ಪರಿವರ್ತನೆ - ಕಥೆ
Friday, December 25, 2020
Edit
ಯಶ್ಮಿತಾ ಟಿ
10 ನೇ ತರಗತಿ
ಪರಿವರ್ತನೆ - ಕಥೆ
ಒಂದು ಚಿಕ್ಕ ಊರಿನಲ್ಲಿ ಹಲವು ಮನೆಗಳು ಇದ್ದವು. ಅದರಲ್ಲಿ ಶ್ರೀಮಂತರ ಮನೆ ದೊಡ್ಡದಾಗಿತ್ತು. ಈ ಊರಿನಲ್ಲಿ ಒಂದು ಖಾಸಗಿ ಶಾಲೆಯೂ ಇತ್ತು. ಆ ಶಾಲೆಯ ಒಂದು ಬಡ ವಿದ್ಯಾರ್ಥಿನಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಕೆಯ ಹೆಸರು ಸ್ವಾತಿ. ಅವಳ ಮನೆಯಲ್ಲಿ ಸ್ವಾತಿ ಮತ್ತು ಅವಳ ತಂದೆ. ಅವಳ ತಂದೆ ಕೂಲಿ ಕೆಲಸಕ್ಕೆ ಹೋಗಿ ತನ್ನ ಮಗಳನ್ನು ಯಾವುದೇ ತೊಂದರೆಯಾಗದಂತೆ ಚೆನ್ನಾಗಿ ಸಾಕುತ್ತಿದ್ದರು. ಸ್ವಾತಿಯ ತಂದೆಗೆ ತುಂಬಾ ವಯಸ್ಸಾಗಿತ್ತು. ಹಾಗಾಗಿ ತುಂಬಾ ಹೊತ್ತು ಕೆಲಸ ಮಾಡಲು ಆಗುತ್ತಿರಲಿಲ್ಲ. ವಯಸ್ಸಾದ ಮೇಲೆ ಹಾಗೇ ಅಲ್ಲವೇ ? , ಕಾಲು ಕೈ ಸೊಂಟ ನೋವು.
ಸ್ವಾತಿ ಬೆಳಿಗ್ಗೆ ಬೇಗ ಎದ್ಧು ಸ್ನಾನ ಮಾಡಿ ತಿಂಡಿ ತಿಂದು ಮನೆ ಕೆಲಸ ಮಾಡಿ ಪಾಠ ಓದಿ ಪುನರ್ಮನನ ಮಾಡುತ್ತಿದ್ದಳು. ನಂತರ ಶಾಲೆಗೆ ತನ್ನ ಪುಟ್ಟ ಸೈಕಲ್ನಲ್ಲಿ ಶಾಲೆಗೆ ಹೋಗುತ್ತಿದ್ದಳು. ಒಂದು ದಿನ ಶಾಲೆಯ ಹತ್ತಿರದ ದಾರಿಯಲ್ಲಿ ಸ್ವಾತಿಯ ಸೈಕಲ್ ಚೈನ್ ತುಂಡಾಗಿ ಸ್ವಾತಿ ಬಿದ್ದಳು. ಆಕೆಯ ಕೈಯ ಹಿಂಬಾಗಕ್ಕೆ ಮತ್ತು ಮೊಣಕಾಲಿಗೆ ಗಾಯಗಳಾಯಿತು. ಇದನ್ನು ನೋಡಿದ ಒಬ್ಬ ಗೆಳೆಯ ಜೋರಾಗಿ ನಗಾಡಿದ. ಅವನು ತನ್ನ ತಂದೆಯ ಕಾರ್ ನಲ್ಲಿ ಕುಳಿತು ಆಹ..! ಹ...! ಸ್ವಾತಿ ಮತ್ತು ಅವಳ ಸೈಕಲ್ ಬಿತ್ತು ಎಂದು ಜೋರಾಗಿ ನಗುತ್ತಿದ್ದ. " ನನ್ನನು ನೋಡು ನಾನು ಯಾವಾಗಲೂ ಈ ದೊಡ್ಡ ಕಾರ್ ನಲ್ಲಿ ಬರುತ್ತೇನೆ , ನಿನ್ನ ಹಾಗೇ ಹಾಳಾದ ಸೈಕಲ್ ಅಲ್ಲಿ ಬರುವುದಿಲ್ಲ " ಎಂದು ಎಲ್ಲರ ಮುಂದೆ ಹಾಸ್ಯ ಮಾಡಿದನು. ಸ್ವಾತಿಯನ್ನು ನೋಡಿ ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಎಲ್ಲರೂ ಸೇರಿ ನಕ್ಕರು. ಸ್ವಾತಿಗೆ ತುಂಬಾ ಬೇಸರವಾಯಿತು. ಆದರೂ ಒಬ್ಬಳೇ ಎದ್ದು ಶಾಲೆಗೆ ಹೋಗಿ ಕೊಳೆ ಯಾದ ಬಟ್ಟೆ ಮತ್ತು ಕೈ ಕಾಲುನ್ನು ತೊಳೆದು ತರಗತಿಗೆ ಪ್ರವೇಶ ಮಾಡಿದಳು. ತರಗತಿ ಮುಗಿದು ಸಂಜೆ ಮನೆಗೆ ನಡೆದುಕೊಂಡು ಹೋದಳು. ಮನೆಯಲ್ಲಿ ಗಾಯಕ್ಕೆ ಮದ್ದು ಹಚ್ಚಿ ಮಲಗಿದಳು. ನಂತರ ತಂದೆ ಸೈಕಲನ್ನು ಸರಿ ಮಾಡಿ ಕೊಟ್ಟರು.
ಕೆಲವು ದಿನ ಕಳೆದ ನಂತರ ಸ್ವಾತಿಯನ್ನ ಹಾಸ್ಯ ಮಾಡಿದ ವಿಧ್ಯಾರ್ಥಿಯ ಕಾರಿನ ಚಕ್ರ ಪಂಕ್ಚರ್ ಆಗಿ ಅವನು ಶಾಲೆಗೆ ನಡೆದುಕೊಂಡು ಬರುತಿದ್ದ. ಹೀಗೆ ನೋಡಿದ ಕೆಲವು ವಿದ್ಯಾರ್ಥಿ ಗಳು ಅವನನ್ನು ತಮಾಷೆ ಮಾಡಿದರು. ಸ್ವಾತಿ ಯ ಮುಂದೆ ಅವನಿಗೆ ಮುಜುಗರವಾಯಿತು. ಮೊನ್ನೆ ನಾನು ಕೂಡ ತಮಾಷೆ ಮಾಡದಿರುತ್ತಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದುಕೊಂಡ. ಸ್ವಾತಿಯ ಬಳಿಗೆ ಹೋಗಿ ನನಿಂದ ತಪ್ಪಾಯಿತು ನನ್ನನು ಕ್ಷಮಿಸು ಎಂದು ಭಾವುಕನಾಗಿ ಹೇಳಿದ. ಸ್ವಾತಿ, "ನಾವು ಯಾರಿಗೂ ನೋಯಿಸಬಾರದು ನಮ್ಮಿಂದ ಸಾಧ್ಯವಾದರೆ ಸಹಾಯ ಮಾಡಬೇಕು. ಎಲ್ಲರಲ್ಲೂ ಸಮಾಧಾನದ ಮಾತುಗಳನ್ನು ಆಡಬೇಕು" ಎಂದಳು. ನಂತರ ಇಬ್ಬರೂ ಶಾಲೆಯಲ್ಲಿ ಒಳ್ಳೆಯ ಗೆಳೆಯರಾದರು.
ಯಶ್ಮಿತಾ ಟಿ. 10 ನೇ ತರಗತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ
ಬಂಟ್ವಾಳ ತಾಲೂಕು