರಶಸ್ತಿ ಕೊಟ್ಟವರು ಯಾರು ಸಾರ್..?.

       ಅಪ್ಪಾ.. ನನಗೆ ಭಯವಾಗ್ತಿದೆ..! ಅಂತವರು ಇನ್ನೂ ಮಕ್ಕಳೊಂದಿಗೆ ಇದ್ದಾರಾ ..? ಹೌದು ಇದ್ದಾರೆ.. ಮತ್ತು ಅವರಿಗೆ ಸಂಬಳ ಇದೆ. ಮಕ್ಕಳೆಲ್ಲ ಪಾಪ - ಪೋರ್ಷನ್ ಮುಗಿಸಿಕೊಳ್ಳುತ್ತಿದ್ದಾರೆ..
ಇದೆಲ್ಲ ನನಗಿನ್ನೂ... ಆದಿ.

ಆದಿ ಸ್ವರೂಪ 
ಮಂಗಳೂರು

Ads on article

Advertise in articles 1

advertising articles 2

Advertise under the article