-->
ಹೊಸ ವರುಷ - ಹರುಷದ ನಿರೀಕ್ಷೆ

ಹೊಸ ವರುಷ - ಹರುಷದ ನಿರೀಕ್ಷೆ

      ಶ್ರಾವ್ಯ 10 ನೇ ತರಗತಿ
      ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
      ಬಂಟ್ವಾಳ ತಾಲೂಕು

          ಹೊಸ ವರುಷ - ಹರುಷದ ನಿರೀಕ್ಷೆ 

           ಹಳೆ ನೆನಪುಗಳ ಪುಟ ಮಗುಚಿ ಹೊಸ ಕನಸುಗಳ ನಾಂದಿಗೆ ಸಿದ್ಧವಾಗುತ್ತಿದ್ದೇವೆ. ಹಳೆ ವರುಷ ಮುಗಿಯುತ್ತಿದ್ದಂತೆ ಹೊಸ ಹೊಸ ಕನಸು, ಹಂಬಲ, ಆಕಾಂಕ್ಷೆಯ ಬುಟ್ಟಿ ಹೊತ್ತು ಸಾಗಲು ಆರಂಭಿಸಿದ್ದೇವೆ. ಹೊಸಹಾದಿ, ಹೊಸದಿನ, ಹೊಸ ಚಿಂತನೆ, ಹೊಸನೆನಪುಗಳನ್ನು ಬುಟ್ಟಿಯಲ್ಲಿ ತುಂಬಿ ಮುಂದೆ ಸಾಗುವ ಪಯಣ ಇದಾಗಿರಲಿ ಎಂಬ ಹಂಬಲ ನನ್ನದು. ಹಳೆ ವರುಷದಲ್ಲಿ ಕಳೆದುಹೋದ ಸಿಹಿ-ಕಹಿ ಘಟನೆಗಳ ನೆನಪು, ಕಲಿತ ಪಾಠ ಇನ್ನೂ ಹೊಸವರ್ಷದ ಮಾರ್ಗದರ್ಶಕ ವಾಗಿರಲಿ. "ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು" ಎಂಬಂತೆ ಹೊಸ ವರುಷವು ಹೊಸ ಅನುಭವಕ್ಕೆ ಹೊಸ ವಿಚಾರಗಳನ್ನು ತುಂಬುವ ವರುಷವಾಗಲಿ. ನಮ್ಮ ಹಳೆ ನೆನಪುಗಳ ಬುಟ್ಟಿಗೆ ಈ ವರುಷವು ಕನಸುಗಳ ಅನುಭವಗಳನ್ನು ಕೂಡಲಿ.
     ಈ ವರುಷ ಹೊಸ ಪರಿವರ್ತನೆಯನ್ನು ತರುವ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಿಸುವಂತಾಗಲಿ. ಕಳೆದುಹೋದ ವರುಷದಲ್ಲಿ ಎದುರಾದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಲಿ. ಹೊಸ ವರುಷದಲ್ಲಿ ಸ್ತಬ್ಧವಾದ ಕಾರ್ಯವೆಲ್ಲವೂ ಆರಂಭವಾಗಿ ಉನ್ನತಿಯೆಡೆಗೆ ಸಾಗಲಿ. ಹೊಸ ವರುಷದ ಆರಂಭದಲ್ಲಿ ಹೊಸ ಹವ್ಯಾಸಗಳು ಉದಯಿಸಲಿ, ಹವ್ಯಾಸಗಳು ಅಭ್ಯಾಸವಾಗಿ ಸಾಧನೆಯೆಡೆಗೆ ತಲುಪುವಂತಾಗಲಿ. ವಸಂತಕಾಲದಿ ಮರಗಿಡಗಳು ಚಿಗುರೊಡೆದು ಹಚ್ಚಹಸುರಾಗಿ ರಂಜಿಸುವಂತೆ ಪ್ರಾಣಿ-ಪಕ್ಷಿಗಳು ನಲಿದಾಡುವಂತೆ ಹೊಸ ವರ್ಷದಲ್ಲಿ ಹೊಸ ಹೊಸ ಆಲೋಚನೆ , ಉತ್ತಮ ಯೋಚನೆ ಚಿಗುರೊಡೆದು ಉತ್ತಮ ಭವಿಷ್ಯ ಕಟ್ಟಿಕೊಡುವಲ್ಲಿ ಒಂದೊಳ್ಳೆ ಬೆಳಕಾಗಲಿ. ಕಾಲ ಉರುಳಿದಂತೆ ಮಾನವನ ವರ್ತನೆಯಲ್ಲಿ ಆಗುವ ಬದಲಾವಣೆ ಸಕರಾತ್ಮಕತೆಗೆ ಬದಲಾವಣೆಯಾಗಿ ಸಂಕುಚಿತ ಮನೋಭಾವನೆಯನ್ನು ಅಗಲಿ, ವಿಶಾಲ ಮನೋಭಾವ ನಮ್ಮಲ್ಲಿ ಮೂಡಲಿ, ಪರೋಪಕಾರ, ತ್ಯಾಗ, ತಾಳ್ಮೆ, ಸ್ವೀಕರಿಸುವ ಗುಣ ನಮ್ಮ ಗುರಿಯಾಗಿರಲಿ.  
            ಹೊಸ ವರುಷದಲ್ಲಿ ಹೊಸ ಹರುಷ ತುಂಬಿದ ಪಯಣ ನಮ್ಮ ನಿಮ್ಮೆಲ್ಲರದ್ದಾಗಲಿ........ 

                                        ಶ್ರಾವ್ಯ
                                     10 ನೇ ತರಗತಿ
                                     ಸರಕಾರಿ ಪ್ರೌಢ ಶಾಲೆ
                                      ಮಂಚಿ-ಕೊಳ್ನಾಡು
                                  ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article