ಸಂಕ್ರಾಂತಿ ಹಬ್ಬ - ಕವನ
Thursday, January 14, 2021
Edit
ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು
ಸಂಕ್ರಾಂತಿ ಹಬ್ಬ - ಕವನ
ನೇಸರನು ಪಥ ಬದಲಿಸುವ ದಿನ
ನಮ್ಮೆಲ್ಲರ ಕಷ್ಟಗಳು ದೂರವಾಗಲಿ ಈ ದಿನ !
ವರ್ಷದ ಮೊದಲ ಹಬ್ಬ
ರೈತರಿಗೆಲ್ಲ ಖುಷಿಯ ಹಬ್ಬ !
ಮರಳಿ ಬಂದಿದೆ ಸುಗ್ಗಿ
ರೈತರೆಲ್ಲ ಖುಷಿಯಿಂದ ಹಿಗ್ಗಿ !
ಎಳ್ಳು-ಬೆಲ್ಲ ತಿನ್ನೋಣ
ಒಳ್ಳೆಯ ಮಾತುಗಳನ್ನು ಆಡೋಣ.....
ಕಹಿ ನೆನಪುಗಳು ದೂರವಾಗಲಿ
ನೆಮ್ಮದಿಯ ತವರಾಗಲಿ.
ಪ್ರೀತಿ,ವಿಶ್ವಾಸ ತುಂಬಿರಲಿ
ಈ ಸಂಕ್ರಾಂತಿ ಹಬ್ಬದಲಿ......
ಎಲ್ಲರಿಗೂ ಒಳಿತಾಗಲಿ
ನಮ್ಮ ಬದುಕಲ್ಲಿ ಸಂ - ಕ್ರಾಂತಿಯಾಗಲಿ !
ಎಲ್ಲರ ಇಷ್ಟಾರ್ಥಗಳು ಸಿದ್ಧಿಸಲಿ
ನಲಿವು, ಹುಮ್ಮಸ್ಸಿನಿಂದ ತುಂಬಿರಲಿ....
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.....
ಸಮೃದ್ಧಿ ಎಲ್ಲರ ಬಾಳಲ್ಲೂ ತುಳುಕಲು... !
.............ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು