ಹೊಸ ವರುಷದಾನಂದ - ಕವನ
Thursday, December 31, 2020
Edit
ರಕ್ಷಾ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಪಂಜೀಕಲ್ಲು
ಬಂಟ್ವಾಳ ತಾಲೂಕು
ಹೊಸ ವರುಷದಾನಂದ - ಕವನ
ಕಂಡೆನು ನಾನು ಹೊಸದಾದ ಚಿತ್ರಣ !
ಭರವಸೆಗಳ ಹಾದಿಯಲ್ಲಿ,
ನಂಬಿಕೆಯ ಮಾತುಗಳನ್ನು
ಚೆಲ್ಲುವೆನು ಇಲ್ಲಿ
ಎಲ್ಲರೂ ಆಲಿಸಿ ಕೇಳಿ ಇಲ್ಲಿ
ಹೊಸ ವರುಷಕ್ಕೆ ಕಾಲಿಡುತ್ತಿದ್ದಂತೆ
ಸಹಪಾಠಿಗಳ ಆಗಮನ
ಅಂದ ಚೆಂದದ ಅಕ್ಷರಗಳ ಮಾಲೆ,
ಕಂಗೊಳಿಸಿತು
ಸರ್ವಧರ್ಮೀಯರ ಹೆಮ್ಮೆಯ ಮನೆ
ನಮ್ಮೆಲ್ಲರ ಪ್ರೀತಿಯ ಶಾಲೆ,
ಹೊಸ ವರುಷವು ಹೊಸ ಹರುಷವನು,
ಹೊಸ ವರುಷದ ಚಿತ್ರಣದಲ್ಲಿ ಕಂಡೆ ನಾನು ದೇವಲೋಕವನು !
ಮೈ ಮರೆತು ಹೋದೆ ನಾ ಸಂತೋಷದಲಿ
ಹೇಳತೀರದು ಹೊಸ ವರುಷದ ಆನಂದವನು !
2021 ಕ್ಕೆ ಮಾಡೋಣ ಸ್ವಾಗತವನು.
ರಕ್ಷಾ
10 ನೇ ತರಗತಿ
ಸರಕಾರಿ ಪ್ರೌಢಶಾಲೆ ಪಂಜೀಕಲ್ಲು
ಬಂಟ್ವಾಳ ತಾಲೂಕು