-->
ಚಿಟ್ಟೆ - ಕವನ

ಚಿಟ್ಟೆ - ಕವನ

ಅನ್ವಿತ್, 4 ನೇ ತರಗತಿ, 
ಸ. ಹಿ. ಪ್ರಾ. ಶಾಲೆ ಕೊಮೆ ತೆಕ್ಕಟ್ಟೆ, ಕುಂದಾಪುರ.


                        ಚಿಟ್ಟೆ - ಕವನ
        
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ

ನಿನ್ನನು ಹಿಡಿದರೆ ನಾ ಕೆಟ್ಟೆ 

ಅದಕೆ ನಿನ್ನನು ಹಾರಲು ಬಿಟ್ಟೆ !

ನಮ್ಮ ಮನೆಯ ಹೂವಿನ ತೋಟಕೆ

ಘಮಘಮ ಸುವಾಸನೆ ಬೀರುವ

ಹೂವಿನ ರಸವನು ಸವಿಯಲು

ಬರುವೆಯ ಬಣ್ಣದಚಿಟ್ಟೆ.....

ಸೂರ್ಯೋದಯದ ವೇಳೆಗೆ ಹಾರುತ ಹಾರುತ

ಈಚಿಂದಾಚೆ ಆಚಿಂದೀಚೆ ನಲಿಯುವ ಚಿಟ್ಟೆ

ದಿನವೂ ನಿನ್ನನು ನೋಡಲು

ನನ್ನಯ ಮನಸ್ಸಿಗೆ ಖುಷಿಯನು ಕೊಟ್ಟೆ !

ನನ್ನ ಒಲವಿನ ಬಣ್ಣದ ಚಿಟ್ಟೆ

ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ

ನಿನ್ನನು ಹಿಡಿದರೆ ನಾ ಕೆಟ್ಟೆ

ಅದಕೆ ನಿನ್ನನು ಹಾರಲು ಬಿಟ್ಟೆ !


ಅನ್ವಿತ್, 4 ನೇ ತರಗತಿ, ಸ. ಹಿ. ಪ್ರಾ. ಶಾಲೆ ಕೊಮೆ ತೆಕ್ಕಟ್ಟೆ, ಕುಂದಾಪುರ.

Ads on article

Advertise in articles 1

advertising articles 2

Advertise under the article