ಶಾಲೆಯೆಡೆಗೆ ನಮ್ಮ ಹೆಜ್ಜೆ
Thursday, January 14, 2021
Edit
ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು
ಶಾಲೆಯೆಡೆಗೆ ನಮ್ಮ ಹೆಜ್ಜೆ
ವಿದ್ಯೆ ಎಂಬುದು ಯಾರೂ ಕದಿಯಲಾರದ ಸೊತ್ತು. "ಪುಸ್ತಕ ಇಲ್ಲದ ಮನೆ, ಮನೆಯಲ್ಲವೋ ಮಸಣ.... ಪುಸ್ತಕ ಓದದ ಮಾನವ, ಮಾನವನಲ್ಲವೋ ಹೆಣ" ಎಂತಹ ನುಡಿಯಲ್ಲವೇ ಇದು... ಪುಸ್ತಕ ಓದದ ಹುಳುವನ್ನು ಕೆದಕುವಂತಹ ನುಡಿ.... ಇಂತಹ ಉತ್ತಮ ಸಾಹಿತ್ಯಕ್ಕೆ ಲೇಖನಿಯೇ ತಲೆಬಾಗಬೇಕಾಗಬಹುದು.
ಹಾಗೆಯೇ ವಿದ್ಯೆ ಹಾಗೂ ಪುಸ್ತಕಕ್ಕೆ ಅವಿನಭಾವ ಸಂಬಂಧ. ಬಿಟ್ಟಿರಲಾರದ ನಂಟು. ಪುಸ್ತಕದಲ್ಲಿ ಬರೆದರೆ ಮೆದುಳು ಚೆನ್ನಾಗಿ ಕಾರ್ಯನಿರ್ವಹಿಸಿ ಕಲಿತ ವಿದ್ಯೆಯನ್ನು ಮತ್ತೆ ಮತ್ತೆ ನೆನಪಿಸುವುದು ಎಂದು ಶಿಕ್ಷಕರು ಹೇಳಿದ ನೆನಪು. ಆದರೆ ಕೊರೋನ ಎಂಬ ಮಹಾಮಾರಿ ಈ ವಿಶ್ವವನ್ನು ಆಕ್ರಮಿಸಿ ಎಲ್ಲಾ ವ್ಯಾಪಾರ ವಹಿವಾಟುಗಳಿಗೆ ತೊಂದರೆಯುಂಟುಮಾಡಿದೆ. ಅಷ್ಟೇ ಅಲ್ಲದೇ ಅದರ ಜೊತೆಗೆ ಮಕ್ಕಳು ಶಾಲೆಗೆ ಹೋಗದೆ ಅವರ 2020ನೇ ಶೈಕ್ಷಣಿಕ ವರ್ಷವೇ ಶೂನ್ಯವರ್ಷದಂತಾಗಿತ್ತು. ಆದರೆ ನಮ್ಮ ಪ್ರಧಾನಮಂತ್ರಿಯವರು ಲಾಕ್ಡೌನ್ ಯೋಜನೆ ಜಾರಿಗೆ ತಂದರು. ಆಗ ಮಕ್ಕಳು ಶಾಲೆಗಳಿಗೆ ಹೋಗದೆ, ಮನೆಯಲ್ಲಿಯೇ ಆನ್ಲೈನ್ ಕ್ಲಾಸ್ ಗಳನ್ನು ವೀಕ್ಷಿಸಬೇಕಾಗಿತ್ತು.
ನಮಗೆಲ್ಲ ವಿವಿಧ ಚಟುವಟಿಕೆಗಳನ್ನು ನೀಡುತ್ತಿದ್ದರು. ಅಂದರೆ ಕ್ರಾಫ್ಟ್, ಕವನ, ಕಥೆ , ಲೇಖನ ಬರೆಯುವುದು ಹೀಗೆ ತುಂಬಾ ಚಟುವಟಿಕೆಗಳನ್ನು ನೀಡುತ್ತಿದ್ದರು. ಸ್ವಲ್ಪ ದಿನಗಳ ಬಳಿಕ ವಿದ್ಯಾಗಮ ತರಗತಿಯನ್ನು ಆರಂಭಿಸಿದರು. ಆಗ ನಮಗೆಲ್ಲ ಜನವಸತಿ ಕೇಂದ್ರಗಳಲ್ಲಿ ತರಗತಿಗಳು ನಡೆಯುತ್ತಿತ್ತು. ಆದರೆ ಇಲ್ಲಿ ತುಂಬಾ ಉಪಯೋಗವಾಗುತ್ತಿತ್ತು. ಅಂದರೆ ನಮಗೆ ಗೊತ್ತಿಲ್ಲದ ವಿಷಯಗಳನ್ನು ಕೇಳಿ ಬಗೆಹರಿಸಿಕೊಳ್ಳಬಹುದಿತ್ತು. ಆದರೆ ಆನ್ಲೈನ್ ಕ್ಲಾಸ್ ನಲ್ಲಿ ಅರ್ಥಮಾಡಿಕೊಳ್ಳಲು ತುಂಬಾ ಕಷ್ಟವಾಗುತ್ತಿತ್ತು. ನಂತರ ಸ್ವಲ್ಪ ದಿನಗಳ ನಂತರ ವಿದ್ಯಾಗಮನ ತರಗತಿಗಳು ಕೂಡ ಕಾರಣಾಂತರಗಳಿಂದ ನಿಂತುಹೋಯಿತು. ನಮಗೆ ಅಂದರೆ ವಿದ್ಯಾರ್ಥಿಗಳಿಗೆಲ್ಲ ತುಂಬಾ ಕಷ್ಟವಾಯಿತು.
ನಂತರ ಕೊರೋನ ಆತಂಕದ ಹಿನ್ನೆಲೆಯಲ್ಲಿ ವಿದ್ಯಾಗಮ ತರಗತಿ ಆರಂಭ ಮಾಡಬೇಕೋ - ಬೇಡವೋ ಎಂಬ ಗೊಂದಲವಿತ್ತು. ಆದರೂ ಶಿಕ್ಷಣ ಇಲಾಖೆಯ ಸಚಿವರಾದ ಸನ್ಮಾನ್ಯ ಸುರೇಶ್ ಕುಮಾರ್ ರವರು ಎಲ್ಲಾ ವಿದ್ಯಾರ್ಥಿಗಳ ಪೋಷಕರಿಗೆ ಅರಿವು ಮೂಡಿಸಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲೆ ಆರಂಭಿಸುವಂತೆ ಮನವಿ ಮಾಡಿದರು. ವಿದ್ಯಾಗಮ ಕಾರ್ಯಕ್ರಮವು ಅತ್ಯಂತ ವೈಜ್ಞಾನಿಕವಾಗಿ ರೂಪಿತವಾಗಿದ್ದು, ಸಮಾಜದ ದುರ್ಬಲ ವರ್ಗದ ಮಕ್ಕಳ ಕಲಿಕೆಯನ್ನು ಮುಂದುವರೆಸಲು, ಶಿಕ್ಷಕ - ವಿದ್ಯಾರ್ಥಿಗಳ ಸ್ನೇಹ ಸಂಬಂಧವನ್ನು ಗಟ್ಟಿಗೊಳಿಸುವ ಮೂಲಕ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾಗಿದೆ. ವಿದ್ಯಾರ್ಥಿಗಳನ್ನು ಮತ್ತೆ ವಿದ್ಯಾಭ್ಯಾಸದ ಕಡೆಗೆ ಸೆಳೆದು ನಿರಂತರ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು 'ವಿದ್ಯಾಗಮ ತರಗತಿ ' ತುಂಬಾ ಉಪಯುಕ್ತವಾಗಿದೆ.
ಇಡೀ ದೇಶದಲ್ಲಿ ನಮ್ಮ ರಾಜ್ಯದ ವಿದ್ಯಾಗಮ ತರಗತಿ ಮಾದರಿಯಾಗಿದೆ. ಅಷ್ಟೇ ಅಲ್ಲದೇ ನಮ್ಮ ಆರೋಗ್ಯವನ್ನು ಸ್ವಚ್ಛವಾಗಿಡುವುದು, ಮಾತ್ರವಲ್ಲದೆ ನಮ್ಮ ಸುರಕ್ಷತೆ, ನಮ್ಮ ಜವಾಬ್ದಾರಿ ಯಾಗಿದೆ. ಅಂದರೆ ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ನಮಗೆ ಉಪಯುಕ್ತವಾಗಿದೆ. ನಮ್ಮಲ್ಲಿರುವ ಗೊಂದಲಗಳು ಅಂದರೆ ಪಾಠಕ್ಕೆ ಸಂಬಂಧಿಸಿದ ಗೊಂದಲಗಳನ್ನು ಶಿಕ್ಷಕರಲ್ಲಿ ಕೇಳಿ ಬಗೆಹರಿಸಿಕೊಳ್ಳಬಹುದು. ಒಟ್ಟಾರೆಯಾಗಿ ಶಾಲೆ (ವಿದ್ಯಾಗಮ ತರಗತಿ) ಪುನರಾರಂಭವಾಗಿ ತುಂಬಾ ಖುಷಿಯಾಯಿತು.
ಶಾಲೆಯಲ್ಲಿ ಮಾಡುವ ಪಾಠದ ನವೀನ ಪದ್ಧತಿಯಿದು ವಿದ್ಯಾಗಮ..
ದಿನದಿಂದ ದಿನಕ್ಕೆ ತುಸು ಹೆಚ್ಚೇ ಪಸರಿಸುತಲಿದೆ ಈ ವಿದ್ಯೆಯ ಘಮ..!
------------ ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಬಂಟ್ವಾಳ ತಾಲೂಕು