-->
ಮತ್ತೆ ಆರಂಭ - ಶಾಲೆಯ ಪಯಣ

ಮತ್ತೆ ಆರಂಭ - ಶಾಲೆಯ ಪಯಣ

                        ಶ್ರಾವ್ಯ 10 ನೇ ತರಗತಿ
             ಸರಕಾರಿ ಪ್ರೌಢ ಶಾಲೆ ಮಂಚಿ ಕೊಳ್ನಾಡು
                          ಬಂಟ್ವಾಳ ತಾಲೂಕು



           ಮತ್ತೆ ಆರಂಭ - ಶಾಲೆಯ ಪಯಣ             

           ಕಿಲಕಿಲ ನಗು, ಅಳು, ಆಟ-ಪಾಠ, ಶಾಲಾ ಘಂಟೆಯ ಸದ್ದು ಸದಾ ಮಕ್ಕಳ ಓಡಾಟದಿಂದ ಕೂಡಿದ್ದ ಶಾಲೆ ಕೊರೋನ ಮಹಾಮಾರಿಯ ಕಾರಣದಿಂದ ಸ್ತಬ್ಧವಾಯಿತು. 2019 ಮಾರ್ಚ್ ತಿಂಗಳಿಂದ ಶಾಲೆಗೆ ವಿದ್ಯಾರ್ಥಿಗಳು ಬರುವುದು ನಿಂತುಹೋಯಿತು. ಮಕ್ಕಳು ಮನೆಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು.       

             ಮೊದ ಮೊದಲು ರಜೆಯ ಸಂಭ್ರಮದಲ್ಲಿ ಕೂಡಿದ್ದ ನಾನು ಶಾಲೆಯ ವಿಚಾರವನ್ನೆಲ್ಲ ಮರೆತುಬಿಟ್ಟಿದ್ದೆ. ರಜೆಯಲ್ಲಿ ನಾನು ನನ್ನ ಅಕ್ಕ ಪಕ್ಕದ ಮನೆಯ ಮಕ್ಕಳೊಂದಿಗೆ ಆಟ, ಊಟ ಥರಥರದ ತಿಂಡಿ ತಿನಿಸುಗಳನ್ನು ತಯಾರಿಸುವ ಹುಚ್ಚು ನಮ್ಮಲ್ಲಿ. ಮೊದಲ ಮೂರು ತಿಂಗಳ ರಜೆಯಲ್ಲಿ ಶಾಲೆಯ ಬಗೆಗಿನ ಚಿಂತೆ ಇಲ್ಲದೆ ಯಾವುದೇ ಶಾಲಾ ಚಟುವಟಿಕೆಯ ಬಗ್ಗೆ ಒಂದು ಕ್ಷಣವು ಯೋಚಿಸಲೇ ಇಲ್ಲ. ನಂತರದ ದಿನಗಳಲ್ಲಿ ಮನೆಯಲ್ಲಿ ಕೂತು ಕೂತು ನೋಡಿದ ಮುಖ ನೋಡಿ ನೋಡಿ ಬೇಜಾರಾಗಲು ಶುರುವಾಯಿತು. ಕೆಲವು ದಿನಗಳ ನಂತರ ಸರಕಾರ ಸೇತುಬಂಧ , ಸಂವೇದ ತರಗತಿಗಳನ್ನು ದೂರದರ್ಶನದಲ್ಲಿ ಆರಂಭಿಸುವ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಒಂದು ಯತ್ನ ಮಾಡಿತು. ದೂರದಿಂದ ದೂರಕ್ಕೆ ಶಿಕ್ಷಕರು ಮಕ್ಕಳನ್ನು ಸಂಪರ್ಕಿಸುವ ಒಂದು ಪ್ರಯತ್ನ ಸ್ವಲ್ಪಮಟ್ಟಿಗೆ ಸಫಲವಾಯಿತು. ಆದರೂ ಇದು ಕೆಲವು ವಿದ್ಯಾರ್ಥಿಗಳನ್ನು ತಲುಪಲು ಅಸಾಧ್ಯವಾಯಿತು. ದೂರದರ್ಶನದ ಮೂಲಕ ನಡೆದ ಶಿಕ್ಷಣದ ಪ್ರಯತ್ನ ಒಳ್ಳೆಯದಾದರೂ , ಅದನ್ನು ಅರ್ಥಮಾಡಿಕೊಳ್ಳಲು ಬಹಳ ಕಷ್ಟವಾಗುತ್ತಿತ್ತು. ಆ ಸಮಯದಲ್ಲಿ ನನಗೆ ಒಮ್ಮೆ ಶಾಲೆ ಆರಂಭವಾದರೆ ಸಾಕಿತ್ತು ಎಂಬ ಭಾವನೆ ಮೂಡಿತು. ಕೊನೆಗೂ ಹೊಸ ವರ್ಷದ ಹೊಸ ಸಂಭ್ರಮದಲ್ಲಿ ಶಾಲೆಯನ್ನು ಆರಂಭಗೊಳಿಸಲು ಸರಕಾರ ಮುಂದಾಯಿತು. 

           ಹತ್ತನೇ ತರಗತಿಯಲ್ಲಿ ಓದುತ್ತಿರುವ ನನಗೆ ಶಾಲಾರಂಭದ ವಿಚಾರ ತುಂಬಾ ಸಂತಸ ಉಂಟು ಮಾಡಿತು ಮತ್ತು ನಿರಾಳ ಭಾವನೆ ಮೂಡಿಸಿತು. ಈ ಬಾರಿಯದು ನನ್ನದು ಕೊನೆಯ ಶಾಲಾವಧಿಯಾಗಿತ್ತು. ಎಲ್ಲಿ ಇನ್ನೂ ರಜೆಯೇ ಇದ್ದು ಸ್ನೇಹಿತರೊಂದಿಗೆ ಕಳೆಯುವ ಕ್ಷಣಗಳು ಕಳೆದು ಹೋಗುತ್ತದೋ ಎಂಬ ಭಯ ನನ್ನನ್ನು ಕಾಡಿತ್ತು. ಆದರೆ ಈ ಶಾಲೆ ಆರಂಭದ ವಿಚಾರ ನನಗೆ ಖುಷಿ ನೀಡಿದೆ. ಹತ್ತನೇಯಲ್ಲಿ ಎಲ್ಲಾ ವಿಚಾರಗಳನ್ನು ನಿಜವಾಗಿಯೂ ದೀರ್ಘವಾಗಿ ಅಧ್ಯಯನ ಮಾಡಬೇಕಾಗಿತ್ತು. ಆದರೆ ರಜೆಯ ಕಾರಣದಿಂದ ಎಲ್ಲಾ ಮೇಲೆಕೆಳಗಾಯಿತು. ಇನ್ನು ಉಳಿದಿರುವ ಅಲ್ಪ ಸಮಯವನ್ನು ಸದುಪಯೋಗ ಮಾಡಬೇಕಾಗಿದೆ.

            "ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ" ಎಂಬಂತೆ ಕಳೆದುಹೋದ ಸಮಯದ ಬಗ್ಗೆ ಚಿಂತಿಸದೆ ಇನ್ನುಳಿದಿರುವ ಸಮಯವನ್ನು ಸದ್ಬಳಕೆ ಮಾಡುವ ಮೂಲಕ ಈ ವರ್ಷವನ್ನು ಉತ್ತಮ ರೀತಿಯಲ್ಲಿ ಕಳೆಯಬೇಕೆಂಬ ಹಂಬಲ, ಅಭಿಲಾಷೆ ನನ್ನದು.

                  ಕೊರೋನ ಮಹಾಮಾರಿಯ ಹಾವಳಿಯಿಂದ ತತ್ತರಿಸಿದ್ದ ಜನರನ್ನು ಅದರ ಬಾಯಿಂದ ಪಾರುಮಾಡಲು ಸರಕಾರ ಅನೇಕ ಯೋಜನೆಗಳನ್ನು ರೂಪಿಸತೊಡಗಿತು. ಶಾಲೆಯ ಮಕ್ಕಳ ಕುರಿತಾದ ವಿಚಾರ ಶಿಕ್ಷಣ ಸಚಿವರಿಗೆ ಒಂದು ಸವಾಲಾಗಿತ್ತು! ಶಿಕ್ಷಣ ಸಚಿವರು ಮನೋವೈದ್ಯರು ಹಾಗೂ ಅನೇಕ ತಜ್ಞರೊಂದಿಗೆ ಸಭೆಗಳನ್ನು ಏರ್ಪಡಿಸಿ ಶಾಲಾ-ಕಾಲೇಜುಗಳನ್ನು ತೆರೆಯುವ ಸಲುವಾಗಿ ಅನೇಕ ವಿಚಾರಗಳನ್ನು ಚರ್ಚಿಸಿ ಕೊನೆಗೆ ಒಂದು ಅಧಿಕೃತ ನಿರ್ಧಾರವಾಗಿ ಶಾಲೆ ತೆರೆಯುವ ಯೋಜನೆ ಹೊರಹೊಮ್ಮಿತು. ಈ ಯೋಜನೆ ಶಾಲಾ ಮಕ್ಕಳ ಭವಿಷ್ಯಕ್ಕೆ ಬೆಳಕು ಚೆಲ್ಲಿದಂತಾಯಿತು . ಈ ಕಾರ್ಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ನನ್ನ ಮನದಾಳದ ವಂದನೆ ........ 

                                        ಶ್ರಾವ್ಯ
                                     10 ನೇ ತರಗತಿ
                                ಸರಕಾರಿ ಪ್ರೌಢ ಶಾಲೆ
                                 ಮಂಚಿ - ಕೊಳ್ನಾಡು
                                ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article