
ಸೂರ್ಯ - ಕವನ
Friday, December 25, 2020
Edit
ವಿಖ್ಯಾತಿ ಬೆಜ್ಜಂಗಳ
8 ನೇ ತರಗತಿ
ಸೂರ್ಯ - ಕವನ
ಬೆಳಗಾಯಿತು ಎಂದು ಹೇಳುವ
ಜಾಣ ನೀ ಸೂರ್ಯ
ನಿನ್ನನ್ನು ನೋಡಲು ಬಹಳ ಇಷ್ಟ
ನಿನ್ನ ಹಾಗೆ ಆಗಬೇಕು ನನಗೆ
ಏನು ಮಾಡಲಿ ಹೇಳು ನೀ ಸೂರ್ಯನೆ
ಎಷ್ಟು ಸುಂದರ ಅಹಾ ನಿನ್ನನ್ನು ನೋಡಲು
ಕಲಿಯಬೇಕು ನಿನ್ನಿಂದ ನೋಡಿ ಬದುಕಲು
ಯಾರಿಗೂ ಹೆದರದ ಶಕ್ತಿ ನೀನು
ಕತ್ತಲನ್ನು ಓಡಿಸುವ ಬೆಳಕು ನೀನು
ನಿನ್ನನ್ನು ಸೃಷ್ಟಿ ಮಾಡಿದವರು ಯಾರು?
ನಿನ್ನ ನ್ನು ನೋಡಲು ಬಹಳ ಆಸೆ
ಆದರೆ ನೀನು ಬಹಳ ದೂರ
ಸುಂದರದ ಮಂದರ ನೀನು
ಓ ಸೂರ್ಯನೇ
ನೀ ಯಾರ ಮಗ
ತಂದೆ ತಾಯಿ ಯಾರು
ಹೇಳು ಸೂರ್ಯನೆ
ಓ ಸೂರ್ಯ ನೀ ಯಾರು
ಹೇಳು ಸೂರ್ಯನೇ ಹೇಳು
ವಿಖ್ಯಾತಿ ಬೆಜ್ಜಂಗಳ.
8 ನೇ ತರಗತಿ.
ಸುದಾನ ವಸತಿಯುತ ಶಾಲೆ ಪುತ್ತೂರು.