ನನ್ನ ಮುದ್ದಿನ ನಾಯಿ
Sunday, January 17, 2021
Edit
ಅನುಶಾ ವಾಲ್ಡರ್ 6 ನೇ ತರಗತಿ
ದ.ಕ.ಜಿ.ಪಂ.ಉ.ಮಾ.ಹಿ.ಪ್ರಾ. ಶಾಲೆ
ಚೆನ್ನೈತೋಡಿ , ಬಂಟ್ವಾಳ
ನನ್ನ ಮುದ್ದಿನ ನಾಯಿ
ನಾನು ಒಂದು ಮುದ್ದಾದ ನಾಯಿಯನ್ನು ಸಾಕುತ್ತಿದ್ದೇನೆ. ನಾವೆಲ್ಲರೂ ಅದನ್ನು ರಿಂಕು ಎಂದು ಕರೆಯುತ್ತೇವೆ. ಅದರ ಮೈ ತುಂಬಾ ಕಪ್ಪು ಮತ್ತು ಕೇಸರಿ ಬಣ್ಣದ ಕೂದಲುಗಳಿವೆ. ಅದು ಬೊಗಳುತ್ತದೆ , ಜಿಗಿದು ಓಡುತ್ತದೆ ಮತ್ತು ನನ್ನೊಂದಿಗೆ ಆಟವಾಡುತ್ತದೆ. ನಾನು ಶಾಲೆ ಮುಗಿಸಿ ಮನೆಗೆ ಬಂದಾಗ ಅದು ಸಂತೋಷದಿಂದ ನನ್ನ ಹಿಂದೆಯೇ ಸುತ್ತಾಡುತ್ತಿರುತ್ತದೆ.
ನಾನು ಕೊಡುವ ಆಹಾರವನ್ನು ಅದು ಬಹು ಸಂತೋಷದಿಂದ ತಿನ್ನುತ್ತದೆ. ಅದಕ್ಕೆ ಮೀನು ಮಾಂಸ ಎಂದರೆ ಬಹು ಇಷ್ಟ. ಬಿಸ್ಕಿಟ್ ಗಳನ್ನೂ ಅದು ತಿನ್ನುತ್ತದೆ. ನನ್ನ ಅಪ್ಪ- ಅಮ್ಮ ಕೂಡಾ ಅದನ್ನು ಇಷ್ಟಪಡುತ್ತಾರೆ, ಅದನ್ನು ಮುದ್ದಿಸುತ್ತಾರೆ. ತಿಂಗಳಿಗೊಮ್ಮೆ ಸ್ನಾನ ಮಾಡಿಸುತ್ತಾರೆ. ಅದು ನಮ್ಮ ಮನೆಯನ್ನು ಚೆನ್ನಾಗಿ ಕಾಯುತ್ತದೆ. ಅದು ತುಂಬಾ ನಿಯತ್ತಿನ ಪ್ರಾಣಿಯಾಗಿದೆ.
ಅನುಶಾ ವಾಲ್ಡರ್ 6 ನೇ ತರಗತಿ
ದ.ಕ.ಜಿ.ಪಂ. ಉ.ಮಾ.ಹಿ.ಪ್ರಾ. ಶಾಲೆ ಚೆನ್ನೈತೋಡಿ , ಬಂಟ್ವಾಳ