-->
ನನ್ನ ಕನಸು - ಕವನ

ನನ್ನ ಕನಸು - ಕವನ

ಪ್ರವಿಟಾ ಡಿ'ಸೋಜ
7ನೇ ತರಗತಿ
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ 
ಕಾಡುಮಠ ಬಂಟ್ವಾಳ ತಾಲೂಕು

 ನನ್ನ ಕನಸು - ಕವನ

ಹೊಸ ವರುಷವೆ ಬರುತಿದೆ 
ಸಂತಸವನೆ ತರುತಿದೆ
ಹಳೆಯ ನೋವು ಎಲ್ಲ ಮರೆತು 
ಹೊಸ ಜೀವನಕೆ ಮನಸು ಕಾದಿದೆ ||
             ಜೀವನದ ಈ ಸಮಯದಿ
             ಎಲ್ಲರೊಳಗೊಂದಾಗುತಾ
             ಭೇದ ಮರೆತು ಎಲ್ಲ ಸೇರಿ
              ಸಮರಸದ ಜೀವನದಿ ಸಾಗುವಾ || ಗಿಡಮರಗಳನ್ನು ಬೆಳೆಸಿ 
ಪರಿಸರ ಸ್ವಚ್ಛಗೊಳಿಸಿ
ಶುದ್ಧಗಾಳಿ ಪೌಷ್ಟಿಕಾಂಶ
ಸೇವಿಸುತ ಸದೃಢರಾಗಿ ಬಾಳುವಾ ||
           ಹೊಸ ವಿಷಯಗಳ ಕಲಿಯುತಾ 
           ಹೊಸ ಜ್ಞಾನವನೆ ಪಡೆಯುವಾ 
           ನಮ್ಮ ಕನಸು ನನಸು ಆಗಿ
           ಹೊಸ ಸಾಧನೆಯಲಿ ಮುಂದೆ ಸಾಗುವಾ||

ಪ್ರವಿಟಾ ಡಿ'ಸೋಜ
7ನೇ ತರಗತಿ
ದ.ಕ.ಜಿಲ್ಲಾ.ಪಂಚಾಯತ್.ಹಿ.ಪ್ರಾ.ಶಾಲೆ 
ಕಾಡುಮಠ  ಬಂಟ್ವಾಳ ತಾಲೂಕು

Ads on article

Advertise in articles 1

advertising articles 2

Advertise under the article