ಚುಟುಕುಗಳು - ಆದ್ಯಂತ್ ಅಡೂರ್
Friday, December 25, 2020
Edit
ಆದ್ಯಂತ್ ಅಡೂರು 7ನೇ ತರಗತಿ
ಚುಟುಕುಗಳು
ಅಮ್ಮ
ಅಮ್ಮನೇ ಕಣ್ಣಿಗೆ ಕಾಣುವ
ದೇವರು
ಕೈಯನು ಹಿಡಿದು ನಡೆಸುವರು
ಬಗೆಬಗೆ ತಿಂಡಿಯ ತಿನಿಸುವರು
ಮಮತೆಯ ನಮಗೆ ಹಂಚುವರು
ತುಳಸಿ
ತುಳಸಿ ತುಳಸಿ ತುಳಸಿ
ಮನೆಯ ಪರಿಸರದಿ ತುಳಸಿ
ಪೂಜೆಗೆ ಬೇಕು ತುಳಸಿ
ತುಳಸಿ ಬೆಳೆಸಿ ಆರೋಗ್ಯ ಉಳಿಸಿ
ವಿದ್ಯುತ್
ವಿದ್ಯುತ್ ಯಾವತ್ತೂ ಅಪಾಯಕಾರಿ
ಜಾಗ್ರತೆ ಮಾಡಿದರೆ ಬಲು ಉಪಕಾರಿ
ವಿದ್ಯುತ್ ಬೇಕು ಯಂತ್ರ ಚಲನೆಗೆ
ಇದುವೇ ಮುಖ್ಯವು ಕೃಷಿ ಭೂಮಿಗೆ.
ನಮಸ್ಕಾರ
ಕೈ ಮುಗಿದು ಮಾಡುವೆವು ನಮಸ್ಕಾರ
ಎರಡು ಮನಸ್ಸುಗಳಿಗೆ ಇದರಿಂದ ಪುರಸ್ಕಾರ
ವಂದಿಸಿ ಇನ್ನೊಬ್ಬರನ್ನು ಗೌರವಿಸುವೆವು
ಪ್ರೀತಿಸಿ ಪರಸ್ಪರ ಅರಿತು ಬಾಳುವೆವು
ನಗು
ನಗುವಿನಿಂದ ಸಿಗುವುದು ಆರೋಗ್ಯ
ಇದರಿಂದ ದೊರೆಯುವುದು ನೆಮ್ಮದಿಯ ಭಾಗ್ಯ
ಸಾಗುವುದು ನಮ್ಮ ಚಿಂತೆಗಳು ಬಲುದೂರ
ನಗುವಿನಿಂದ ನಮ್ಮೆಲ್ಲರ ಜೀವನ ಹಗುರ.
ಆದ್ಯಂತ್ ಅಡೂರು 7ನೇ ತರಗತಿ
ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆ, ಈಶ್ವರಮಂಗಲ, ಪುತ್ತೂರು ತಾಲೂಕು, ದ.ಕ.