ಮಳೆರಾಯ - ಕವನ
Sunday, January 17, 2021
Edit
ಧೃತಿ 8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ಟಾಳ ತಾಲೂಕು
ಮಳೆರಾಯ
ಗುಡುಗು ಮಿಂಚಿನೊಂದಿಗೆ ಮಳೆರಾಯ ಬಂದನು
ಭೂಮಿಗೆ ಕಳೆಯನು ಹರ್ಷದಿ ತಂದನು !
ಅತ್ತ ಇತ್ತ ಎಲ್ಲೆಲ್ಲೂ ನೀರು ಸುರಿಸಿದನು
ರೈತನ ಮುಖದಲಿ ಮಂದಹಾಸ ತಂದನು !
ಟಪ ಟಪ ಶಬ್ದವ ಮಾಡುತ ಬಂದನು
ಸುಂಯ್ ಸುಂಯ್ ಗುಟ್ಟುತ ಬೀಸುತಲಿದ್ದನು!
ಹಳ್ಳ - ಕೊಳ್ಳ ಬಾವಿ - ಕೆರೆಯನ್ನೆಲ್ಲಾ ತುಂಬಿದನು
ರಾಶಿ ಜೀವ ಕೋಟಿಗೆ ಸಂತಸ ನೀಡಿದನು !
ಧೃತಿ 8 ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ಟಾಳ ತಾಲೂಕು