-->
ಮಕರ ಸಂಕ್ರಾಂತಿ - ಕವನ

ಮಕರ ಸಂಕ್ರಾಂತಿ - ಕವನ

   ಲಾವಣ್ಯ ಎಸ್.ಜಿ 9ನೇ ತರಗತಿ
   ಸರಕಾರಿ ಪ್ರೌಢಶಾಲೆ ಕಾಡುಮಠ 
   ಬಂಟ್ವಾಳ ತಾಲೂಕುಮಕರ ಸಂಕ್ರಾಂತಿ - ಕವನ 

ಎಳ್ಳು ಬೆಲ್ಲವ ಸೇರಿಸಿ
ಸಿಹಿ ಹಂಚುವ ಲೋಕದೊಳು !

ಸಿಹಿ ಮಾತುಗಳನ್ನಾಡಿ 
ಒಳಹೊಕ್ಕುವ ಎಲ್ಲರ ಮನದೊಳು !

ಹೊಸ ವರುಷದ ಮೊದಲ 
ಹಬ್ಬವಿದು ನಾಡಿನೊಳು !

ಪ್ರೀತಿ ಹಂಚುತ ಅಮರವಾಗಿರುವ 
ಎಲ್ಲರ ಹೃದಯದೊಳು !

 ....................ಕಲ್ಪನಾ ಲೋಕದ ವಿಹಾರಿ

ಬಂದಿತು ಮಕರ ಸಂಕ್ರಾಂತಿ 
ಬಾಳ ಬೆಳಗುವ ಮಕರ ಜ್ಯೋತಿಯಾಗಿ..

ಹೋಗಲಾಡಿಸಿತು ಕಾರಿರುಳುಗಳ 
ನಂದಾದೀಪವಾಗಿ..! 

ಪಾಪ ಕರ್ಮಗಳಿಗೆ ಮುಕ್ತಿ ನೀಡುವ
ಗೋಚರಿಸಿತು ಭಕ್ತರಿಗೆ ದಿವ್ಯ ಸ್ವರೂಪವಾಗಿ !

ಶಬರಿಮಲೆಯ ಪುಣ್ಯ ಮಲೆಯಲಿ
ಸಕಲರೂ ಭಾವಪೂರ್ಣರಾಗಿ !

...........................ಕಲ್ಪನಾ ಲೋಕದ ವಿಹಾರಿ

..............ಲಾವಣ್ಯ ಎಸ್.ಜಿ 9ನೇ ತರಗತಿ
                 ಸರಕಾರಿ ಪ್ರೌಢಶಾಲೆ ಕಾಡುಮಠ 
                        ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article