ಅಮ್ಮ - ಕವನ
Saturday, December 5, 2020
Edit
ಅಮ್ಮ - ಕವನ
ಪ್ರೀತಿಕಾ 6ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಪುಣ್ಚಪ್ಪಾಡಿ , ಪುತ್ತೂರು
ಅಮ್ಮ
ನೀ ನನಗಿತ್ತೆ ಸುಂದರ
ಜನುಮವನು
ಮರೆತು ಹೋದೆ ನನಗಾಗಿ
ನಿನ್ನೆಲ್ಲ ನೋವನು
ಸ್ವರ್ಗಕ್ಕಿಂತ ಮಿಗಿಲು
ಆ ನಿನ್ನ ಮಡಿಲು
ಜೋಪಾನವಾಗಿ ಕಾಯುವುದು
ನನ್ನ ಒಡಲು
ಹಸಿವೆಂದು ಬಂದರೆ
ನೀಡುವೆ ಕೈತುತ್ತು
ಅಮ್ಮಾ ಎಂದು
ಕರೆಯುವುದೇ ಸಂಪತ್ತು
ನೀ ಕೈಹಿಡಿದರೆ
ಜಗವನ್ನೇ ಗೆಲ್ಲುವ ಹುಮ್ಮಸ್ಸು
ನಿನ್ನ ಮೊಗದ ನಗುವೇ
ನನಗೊಲಿವ ಯಶಸ್ಸು
ಪ್ರೀತಿಕಾ
6ನೇ ತರಗತಿ
ಸ.ಹಿ.ಪ್ರಾ.ಶಾಲೆ ಪುಣ್ಚಪ್ಪಾಡಿ
ಪುತ್ತೂರು