ಜಾಣ ಯುವಕ - ಕಥೆ
Wednesday, December 16, 2020
Edit
ವಂದನಾ ಕೆ. ಎಚ್.
2ನೇ ತರಗತಿ
ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ
ಕುದ್ಮಾರು, ಪುತ್ತೂರು ತಾಲೂಕು.
ಜಾಣ ಯುವಕ - ಕಥೆ
ಒಂದು ಊರು. ಊರಿನಲ್ಲಿ ಜನರು ವಾಸಿಸುತ್ತಿದ್ದರು. ಅದೇ ಊರಿನಲ್ಲಿ ಕಳ್ಳರು ಸಹ ವಾಸಿಸುತ್ತಿದ್ದರು. ಆದರೆ ಯಾರಿಗೂ ತಿಳಿದಿರಲಿಲ್ಲ. ಹೀಗೆ ಪ್ರತಿದಿನ ಕಳ್ಳತನ ನಡೆಯುತ್ತಿತ್ತು. ಒಂದು ದಿನ ಹೇಗೆ ಕಳ್ಳತನವಾಯಿತು ಎಂದು ಊರಿನ ಜನರೆಲ್ಲಾ ಒಂದೆಡೆ ಸೇರಿದರು. ನಮ್ಮ ಊರಿನಲ್ಲಿ ಯಾರು ಕಳ್ಳರು ಎಂದು ಹೇಗೆ ಕಂಡುಹಿಡಿಯುವುದು. ಎಂದು ಆಲೋಚಿಸಿದರು. ಆ ಗುಂಪಿನಲ್ಲಿ ಒಬ್ಬ ಯುವಕ ಇದ್ದ. ಅವ ಹೇಳಿದ ಯಾರು ಹೆದರಬೇಡಿ ನಾನು ನನ್ನ ಮನೆಯ ಪ್ರತಿವಸ್ತುವಿನ ಎಡೆಯಲ್ಲಿ ಸಿಡಿಯುವ ಪಟಾಕಿ ಇಟ್ಟಿದ್ದೇನೆ. ಸ್ವಲ್ಪದರಲ್ಲೇ ಆ ಪಟಾಕಿ ಸಿಡಿಯುವುದು ಎಂದನು. ಗುಂಪಿನಲ್ಲಿದ್ದ ಕಳ್ಳರಿಗೆ ಭಯವಾಯಿತು. ಅವರು ಕಳ್ಳತನ ಮಾಡಿದ ವಸ್ತುಗಳನ್ನೆಲ್ಲ ಹೊರಗೆ ತಂದು ಇಟ್ಟರು. ಮತ್ತು ಇನ್ನು ಮುಂದೆ ಕಳ್ಳತನ ಮಾಡುವುದು ಇಲ್ಲ ಎಂದು ಕ್ಷಮೆ ಕೇಳಿದರು.
ರಚನೆ: ವಂದನಾ ಕೆ ಹೆಚ್
ಎರಡನೇ ತರಗತಿ