-->
ಹೀಗೊಂದು ಕನಸು - ಕವನ

ಹೀಗೊಂದು ಕನಸು - ಕವನ

                         ಕೃಪಾ . ಕೆ. 7 ನೇ ತರಗತಿ
                        ದ ಕ .ಜಿ.ಪಂ. ಹಿ.ಪ್ರಾ ಶಾಲೆ
                        ವೀರಮಂಗಲ . ಪುತ್ತೂರು 

  ಹೀಗೊಂದು ಕನಸು

ಎರಡು ಸಾವಿರದ ಇಪ್ಪತ್ತ ಒಂದು
ತೆರೆಯಿತು ಕನಸಿನ ರೆಕ್ಕೆಯೊಂದು
ಬಿದ್ದಿತು ಮೊಗದಲಿ ಕಿರುನಗೆಯೊಂದು
ಹಿಗ್ಗಿತು ಮನದಲಿ ಖುಷಿಯೊಂದು !

ಬಣ್ಣ ಬಣ್ಣದ ಕನಸ ಹೊತ್ತು
ಹೊಸ ವರುಷಕೆ ಕಾಲನು ಇಟ್ಟು 
ಕನಸೆಲ್ಲ ನನಸು ಮಾಡುತ
ಹೊರಟೆನು ಪಯಣದ ಸುಖದಲ್ಲಿ !

ಚಂದ್ರನಂತೆ ಹೊಳೆಯುತಲಿ
ನಕ್ಷತ್ರದಂತೆ ಮಿನುಗುತಲಿ 
ಓದುವುದರಲಿ ಸಾಧನೆಗೈದು
ಗುರಿ ಮುಟ್ಟುವೆ ಹಾರಿ ನೆಗೆದು !

ನಡೆವ ದಾರಿಯಲಿ ಕಷ್ಟವ ಎದುರಿಸಿ
ಮುಟ್ಟುವೆ ಗುರಿಯನು ಮುಗುಳುನಗೆಯಲಿ
ಮೊಗದಲಿ ಕಿರು ನಗೆಯೊಂದನು ಬೀರುತ
ಹೊಸ ವರುಷಕೆ ಶುಭಾಶಯ ಕೋರುವೆನು.
                          ಕೃಪಾ . ಕೆ. 7 ನೇ ತರಗತಿ
                        ದ ಕ .ಜಿ.ಪಂ. ಹಿ.ಪ್ರಾ ಶಾಲೆ
                          ವೀರಮಂಗಲ . ಪುತ್ತೂರು 

Ads on article

Advertise in articles 1

advertising articles 2

Advertise under the article