ಸ್ವಚ್ಛ ಪರಿಸರ - ಕವನ
Saturday, December 5, 2020
Edit
ಸ್ವಚ್ಛ ಪರಿಸರ - ಕವನ
ಸರಕಾರಿ ಪ್ರೌಢ ಶಾಲೆ ಮಂಚಿ
ಕೊಳ್ಳಾಡು , ಬಂಟ್ಟಾಳ
ಸ್ವಚ್ಛ ಪರಿಸರ
ಮಾಡೋಣ ಮಾಡೋಣ
ಪರಿಸರವನ್ನು ಸ್ವಚ್ಛ ಮಾಡೋಣ.
ಹೆಕ್ಕೋಣ ಹೆಕ್ಕೋಣ
ಬಿದ್ದ ಕಸವನ್ನು ಹೆಕ್ಕೋಣ .
ಬಿಡದೆ ಕಸವನ್ನು ತೊಟ್ಟಿಗೆ ಹಾಕಿ
ಕಸವಾಗುವುದನ್ನು ನಿಲ್ಲಿಸೋಣ ...
ಜನ- ಜನರಿಗೆ ಜಾಗೃತಿ ಮೂಡಿಸಿ
ಅರಿತು ತಿಳಿ ಹೇಳೋಣ
ಎಲ್ಲಾರು ಒಂದಾಗಿ ಕೈ ಜೋಡಿಸಿ
ನಮ್ಮ ದೇಶವನ್ನು ಸ್ವಚ್ಛ ಮಾಡೋಣ
ಮಾಡೋಣ ಮಾಡೋಣ
ಸ್ವಚ್ಛ ಪರಿಸರವನ್ನು ಬೆಳೆಸೋಣ
ಆರೋಗ್ಯವನ್ನು ವೃದ್ಧಿಸೋಣ
ನೆಮ್ಮದಿಯ ನಾಳೆಗೆ
ಕಾರಣರಾಗೋಣ !
ಅಮ್ಮನ ಪ್ರೀತಿ
ಅಮ್ಮ ಎಂದರೆ ಪ್ರೀತಿ
ಅವಳು ಕಲಿಸುವಳು ನೀತಿ
ಅಮ್ಮ ನೀಡುತ್ತಾಳೆ ಮಮತೆ
ಅವಳೇ ನನ್ನ ಜೀವದಾತೆ
ಅಮ್ಮನ ಒಡಲು
ಸದಾ ತುಂಬಿದ ಪ್ರೀತಿಯ ಕಡಲು
ಅಮ್ಮನ ಒಲುಮೆ
ಪ್ರೀತಿಯ ಚಿಲುಮೆ
ಶಾಲೆ
ಶಾಲೆ ಒಂದು ದೇವಾಲಯ
ಅದುವೇ ನಮ್ಮ ಜ್ಞಾನಾಲಯ
ಪಾಠ ಕಲಿಸುವ ಗುರುಗಳು
ನಮ್ಮ ಪಾಲಿನ ದೇವರುಗಳು
ಅವರು ಕಲಿಸುವ ಹಾದಿ
ನಮ್ಮ ಜೀವನದ ಬುನಾದಿ
ಅನುಲಕ್ಷ್ಮಿ 9ನೇ ತರಗತಿ
ಸರಕಾರಿ ಪ್ರೌಢ ಶಾಲೆ, ಮಂಚಿ
ಕೊಳ್ನಾಡು , ಬಂಟ್ಟಾಳ.